ಹೆಸರಿಗೆ.. ವಿಶೇಷ ತಹಸೀಲ್ದಾರ್ ಕಚೇರಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 15
ನೂತನ ತಾಲೂಕು ಕೇಂದ್ರವೆಂದು ಈಗಾಗಲೇ ಘೋಷಣೆಯಾಗಿರುವ ವಡಗೇರಾದಲ್ಲಿ ಈ ಹಿಂದೆಯೇ ಪ್ರಾರಂಭಿಸಿರುವ ವಿಶೇಷ ತಹಸೀಲ್ದಾರ್ ಕಾರ್ಯಾಲಯ ಇದ್ದೂ ಇಲ್ಲದಂತಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ.
ಕಾರ್ಯಾಲಯ ಪ್ರವೇಶಿಸಿದರೆ ಖಾಲಿ ಕುರ್ಚಿಗಳೇ ಕಾಣುತ್ತವೆ. ಯಾವ ಕೆಲಸವೂ ಒಂದೇ ದಿನಕ್ಕೆ ಆಗುವುದೇ ಇಲ್ಲ. ಆದ್ದರಿಂದ ಜನರಿಗೆ ವಿಶೇಷ ತಹಸೀಲ್ದಾರ್ ಕಾರ್ಯಾಲಯ ಇದ್ದೂ ಪ್ರಯೋಜನ ಇಲ್ಲದಂತಾಗಿದೆ.
ವಿಶೇಷ ತಹಸೀಲ್ ಕಾರ್ಯಾಲಯಕ್ಕೆ ವಡಗೇರಾ ಭಾಗದ ಎರಡು ಹೋಬಳಿಯ ಉಮಾರು 66 ಗ್ರಾಮಗಳು ಒಳಪಡುತ್ತವೆ. ಅನೇಕ ರೈತರು ತಮ್ಮ ಹೊಲದಲ್ಲಿಯ ಕೆಲಸಗಳನ್ನು ಬಿಟ್ಟು ವಿವಿಧ ಪ್ರಮಾಣಪತ್ರ, ದಾಗದಪತ್ರ ಪಡೆಯಲು ಕಾರ್ಯಾಲಯಕ್ಕೆ ಬಂದರೆ ಅವರನ್ನು ಖಾಲಿ ಕುರ್ಚಿಗಳು ಸ್ವಾಗತಿಸುತ್ತವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ವಿಳಂಬ: ವಿಶೇಷ ತಹಸೀಲ್ದಾರ್ ಕಾರ್ಯಾಲಯದಲ್ಲಿ ಒಟ್ಟು ಎಂಟು ಜನ ಸಿಬ್ಬಂದಿ ಇರಬೇಕು. ಪ್ರಮುಖವಾಗಿ ಬೇಕಾಗಿರುವ ವಿಶೇಷ ತಹಸೀಲ್ದಾರರ ಹುದ್ದೆಯ ಜತೆಗೆ ಶಿರಸ್ತೇದಾರರ ಹುದ್ದೆಯೂ ಖಾಲಿ ಇದೆ. ಇದರ ಜೊತೆ ಇನ್ನೂ ಅನೇಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ರೈತರಿಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವುದರಿಂದ ರೈತರ ಹಣದ ಜೊತೆ ಸಮಯವು ವ್ಯರ್ಥವಾಗುತ್ತಿದೆ.
ಕೇವಲ ಇಬ್ಬರು ಸಿಬ್ಬಂದಿ ಎರಡು ಹೋಬಳಿಯ ಗ್ರಾಮಗಳ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು. ಇದರಿಂದಾಗಿ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ದೂರದ ಗ್ರಾಮಗಳಿಂದ ಬಂದ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ಗೊಣಗುತ್ತಾ ಮರಳಿ ಗ್ರಾಮಗಳಿಗೆ ತೆರಳುವಂತಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇಲ್ಲಿಯ ವಿಶೇಷ ತಹಸೀಲ್ ಕಾರ್ಯಾಲಯಕ್ಕೆ ಸಿಬ್ಬಂದಿ ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್, ಅಬ್ದುಲ್ ಚಿಗಾನೂರ, ಅಜ್ಮೀರಬಾಷಾ, ಅಬ್ದುಲ್ ಖತಾಲಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

