ಗುಲ್ಬರ್ಗಾ

ಶಹಾಪುರ; ಹೆಚ್ಚುತ್ತಿರುವ ವಾಂತಿ-ಭೇದಿ

Published On :

ಶಹಾಪುರ: ತಾಲೂಕಿನಾದ್ಯಂತ ಅನೇಕ ಹಳ್ಳಿಗಳಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿಯ ಹಲವಾರು ಪ್ರಕರಣಗಳು ದಾಖಲಾಗುತ್ತಿದೆ. ತಾಲೂಕು ಆರೋಗ್ಯ ಇಲಾಖೆ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಆಡಳಿತದ ನಿಷ್ಕಾಳಜಿಗೆ ಸಾಕ್ಷಿಯಾಗಿದೆ.
ಕಾಟಾಚಾರದ ಶಿಕ್ಷೆ: ತಾಲೂಕಿನ ಮೂಡಬೂಳ ಗ್ರಾಮದಲ್ಲಿ 9 ಜನ, ಪಡದಳ್ಳಿ ಹೈಯಾಳ, ಶಿರವಾಳದಲ್ಲಿ ದಿನನಿತ್ಯ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಆರೋಗ್ಯ ಇಲಾಖೆಯವರು ಯಾವುದರ ಪರಿವೆ ಇಲ್ಲದಂತೆ ಕಾಟಾಚಾರದಿಂದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಮುಗ್ಧರು, ಅಮಾಯಕರು ಖಾಸಗಿ ದವಾಖಾನೆಗಳಿಗೆ ಬಂದು ನೂರಾರು ರುಪಾಯಿ ಖರ್ಚು ಮಾಡಿ ಔಷಧೋಪಚಾರ ಮಾಡಿಕೊಂಡು ಹೋಗುತ್ತಿದ್ದಾರೆ.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಔಷಧಿಗಳು ಯಾರ ಪಾಲಿಗೆ ಹೋಗುತ್ತಿವೆ ತಿಳಿಯದಾಗಿದೆ. ವೈದ್ಯರು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಸಿಗುತ್ತಿಲ್ಲ. ಆರೋಗ್ಯ ಸಹಾಯಕರು ಸಂಬಂಧಿಸಿದ ಹಳ್ಳಿಗಳಿಗೆ ಹೋಗುತ್ತಿಲ್ಲ. ಕಲುಷಿತ ನೀರಿನ ಬಗ್ಗೆ ವರದಿ ಕೊಡುತ್ತಿಲ್ಲ. ಹೀಗಾಗಿ ಇಡೀ ಆರೋಗ್ಯ ಇಲಾಖೆಯ ಆಡಳಿತ ಸತ್ವಹೀನವಾಗಿದೆ ಎಂದು ಮುಖಂಡ ಹೊನ್ನಪ್ಪ ಗಂಗನಾಳ ಆರೋಪಿಸಿದ್ದಾರೆ.
ತಕ್ಷಣವೇ ಗ್ರಾಮಗಳಲ್ಲಿ ಆರೋಗ್ಯ ಸಿಬ್ಬಂದಿ ಸಂಬಂಧಿಸಿದ ಗ್ರಾಮಗಳಲ್ಲಿ ಸಂಚರಿಸಿ ನೀರಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಗ್ರಾಪಂಗೆ ಮಾಹಿತಿ ನೀಡಬೇಕಿದೆ. ಬಡಜನರ ಆರೋಗ್ಯದತ್ತ ಕಾಳಜಿ ವಹಿಸಬೇಕು. ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.