ಬಿರಾದಾರಗೆ ಕನ್ನಡನಾಡು ಸಾಹಿತ್ಯ ಶ್ರೀ
ಕನ್ನಡಪ್ರಭ ವಾರ್ತೆಗುಲ್ಬರ್ಗಮಾ.23
ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು 2011ನೇ ಸಾಲಿಗಾಗಿ ಸಂಘದಿಂದ ನೀಡುವ ಪ್ರಶಸ್ತಿಗಳನ್ನು ಘೋಷಿಸಿದೆ.
ಜೀವಮಾನದ ಸಾಧನೆಗಾಗಿ ಗುಲ್ಬರ್ಗ ವಿಭಾಗದ ಲೇಖಕರಿಗೆ ನೀಡಲಾಗುವ ಕನ್ನಡನಾಡು ಸಾಹಿತ್ಯ ಶ್ರೀ ಪ್ರಶಸ್ತಿಗೆ ವಿಶ್ರಾಂತ ಪ್ರಾಧ್ಯಾಪಕ, ಖ್ಯಾತ ಸಾಹಿತಿ, ಡಾ. ಮ.ಗು. ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 10 ಸಾವಿರ ನಗದು, ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಪ್ರೊ. ಎಸ್.ಜಿ. ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಡಾ. ಪ್ರಭು ಖಾನಾಪುರೆ ಅವರ ಪ್ರಣತಿ ಕವನ ಸಂಕಲನ, ಯಶೋಧರಮ್ಮ ಸಿದಬಟ್ಟೆ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಡಾ. ಸ್ವಾಮಿರಾವ ಕುಲಕರ್ಣಿ ಅವರ ದೆವ್ವನಬಾವಿ ಕಾದಂಬರಿ, ಬಸವಮ್ಮ ತುಳಜಪ್ಪ ಉಪಳಾವಂಕರ್ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಡಾ. ಬಸವರಾಜ ಸಬರದ ಅವರ ಶರಣ ದಾಂಪತ್ಯ ಹಾಗೂ ಡಾ. ವಿ.ಜಿ. ಪೂಜಾರ ಅವರ ಸಾಹಿತ್ಯಾನುಶೀಲನ ಕೃತಿಗಳು ಆಯ್ಕೆಯಾಗಿದೆ.
ಈ ಕೃತಿಗಳಿಗೆ 5 ಸಾವಿರ ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಸಂಘದಿಂದ ಈ ವರ್ಷ ಪ್ರಶಸ್ತಿಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಮಾ.29ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಡಾ. ನಾಗಾಬಾಯಿ ಬುಳ್ಳಾ, ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಹಾಗೂ ಉಪಾಧ್ಯಕ್ಷ ಡಾ. ಡಿ.ಬಿ. ನಾಯಕ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

