ಗುಲ್ಬರ್ಗಾ

ಬಸ್ ಡಿಕ್ಕಿ; ದ್ವಿಚಕ್ರ ಸವಾರ ಸಾವು

Published On :

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಮೇ 19
ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಫಿರೋಜಾಬಾದ್ ದರ್ಗಾದ ಹತ್ತಿರ ಶನಿವಾರ ನಡೆದಿದೆ. ಜೇವರ್ಗಿ ತಾಲೂಕಿನ ಬಳೂಂಡಗಿ ಗ್ರಾಮದ ಶ್ರೀಮಂತ ಎಂಬಾತ ಮೃತಪಟ್ಟಿದ್ದಾನೆ. ಶ್ರೀಮಂತ ಗುಲ್ಬರ್ಗದ ಆರ್‌ಟಿಓ ಕಚೇರಿಗೆ ಹೋಗಿ ಬರುವುದಾಗಿ ಗ್ರಾಮದಿಂದ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಫಿರೋಜಾಬಾದ್ ದರ್ಗಾದ ಬಳಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಕುರಿತು ಫರತಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂತಿ ಕಳ್ಳತನ
ಗುಲ್ಬರ್ಗ: ತಾಲೂಕಿನ ಕಲ್ಲಹಂಗರಗಾ ಸಿಮಾಂತರದಲ್ಲಿ 22 ವಿದ್ಯುತ್ ಕಂಬಗಳಿಗೆ ಅಳವಡಿಸಲಾಗಿದ್ದ ಅಲ್ಯೂಮಿನಿಯಂ ತಂತಿಯನ್ನು ಕಳ್ಳರು ದೋಚಿಕೊಂಡು ಹೋದ ಘಟನೆ ನಡೆದಿದೆ. 22 ಕಂಬಗಳಿಗೆ ಅಳವಡಿಸಲಾದ ತಂತಿ ಕದ್ದ ಕಳ್ಳರು ಜೆಸ್ಕಾಂಗೆ ರು. 92 ಸಾವಿರ ಹಾನಿ ಮಾಡಿದ್ದಾರೆ ಎಂದು ಸಹಾಯಕ ಅಭಿಯಂತರ ದೇವೇಂದ್ರ ಕುಪ್ಪಿಗೌಡ್ರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ
ಗುಲ್ಬರ್ಗ: ತವರು ಮನೆಯಿಂದ ಒಂದು ಲಕ್ಷ ರು. ತರುವಂತೆ ಪತ್ನಿಗೆ ಪತಿಯೊಬ್ಬ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸವಾಡಿಯ ಪರ್ವಿನ್ (35) ಎಂಬ ಮಹಿಳೆಗೆ ಮಹ್ಮದ ಗೌಸ್ ಎಂಬುವನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ಸ್ವಲ್ಪ ದಿನಗಳ ನಂತರ ಕುಡಿತದ ಚಟಕ್ಕೆ ದಾಸನಾದ ಮಹ್ಮದ್ ಗೌಸ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ತವರು ಮನೆಯಿಂದ ಒಂದು ಲಕ್ಷ ರು. ನೀಡಿದ್ದರು. ತೃಪ್ತನಾಗದ ಪತಿ ಮಹ್ಮದ್ ಗೌಸ್ ಮದುವೆ ಸಮಯದಲ್ಲಿ ಹಾಕಿದ್ದ ಬಂಗಾರವನ್ನು ಮಾರಿಕೊಂಡಿದ್ದ, ಇನ್ನೂ ಒಂದು ಲಕ್ಷ ತರಬೇಕು, ಇಲ್ಲದಿದ್ದದರೆ ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ತನ್ನ ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.