ಗುಲ್ಬರ್ಗಾ

ರಾಮಕಥೆ ಸಪ್ತಾಹ ವಿರೋಧ; ಇಂದು ಪ್ರತಿಭಟನೆ

Published On :

ಗುಲ್ಬರ್ಗ: ನಗರದಲ್ಲಿನ ರಾಮಕಥಾ ಸಪ್ತಾಹವನ್ನು ಸೌಹಾರ್ದ ಚಿಂತನಾ ವೇದಿಕೆಯು ವಿರೋಧಿಸಿದೆ. ಶರಣರ ವಚನಗಳ ಚಳವಳಿ- ಅಂಬೇಡ್ಕರ್ ವಿಚಾರಧಾರೆಯಿಂದ ಪ್ರಭಾವಿತವಾಗಿರುವ ಈ ನಾಡನ್ನು ಹನುಮನು ಉದಿಸಿದ ನಾಡೆಂದು ಹೇಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಸಾಮರಸ್ಯದ ಈ ನಾಡಲ್ಲಿ ಫ್ಯಾಸ್ಸಿಸ್ಟ್ ಸಂಸ್ಕೃತಿ ಬೆಳೆಸುತ್ತವೆ ಎಂದಿರುವ ವೇದಿಕೆಯ ಸದಸ್ಯರು, ಇದೇ ಕಾರಣಕ್ಕಾಗಿ ಮಾ.22ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ರಾಮಕಥೆಯ ರೂವಾರಿ ರಾಘವೇಶ್ವರ ಭಾರತೀ ಸ್ವಾಮೀಜಿ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ವೇದಿಕೆ ಪತ್ರಿಕಾ ಪ್ರಕಟಣೆ ನೀಡಿದೆ. ನಗರದಲ್ಲಿನ ರಾಮಕಥೆ ಸಪ್ತಾಹ ವಿರೋಧಿಸಿ ಕನ್ನಡ ಭವನದಲ್ಲಿ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಶಿವಶರಣಪ್ಪ ಕಲಬುರ್ಗಿ, ಸೋಮಣ್ಣ ನಡಕಟ್ಟಿ, ಡಿ.ಬಿ. ಪಾಟಿಲ, ದತ್ತಾತ್ರೇಯ ಇಕ್ಕಳಕಿ, ಬಿ.ವಿ.ಚಕ್ರವರ್ತಿ, ಡಾ. ವಿಲಾಸವತಿ ಖೂಬಾ, ಸನತಕುಮಾರ ಬೆಳಗಲಿ, ಆರ್.ಕೆ. ಹುಡಗಿ, ಸಿದ್ರಾಮಪ್ಪ ಬಾಲಪ್ಪಗೋಳ, ಸಂಬಣ್ಣ ಹೊಳಕುಂದೆ, ಪ್ರಭು ಖಾನಾಪುರೆ, ಕಾಶಿನಾಥ ಅಂಬಲಗಿ, ರಾಜಶೇಖರ ಮಾಂಗ್, ವಿಠಲ್ ಚಿಕಣಿ, ಮೀನಾಕ್ಷಿ ಬಾಳಿ, ನೀಲಾ ಕೆ., ಜಯಶ್ರೀ ಗೋಖಲೆ, ಶ್ರೀಶೈಲ ಘೂಳಿ, ಸಂತೋಷ ಮೇಲಮನಿ, ಶರಣಬಸಪ್ಪ ಕಲ್ಲಾ, ಮುಂತಾದವರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.