ಗುಲ್ಬರ್ಗಾ

ಆಳಂದಕ್ಕೆ ಹೆಚ್ಚಿನ ನಿಗಾ ಕೊಡ್ರಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 4
ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ಮುಕ್ತ- ನ್ಯಾಯಸಮ್ಮತ ಮತದಾನಕ್ಕೆ ಸರ್ವ ಕ್ರಮಗಳನ್ನು ಕೈಗೊಳ್ಳಬೇಕೆಂದು ಜೆಡಿಎಸ್ ಅಭ್ಯರ್ಥಿ ಸುಭಾಸ ಗುತ್ತೇದಾರ್ ಆಗ್ರಹಿಸಿದ್ದಾರೆ. ಈ ಕುರಿತಂತೆ ಜಿಲ್ಲಾ ಎಸ್ಪಿ ಸತೀಶ ಕುಮಾರ್ ಅವರಿಗೆ ಭೇಟಿ ಮಾಡಿ ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಡಸಾವಳಗಿ- ಚಿಂಚೋಳಿ(ಕೆ) ಮಧ್ಯೆ ಸಂಭವಿಸಿರುವ ಹಲ್ಲೆ ಪ್ರಕರಣದ ಹಿಂದೆ ಬಿ.ಆರ್. ಪಾಟೀಲರ ಕೈವಾಡವಿದೆ. ಈ ಪ್ರದೇಶದಲ್ಲಿ ಬಿಆರ್ ಬೆಂಬಲಿಗರು ಗುಂಪಾಗಿ ತಮ್ಮ ಮೇಲೆಯೇ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ಹೆಬಳಿ, ಚಿಂಚೋಳಿ(ಕೆ), ಪಡಸಾವಳಗಿ ಸೀಮೆಯಲ್ಲಿ ಸಂಚರಿಸುತ್ತಿದ್ದಾಗ ವಾಹನಗಳಲ್ಲಿ ಗುಂಪಾಗಿ ಬಂದ ಬಿಆರ್ಪಿ ಬೆಂಬಲಿಗರು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಭಯದ ವಾತಾವರಣ ಉಂಟು ಮಾಡಿದ್ದಾರೆ. ಅವರ ವಾಹನಗಳಲ್ಲೇ ಬಡಿಗೆಗಳು ಇವೆ. ಇಂತಹ ವಾತಾವರಣದಲ್ಲಿ ಮುಕ್ತ ಚುನಾವಣೆ ಅದ್ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನಿಗಾ ವಹಿಸಲು ಆಗ್ರಹ: ಪೊಲೀಸರು ತಕ್ಷಣ ಆಳಂದಕ್ಕೆ ಹೆಚ್ಚಿನ ನಿಗಾ ಕೊಡಬೇಕು. ಅದರಲ್ಲೂ ಸರಸಂಬಾ, ಹೆಬಳಿ, ಕಿಣ್ಣಿ ಅಬ್ಬಾಸ, ಪಡಸಾವಳಗಿ, ಚಿಂಚೋಳಿ(ಕೆ), (ಬಿ), ಕೋರಳ್ಳಿ, ಸಕ್ಕರಗಾ, ನಾಗಲೇಗಾಂವ್ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಹೆಚ್ಚಿನ ಬಲ ನಿಯೋಜಿಸಿ ಮುಕ್ತ ಚುನಾವಣೆ, ಮತದಾನಕ್ಕೆ ಸಕಲ ಏರ್ಪಾಟು ಮಾಡಬೇಕೆಂದರು.
ಚುನಾವಣೆ ಪ್ರಚಾರದಲ್ಲಿ ತಮ್ಮ ಕೆಲಸಗಳ ಸಾಧನೆ ಆಧರಿಸಿ ಸಾರ್ವಜನಿಕವಾಗಿ ಮಾತನಾಡಲಿ, ಅದನ್ನೆಲ್ಲ ಬಿಟ್ಟು ಕುಲಕಸಬನ್ನಾಧರಿಸಿ, ವೈಯಕ್ತಿಕವಾಗಿ ನಿಂದಿಸುತ್ತಾರೆ. ಇದರಿಂದ ತಮಗೆ ನೋವಾಗಿದೆ ಎಂದ ಸುಭಾಸ ಗುತ್ತೇದಾರ್ ಇವೆಲ್ಲ ಬೆಳವಣಿಗೆಗಳ ವಿರುದ್ಧ ತಾವು ಜಿಲ್ಲಾಡಳಿತಕ್ಕೂ ಲಿಖಿತ ದೂರು ಕೊಡುವುದಾಗಿ ಹೇಳಿದರು.

'ಗುತ್ತೇದಾರ ಕಡೆಯಿಂದ ಹಲ್ಲೆ'
ಗುಲ್ಬರ್ಗ: ಸೋಲಿನ ಭೀತಿಯಿಂದ ಆಳಂದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಸುಭಾಷ ಗುತ್ತೇದಾರ ಅವರು ಕೆಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದು ಮತ್ತು ಜೀವ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಜೆಪಿ ಗುಲ್ಬರ್ಗ ಮಹಾನಗರ ಜಿಲ್ಲಾ ಅಧ್ಯಕ್ಷ ಬಸವರಾಜ ಇಂಗಿನ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಸಂಜೆ ಕೆಜೆಪಿ ಕಾರ್ಯಕರ್ತರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ್ ಪರ ಚುನಾವಣಾ ಪ್ರಚಾರ ನಡೆಸಿ ಮರಳಿ ತಮ್ಮ ಗ್ರಾಮಗಳಿಗೆ ಜೀಪಿನಲ್ಲಿ ತೆರಳುತ್ತಿದ್ದಾಗ ತಾಲೂಕಿನ ಚಿಂಚೋಳಿ (ಕೆ) ಗ್ರಾಮದ ಬಳಿ ಸುಭಾಷ ಗುತ್ತೇದಾರ ಮತ್ತು ಅವರ ಗನ್‌ಮ್ಯಾನ್ ಹಾಗೂ ಕಾರ್ಯಕರ್ತರು ಜೀಪ್ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.