ಗುಲ್ಬರ್ಗಾ

ಎಸ್‌ಬಿಐನಿಂದ ಆ್ಯಂಬುಲನ್ಸ್ ಕೊಡುಗೆ

Published On :

ಕನ್ನಡಪ್ರಭ ವಾರ್ತೆಗುಲ್ಬರ್ಗಮಾ.23
ಗ್ರಾಮೀಣ ಪ್ರದೇಶದ ಬಡ ಜನತೆಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಇಲ್ಲಿನ ವಿಶ್ವ ಸೇವಾ ಮಿಷನ್ ಸಂಸ್ಥೆಗೆ ಆ್ಯಂಬುಲನ್ಸ್ ಕೊಡುಗೆಯಾಗಿ ನೀಡಿದೆ.
ನಗರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹರಾ ಅವರು ಆ್ಯಂಬುಲನ್ಸ್ ಬೀಗವನ್ನು ವಿಶ್ವ ಸೇವಾ ಮಿಷನ್ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿಗೆ ಹಸ್ತಾಂತರಿಸಿ, ಚಾಲನೆ ನೀಡಿದರು.
ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹರಾ ಮಾತನಾಡಿ, ಬ್ಯಾಂಕ್‌ನವರು ಸಂಸ್ಥೆಯಿಂದ ಹೊರಬಂದು ಸಮಾಜ ಸೇವೆ ಮಾಡಲು ಆಗಲ್ಲ. ಎಸ್‌ಬಿಐ ವತಿಯಿಂದ ಜನಸೇವೆ ಮಾಡುವ ಉದ್ದೇಶದಿಂದಲೇ ವಿಶ್ವ ಸೇವಾ ಮಿಷನ್‌ಗೆ ಆ್ಯಂಬ್ಯುಲೆನ್ಸ್ ನೀಡಿ, ಆ ಸಂಸ್ಥೆ ಮೂಲಕ ಗ್ರಾಮೀಣ ಜನರ, ಬಡವರು, ರೈತರಿಗೆ ಉಚಿತ ಆರೋಗ್ಯ ಸೇವೆ ಮಾಡುವುದು ಬ್ಯಾಂಕ್ ಉದ್ದೇಶ ಎಂದರು.
ಸಂಸ್ಥೆ ಅಧ್ಯಕ್ಷ ವಿಶ್ವನಾಥ ಸ್ವಾಮಿ ಮಾತನಾಡಿ, ಎಸ್‌ಬಿಐ ಬ್ಯಾಂಕ್‌ನಿಂದ ಆ್ಯಂಬ್ಯುಲೆನ್ಸ್ ವಾಹನ ನೀಡಿರುವುದರಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಹಳ್ಳಿಗರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಜನರಲ್ ಮ್ಯಾನೇಜರ್ ಕೆ.ಎಂ. ತ್ರಿವೇದಿ, ಗುಲ್ಬರ್ಗ ವಿಭಾಗೀಯ ವ್ಯವಸ್ಥಾಪಕ ರಮೇಶ ಹೆಗಡೆ, ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ, ವಿಶ್ವ ಸೇವಾ ಮಿಷನ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಸ್‌ಬಿಐ ಸೂಪರ್ ಮಾರ್ಕೆಟ್ ಶಾಖೆಯ ಸಹಾಯಕ ಮಹಾ ವ್ಯವಸ್ಥಾಪಕ ಸುಧಾಕರ್ ಕುಳಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಲೀಡ್ ವ್ಯವಸ್ಥಾಪಕ ಶಂಕ್ರಪ್ಪ ಬಾಣಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.