ಪರೀಕ್ಷಾ ಸಮಯ ನಿರಂತರ ಅಧ್ಯಯನ ಒಳಿತಲ್ಲ: ನಾಯಕ
ಯಾದಗಿರಿ: ಪರೀಕ್ಷಾ ಸಮಯದಲ್ಲಿ ಅತಿ ಹೆಚ್ಚಿನ ಅಂಕಗಳಿಗಾಗಿ ಹಗಲು ರಾತ್ರಿ ಅಭ್ಯಾಸದಲ್ಲಿ ತೊಡಗಬಾರದು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದೆಗೆಟ್ಟು ಪರೀಕ್ಷೆಯಲ್ಲಿ ತೊಂದರೆಯಾಗುತ್ತದೆ. ಈಗಾಗಲೇ ಓದಿದ ವಿಷಯದ ಬಗ್ಗೆ ಮಾತ್ರ ಮನನ ಮಾಡಿಕೊಳ್ಳಬೇಕೆಂದು ವಿದ್ಯಾವರ್ಧಕ ಪ್ರೌಢಶಾಲೆ ಮುಖ್ಯಾಧ್ಯಾಪಕ ಲಿಂಗಾರಡ್ಡಿ ನಾಯಕ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ತಾಲೂಕಿನ ಸೈದಾಪುರದ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಭಾವಂತರಿಗೆ ಸಾಕಷ್ಟು ಅವಕಾಶ: ಪ್ರತಿಭಾವಂತರಿಗೆ ಸಾಕಷ್ಟು ಅವಕಾಶಗಳಿವೆ. ಕೆಲ ಕಾಲೇಜುಗಳಲ್ಲಿ ಮುಂದಿನ ಅಭ್ಯಾಸಕ್ಕಾಗಿ ಉಚಿತ ಅವಕಾಶ ನೀಡಲಾಗುತ್ತಿದೆ. ಅದರ ಸದೋಪಯೋಗವನ್ನು ಗ್ರಾಮೀಣ ಭಾಗದ ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಥಿತಿಗಳಾಗಿ ಆಗಮಿಸಿದ್ದ ಡಿಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಎಸ್ಸೆಸ್ಸೆಲ್ಸಿ ನಂತರದ ಅಭ್ಯಾಸವನ್ನು ನಾವು ನಮ್ಮ ಸಾಮರ್ಥ್ಯದೊಂದಿಗೆ ಆಯ್ಕೆ ಮಾಡಿಕೊಳ್ಳಬೇಕು. ಮತ್ತೊಬ್ಬರ ಅನುಕರಣೆ ಮಾಡಬಾರದು. ಇದರಿಂದ ಯಶಸ್ಸು ಸಾಧಿಸದೇ ಸಮಯ ಹಾಗೂ ಬಂಡವಾಳ ವ್ಯರ್ಥವಾಗುತ್ತದೆ. ಈ ದಿಸೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ಜಾಗರೂಕತೆ ವಹಿಸಬೇಕು. ಪರೀಕ್ಷೆಯನ್ನು ನಾವು ಸಕಾರಾತ್ಮಕ ಭಾವದಿಂದ ಎದುರಿಸಬೇಕೆಂದು ಹೇಳಿದರು.
ಪರಿಶ್ರಮದಿಂದ ಉತ್ತಮ ಸಾಧನೆ: ಗಣಿತ ಶಿಕ್ಷಕ ಕಾಶಿನಾಥ ಮಾತನಾಡಿ, ಕಷ್ಟದಿಂದ ಮಾತ್ರ ಸುಖಜೀವನ ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಪರಿಶ್ರಮದೊಂದಿಗೆ ಉತ್ತಮ ಸಾಧನೆ ಮಾಡಬೇಕು ಎಂದರು. ಶಿಕ್ಷಕರಾದ ಶರಣಪ್ಪ ಸಾತನೂರಕರ, ವಿಜಯ, ವಿದ್ಯಾರ್ಥಿಗಳು ಮಾತನಾಡಿದರು. ಜೆ.ಎಸ್. ಗುರುನಂಜಿ, ಗೂಳಪ್ಪ ಮಲ್ಹಾರ, ರಾಜಶೇಖರ ಪಾಟೀಲ, ರಾಚಯ್ಯ, ಶಂಕ್ರಪ್ಪ ಪೂಜಾರ, ವಿಶ್ವನಾಥ ಕಣೇಕಲ್, ಸತೀಶ ಹಾಜರಿದ್ದರು. ಸುಪ್ರೀಯ ಸ್ವಾಗತಗೀತೆ ಹಾಡಿದರು. ಆಕಾಶ ಸ್ವಾಗತಿಸಿದರು. ತಾಯಪ್ಪ ನಿರೂಪಿಸಿದರು. ನಾಗೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

