ಗುಲ್ಬರ್ಗಾ

ಕೈಗಾರಿಕೆಗೆ ಭೂಮಿ ನೀಡಿದ ರೈತರ ಪರದಾಟ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.25
ತಾಲೂಕಿನ ಗಡಿಭಾಗದ ಕಡೇಚೂರು ಗ್ರಾಮದಲ್ಲಿ ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದ್ದು, 3,300 ಎಕರೆ ಭೂ ಸ್ವಾಧೀನ ಮಾಡಿಕೊಂಡಿದೆ. ಆದರೆ ಬಾಡಿಯಾಳ ಹಾಗೂ ಶೆಟ್ಟಿಹಳ್ಳಿ ಗ್ರಾಮದ ರೈತರು ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಿದ್ದು, ಪರಿಹಾರ ಪಡೆಯಲು ಪರದಾಡುತ್ತಿದ್ದಾರೆ.
  ಕೈಗಾರಿಕೆ ಸ್ಥಾಪನೆ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಎಕರೆಗೆ 6 ಲಕ್ಷ ಪರಿಹಾರ ನಿಗದಿಪಡಿಸಿದೆ. ಕೆಐಎಡಿಬಿ ರೈತರ 3,300 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದೆ. ಆದರೆ ಪರಿಹಾರ ಮೊತ್ತದ ಚೆಕ್ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬುದು ರೈತರ ಆರೋಪ.
ಅಲೆದಿದ್ದೇ ಬಂತು, ಪ್ರಯೋಜನವಾಗಿಲ್ಲ: ಕಳೆದ 8 ತಿಂಗಳ ಹಿಂದೆಯೇ ಭೂಸ್ವಾಧಿನ ಪ್ರಕ್ರಿಯೆ ಮುಗಿದೆ. ಅಧಿಕಾರಿಗಳು ತಿಳಿಸಿದ ಎಲ್ಲ ಜಮೀನಿನ ಮೂಲ ದಾಖಲಾತಿಗಳನ್ನು ರೈತರು ಚಾಚೂ ತಪ್ಪದೆ ಅಧಿಕಾರಿಗಳಿಗೆ ನೀಡಿ ಪರಿಹಾರ ಮೊತ್ತಕ್ಕಾಗಿ ಗಡಿಭಾಗದಿಂದ ಗುಲ್ಬರ್ಗದ ಕೆಐಎಡಿಬಿ ವಿಭಾಗೀಯ ಕಚೇರಿಗೆ ನೂರಾರು ಬಾರಿ ಅಲೆದಾಡಿದ್ದಾರೆ. ಆದರೆ ಇದುವರೆಗೆ ಪರಿಹಾರ ಸಿಗದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
  ಈ ಕುರಿತು ತಮ್ಮ ನೋವನ್ನು ತೋಡಿಕೊಂಡ ರೈತರು, ಮೊದಲು ನಾವು ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಲು ಹಿಂದೇಟು ಹಾಕಿದ್ದೆವು. ಅದಕ್ಕೆ ಕಾರಣ ನಮ್ಮ ಜಮೀನಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಆದರೂ ಪ್ರಗತಿಗಾಗಿ ಭೂಮಿ ನೀಡಿದೆವು. ವಿಭಾಗಿಯ ಕಚೇರಿಯಲ್ಲಿ ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಕೊರತೆಯಿದೆ, ಸಂಬಂಧಪಟ್ಟ ಕಾಗದ ಪತ್ರಗಳು ನೀಡಿಲ್ಲ ಎಂದು ವಿನಾಕಾರಣ ಅಲೆದಾಡಿಸುತ್ತಿದ್ದಾರೆಂದು ಕಡೇಚೂರ ಗ್ರಾಮದ ರೈತರಾದ ಸೂಗೂರಪ್ಪ ಸಾಹುಕಾರ, ವೆಂಕಟರಡ್ಡಿ ಪಾಟೀಲ್ ಇತರರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.