ಹತ್ತಿಕುಣಿ ಸರ್ಕಾರಿ ಪಿಯು ಕಾಲೇಜು ಉತ್ತಮ ಫಲಿತಾಂಶ
ಯಾದಗಿರಿ: ಕಳೆದ ಮಾರ್ಚ್ನಲ್ಲಿ ಜರುಗಿದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲೂಕಿನ ಹತ್ತಿಕುಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ವಿ.ಪಿ. ಹೊಸಟ್ಟಿ ತಿಳಿಸಿದ್ದಾರೆ. ಕಾಲೇಜಿನ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 26 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 1 ಡಿಸ್ಟಿಂಕ್ಷನ್, 15 ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ಸಾಮಾನ್ಯ ವರ್ಗದಲ್ಲಿ ಪಾಸಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾಲೇಜಿನ ಶೇಕಡಾವಾರು ಫಲಿತಾಂಶ ಶೇ. 86.66 ಆಗಿದ್ದು, ಬಸವಪ್ಪ(513), ರವಿಕುಮಾರ(504), ಸಣ್ಣ ಮೀರ (495), ಲಕ್ಷ್ಮೀ ಬಿ.(493), ಶ್ರವಣಕುಮಾರ(482), ಸುನಿತಾ(481) ಉತ್ತಮ ಸಾಧನೆ ಮಾಡಿದ್ದಾರೆ, ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿ, ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.
ಸರ್ವೋದಯ ಸಂಸ್ಥೆ ಪ್ರೌಢ ಶಾಲೆಗೆ ಶೇ.100 ಫಲಿತಾಂಶ
ಸುರಪುರ: ಇಲ್ಲಿಯ ಸರ್ವೋದಯ ಶಿಕ್ಷಣ ಸಂಸ್ಥೆಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 42 ವಿದ್ಯಾರ್ಥಿಗಳು ಉತ್ತೀರಣರಾಗಿದ್ದಾರೆ. ಇಬ್ಬರು ಅಗ್ರಶ್ರೇಣಿ, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 16 ವಿದ್ಯಾರ್ಥಿಗಳು ದ್ವಿತೀಯ, 11 ವಿದ್ಯಾರ್ಥಿಗಳು ಸಾಮಾನ್ಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಾವ್ಯಾ ಕಾಳಪ್ಪ ಶಹಾಬಾದಿ ಶೇ. 90.08, ಶಾಂಭವಿ ಶಿವಪ್ಪ ಕಟ್ಟಿಮನಿ ಶೇ.87.36 ಅಂಕ ಪಡೆದಿದ್ದಾರೆ.
ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಆಶ್ರಿತ ಪ್ರಥಮ ಸ್ಥಾನ
ಯಾದಗಿರಿ: ನಗರದ ಮಹಾತ್ಮಾಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಅಶ್ರಿತ ಕೃಷ , ಮೂರ್ತಿ ಭುರ್ಲಿ ಶೇ. 93.44 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಮಹಾತ್ಮಾಗಾಂಧಿ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಪವನ ವೆಂಕಟಾಚಾರ್ಯ ಪೂಜಾರಿ ಶೇ.92.33 ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತಿಯ ಸ್ಥಾನ ಗಳಿಸಿಸಿದ್ದಾನೆ. ಈ ವಿದ್ಯಾರ್ಥಿಗಳ ಸಾಧನೆಗೆ ಶ್ರೀರಾಮ ಭಜನಾ ಮಂಡಳಿ ಪದಾಧಿಕಾರಿಗಳಾದ ಶಂಕರನಾರಾಯಣ , ವೆಂಕಟೇಶ ದೀಕ್ಷಿತ, ಪ್ರವೀಣ ದೇಶಮುಖ, ಆದರ್ಶ ದೇಸಾಯಿ, ಸತೀಶ , ವಿಜಯಕುಮಾರ ತಾತಾಳಗೇರಾ, ಗುರುರಾಜ ದೇಸಾಯಿ ಇತರರು ಅಭಿನಂದನೆ ಸಲ್ಲಿಸಿದ್ದಾರೆ.
'ಸರ್ವರಲ್ಲೂ ರಾಷ್ಟ್ರಪ್ರೇಮ ಮೂಡಲಿ'
ಸಿಂಧನೂರು: ಜಾತಿ- ಮತ- ಪಂಥ, ಭಾಷೆ- ಲಿಂಗ- ವಯೋವುತಿ, ಭೇದ- ಭಾವವಿಲ್ಲದೇ ವಿಭಿನ್ನತೆಯಲ್ಲಿ ಏಕತೆಯನ್ನು ಮೂಡಿಸುವ ರಾಷ್ಟ್ರಪ್ರೇಮ ಸರ್ವರಲ್ಲೂ ಮೂಡಲಿ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಎಂ.ಭಾಸ್ಕರ್ ಆಶಯ ವ್ಯಕ್ತಪಡಿಸಿದರು. ನಗರದ ಹೋಲಿ ಫ್ಯಾಮಿಲಿ ಶಾಲಾ ಮೈದಾನದಲ್ಲಿ ಸಹಾರಾ ಇಂಡಿಯಾ ಪರಿವಾರದ ಕಾರ್ಯಕರ್ತರಿಂದ ದೇಶದಾದ್ಯಂತ ರಾಷ್ಟ್ರಗೀತೆ ಹಾಡಿ ವಿಶ್ವದಾಖಲೆ ನಿರ್ಮಾಣದ ಭಾರತ ಭಾವನಾ ದಿವಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಜೆ.ಎನ್. ಇರಕಲ್, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾರ್ವತಿ ಅಕ್ಕ, ಆರ್ಜಿಎಂ ಶಾಲೆಯ ಮುಖ್ಯ ಗುರು ರಾಜಶೇಖರ ಖಾನಾಪೂರ ಮಾತನಾಡಿದರು. ಸಹಾರಾ ಇಂಡಿಯಾ ಪರಿವಾರ ಶಾಖಾ ವ್ಯವಸ್ಥಾಪಕ ಬಿ.ರಾಮ್ಕುಮಾರ ಸ್ವಾಗತಿಸಿದರೆ, ಸಹಾರಾ ಸಮನ್ವಯಾಧಿಕಾರಿ ಆಂಥೋನಿ ಕಿನ್ನಾಳ ನಿರೂಪಿಸಿದರು.
ಮಹಿಳೆ ಕಾಣೆ
ರಾಯಚೂರು: ಮಾನವಿ ತಾಲೂಕಿನ ಸಿರವಾರದಿಂದ ಮಹಿಳೆ ಕಾಣೆಯಾಗಿದ್ದಾಳೆ. ಕಾಣೆಯಾದಾಕೆಯನ್ನು ಶಿವಲೀಲಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಪತಿಯ ಮನೆಯಿಂದ ಹೊರಹೋಗಿದ್ದು ವಾಪಸ್ ಬಾರದೇ ಕಾಣೆಯಾಗಿದ್ದಾರೆಂದು ಪೊಲೀಸರಿಗೆ ದೂರಲಾಗಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

