'ಪಕ್ಷಭೇದ ಮರೆತು ಅಭಿವೃದ್ಧಿಗೆ ಶ್ರಮಿಸಿ'
ಕನ್ನಡಪ್ರಭ ವಾರ್ತೆ ಚಿತ್ತಾಪುರ ಮಾ.24
ಪಟ್ಟಣದ ಅಭಿವೃದ್ಧಿಗೆ ಪುರಸಭೆಯ ನೂತನ ಸದಸ್ಯರು ಪಕ್ಷಭೇದ ಮರೆತು ಶ್ರಮಿಸಬೇಕು ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ನುಡಿದರು.
ಶನಿವಾರ ರಾತ್ರಿ ರವಿ ಸಿಮೆಂಟ್ ಏಜೆನ್ಸಿ ಹಮ್ಮಿಕೊಂಡ 17ನೇ ವಾರ್ಷಿಕೋತ್ಸವ ಹಾಗೂ ಪುರಸಭೆಯ ನೂತನ ಸರ್ವ ಸದಸ್ಯರಿಗೆ ಸನ್ಮಾನ ಮತ್ತು ಗ್ರಾಹಕರ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ಹಾಗೂ ಗ್ರಾಹಕರು ಸಿಮೆಂಟ್ ಉದ್ಯೋಗಕ್ಕೆ ಜೀವಾಳ. ಗುಣಮಟ್ಟದ ಮನೆ ಕಟ್ಟುವ ಕೆಲಸ ಗ್ರಾಹಕರು ಮಾಡಬೇಕೆಂದು ಅವರು ಹೇಳಿದರು. ಎಸಿಸಿ ಸಂಪರ್ಕ ಅಧಿಕಾರಿ ರಮಾಕಾಂತ ಕುಲಕರ್ಣಿ ಮಾತನಾಡಿ, ದಕ್ಷಿಣ ಏಷಿಯಾದಲ್ಲಿ ಹಾಗೂ 20 ದೇಶಗಳಲ್ಲಿ ಎಸಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಶಾಸಕ ವಾಲ್ಮೀಕಿ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಅವಂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಧ್ಯಕ್ಷತೆ ವಹಿಸಿದ್ದ ಏಜೆನ್ಸಿ ಮಾಲಿಕ ರವಿ ಪಾಟೀಲ್ ಸೇಡಂ ಮಾತನಾಡಿದರು.
ಆಕಾಶವಾಣಿ ಕಲಾವಿದ ಅಮೃತೇಶ ಕಲ್ಲಶೆಟ್ಟಿ ಹಾಸ್ಯ ಕಾರ್ಯಕ್ರಮ ನಡೆಸಿ ರಂಜಿಸಿದರು. ಪುರಸಭೆಯ ನೂತನ ಸವ ಸದಸ್ಯರಿಗೆ ಸನ್ಮಾನಿಸಲಾಯಿತು.
ತೆಂಗಳಿಯ ಮಲ್ಲಿಕಾರ್ಜುನ ಸ್ವಾಮಿ, ತಾಪಂ ಅಧ್ಯಕ್ಷ ಶರಣಗೌಡ ಪಾಟೀಲ್, ಕೆಜೆಪಿ ಸಂಚಾಲಕ ರವೀಂದ್ರ ಸಜ್ಜನಶೆಟ್ಟಿ, ಗೋಪಾಲ ರಾಠೋಡ, ಅಕ್ಕನ ಬಳಗದ ಅಧ್ಯಕ್ಷೆ ವೆಂಕಟಮ್ಮ ಪಾಲಪ, ನಂದಕಿಶೋರ ಜಾಹಾಗಿರದಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

