ಇಂದು ನೇರ ಫೋನ್-ಇನ್
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರವು ಮಾ.27ರಂದು ಸಂಜೆ 5.30 ಗಂಟೆಯಿಂದ 6ರವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗಾಗಿ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಜೈವಿಕ ಕೀಟನಾಶಕಗಳಿಂದ ಕೀಟ ನಿಯಂತ್ರಣ ಕುರಿತು ತಜ್ಞ ಡಾ. ಬಸವರಾಜ ಕಲ್ಮಟ್ ಅವರು ಮಾಹಿತಿ ನೀಡಲಿದ್ದಾರೆ. ರಾಘವೇಂದ್ರ ಎಲಿಗಾರ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದು, ಕೆ.ಆರ್. ಶ್ರೀನಿವಾಸ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಲು ದೂ. 08472- 220491, 220492 ಸಂಪರ್ಕಿಸಬಹುದು.
ನಾಳೆಯಿಂದ ಸತ್ಸಂಗ ಕಾರ್ಯಕ್ರಮ
ಗುಲ್ಬರ್ಗ: ನಗರದ ರೋಟರಿ ಕ್ಲಬ್ ಮೈದಾನದಲ್ಲಿ ಮಾ. 28ರಿಂದ 31 ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಯೋಗ ವೇದಾಂತ ಸಮತಿ ವತಿಯಿಂದ ಗೀತಾ ಭಾಗವತಾ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಶಾ ರಾಮಜಿ ಬಾಪೂಜಿ ಅವರ ಶಿಷ್ಯ ಸಾದ್ವಿ ಲೀನಾ ಸಹೋದರಿಯವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗೆ 9741169575ಗೆ ಸಂಪರ್ಕಿಸಲು ಕೋರಲಾಗಿದೆ.
'ಗಂಡಂದಿರ' ಕಾಟ ತಪ್ಪಿಸಿ: ದೇವಕರ್
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರಸಭೆಯಲ್ಲಿ ಮಹಿಳೆ ಸದಸ್ಯರಿದ್ದು, ಅವರಿಗೆ ಅಧಿಕಾರಿ ನಡೆಸಲು ಅವಕಾಶ ನೀಡದೆ ಅವರ ಗಂಡಂದಿರು ಅಧಿಕಾರ ನಡೆಸುತ್ತಿದ್ದಾರೆ. ಕೂಡಲೇ ನಗರಸಭೆಗೆ ಮಹಿಳಾ ಸದಸ್ಯರ ಗಂಡಂದಿರ ಕಾಟ ತಪ್ಪಿಸಲು ಜಿಲ್ಲಾಧಿಕಾರಿ ಆದೇಶಿಸಬೇಕೆಂದು ಬಿಜೆಪಿ ಮುಖಂಡ ಯಂಕಣ್ಣ ದೇವಕರ್ ಆಗ್ರಹಿಸಿದ್ದಾರೆ.
ಪ್ರತಿಭಾ ಪರೀಕ್ಷೆ; ಅಗ್ರ ಶ್ರೇಣಿ
ಗುಲ್ಬರ್ಗ: ದಾವಣಗೆರೆಯ ಪ್ರತಿಭಾ ವಿಜ್ಞಾನ ಐಸಿಇಟಿಸಿ 2012-13ನೇ ಸಾಲಿನಲ್ಲಿ ಸಂಘಟಿಸಿದ್ದ ಅಂತಾರಾಷ್ಟ್ರೀಯ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ನಗರದ ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲಿನ 4ನೇ ತರಗತಿ ವಿದ್ಯಾರ್ಥಿ ಅಕ್ಷಯ ರಾಘವೇಂದ್ರ ಶರ್ಮಾ ನರಿಬೋಳ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ಜಯ ಕರ್ನಾಟಕ ಸಂಘಟನೆಗೆ ನೇಮಕ
ಚಿಂಚೋಳಿ: ತಾಲೂಕಿನ ಕೋಡ್ಲಿ ವಲಯದ ಜಯ ಕರ್ನಾಟಕ ಅಧ್ಯಕ್ಷರನ್ನಾಗಿ ನಾಗರಾಜ ಎಸ್. ವಿಂಬಡಶೆಟ್ಟಿ ಹಲಚೇರಾ, ಕಾರ್ಯದರ್ಶಿಯಾಗಿ ಶಿವಕುಮಾರ ಹೊಸಮನಿ ಅವರನ್ನು ನೇಮಕಗೊಳಿಸಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಆದೇಶ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

