ಗುಲ್ಬರ್ಗಾ

ಧರ್ಮ ರಕ್ಷಣೆಯಲ್ಲಿ ಜಂಗಮರು ಪ್ರಮುಖರು

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.31
ದೇಶ ರಕ್ಷಿಸುವ ಸೈನಿಕನಂತೆ ಧರ್ಮ ಕಟ್ಟುವ ಹಾಗೂ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವೀರಮಹೇಶ್ವರರ (ಜಂಗಮ) ಪಾತ್ರ ಪ್ರಮುಖವಾಗಿದೆ ಎಂದು ಹೊನ್ನಕಿರಣಗಿ ರಾಚೋಟೇಶ್ವರ ಮಠದ ಚಂದ್ರದುಂಡ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಮಹೇಶ್ವರ(ಜಂಗಮ) ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜನರ ಹಿತವನ್ನು ಬಯಸುವವನೇ ನಿಜವಾದ ಜಂಗಮ. ಹಿಂದಿನ ಕಾಲದಿಂದಲೂ ಯಾವುದೇ ಫಲಾಪೇಕ್ಷೆಗಳಿಲ್ಲದೆ ಜಂಗಮ ತನ್ನ ಧರ್ಮವನ್ನು ಕಾಪಾಡಿಕೊಂಡು ಬಂದಿದ್ದು, ಆಮಿಷಕ್ಕೆ ಬಲಿಯಾಗದೆ ಸತ್ಯಪೂರ್ಣ ಧಾರ್ಮಿಕ ಸಂಸ್ಕೃತಿ ಉತ್ಕೃಷ್ಟಗೊಳ್ಳಲು ಶ್ರಮಿಸಬೇಕೆಂದರು.
ಶಹಾಪುರ ಚರಬಸವೇಶ್ವರ ಪ್ರೌಢಶಾಲೆಯ ಮುಖ್ಯಗುರು ಗುರುಬಸಯ್ಯಸ್ವಾಮಿ ಗದ್ದುಗೆಮಠ ಉಪನ್ಯಾಸ ನೀಡಿದರು.
ಆದರ್ಶ ಮೌಲ್ಯಗಳಿಗೆ ಆದ್ಯತೆ ನೀಡಿ: ಗುಲ್ಬರ್ಗ ಮಾನವ ಧರ್ಮ ಸಂಸ್ಥೆ ಹಾಗೂ ಕೊಲ್ಲಿಪಾಕಿ ಟ್ರಸ್ಟ್ ಅಧ್ಯಕ್ಷ ಎಚ್.ವೀರಭದ್ರಯ್ಯಸ್ವಾಮಿ, ವೀರಶೈವ ಮುಖಂಡ ಜಿ.ವಿ. ಮಠ ವೀರಭದ್ರಯ್ಯಸ್ವಾಮಿ ಮಳಭಗಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ: Ú ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಚೋಟಿಸ್ವಾಮಿ ಯಣ್ಣಿ ಇವರಿಗೆ ಜಿಲ್ಲಾ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ಮಹೇಶಕುಮಾರ ಸ್ವಾಗತಿಸಿದರು. ಜ್ಯೋತಿ ತಳಬಿಡಿಮಠ ನಿರೂಪಿಸಿದರು. ನಾಗೇಶ್ವರಸ್ವಾಮಿ ವಂದಿಸಿದರು.
ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕರ್, ವಿ.ಸಿ. ರೆಡ್ಡಿ, ಬಿ.ಬಿ.ಸ್ವಾಮಿ ಗುರುಮಠಕಲ್, ಕೊಟ್ರೇಶ್ವರ ಹಿರೇಮಠ, ಚೆನ್ನಬಸಯ್ಯ ದಂಡಗಿಮಠ, ಶಶಿಕಾಂತ ಕಶೆಟ್ಟಿ, ವೀಭದ್ರಯ್ಯಸ್ವಾಮಿ ಜಾಕಾಮಠ, ಚಂದ್ರಶೇಖರಸ್ವಾಮಿ ವಡಗೇರಿ, ಸೂಗಪ್ಪ ಪಾಟೀಲ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.