ಸಾರಿಗೆ ನಿಗಮಕ್ಕೆ 'ಖಾಸಗಿ' ಸೆಡ್ಡು
ಕನ್ನಡಪ್ರಭ ವಾರ್ತೆ ಕೆಂಭಾವಿ ಮೇ 19
ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳನ್ನು ಓಡಿಸುವ ಮೂಲಕ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡು ಸಾರಿಗೆ ನಿಗಮಕ್ಕೆ ಸವಾಲೊಡ್ಡಲು ಮುಂದಾಗಿವೆ.
ಜಿಲ್ಲೆಯಲ್ಲಿನ ಅನೇಕ ಪ್ರವಾಸಿ ತಾಣಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸಿನ ಮಾಲೀಕರು ಬಸ್ಸುಗಳನ್ನು ಓಡಿಸಲು ಹುನ್ನಾರು ನಡೆಸಿದ್ದಾರೆ. ಈಗಾಗಲೇ ಗುಲ್ಬರ್ಗದಿಂದ ಸುರಪುರ ಮಧ್ಯೆ ಖಾಸಗಿ ಬಸ್ಸುಗಳನ್ನು ಕಳೆದ ಎರಡು ಮೂರು ವರ್ಷದಿಂದ ಕಡಿಮೆ ದರದಲ್ಲಿ ಓಡಿಸಲಾಗುತ್ತಿದೆ. ಸಾರಿಗೆ ಸಂಸ್ಥೆಗೆ ನಷ್ಟದ ಬಿಸಿ ತಾಗುತ್ತಲೇ ಎಚ್ಚರಗೊಂಡ ನಿಗಮದ ಅಧಿಕಾರಿಗಳು 'ಸಗರ ನಾಡು' ಎಂಬ ಹೆಸರಿನಲ್ಲಿ ಕಡಿಮೆ ದರದಲ್ಲಿ ಬಸ್ಸುಗಳ ಸಂಚಾರ ಪ್ರಾರಂಭಿಸಿದರು.
ಖಾಸಗಿ ಬಸ್‌ಗಳ ಜಪ್ತಿ: ಜಿಲ್ಲೆಯ ಮೂರು ತಾಲೂಕಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿಕೊಂಡ ಖಾಸಗಿ ಬಸ್ಸಿನ ಮಾಲೀಕರು ತಾಲೂಕು ಕೇಂದ್ರಗಳ ಮಧ್ಯೆ ಬಸ್ಸುಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಾಯೋಗಿಕವಾಗಿ ಮೇ 16ರಂದು ಸುರಪುರ- ಗುರುಮಠಕಲ್ ಮಧ್ಯೆ ನಾಲ್ಕು ಬಸ್ಸುಗಳನ್ನು ಪ್ರಾರಂಭಿಸಿದ್ದರು. ಆದರೆ ಸಾರಿಗೆ ಅಧಿಕಾರಿಗಳ ಕಣ್ಣಿಗೆ ಬಿದ್ದು ಅವು ಈಗ ಜಪ್ತಿಗೊಂಡಿವೆ.
ಎನ್‌ಇಕೆಆರ್ಟಿಸಿಗೆ ಸೆಡ್ಡು: ಈಗ ಮಾಲೀಕರು ಕಾನೂನು ಪ್ರಕಾರ ಪರವಾನಗಿ ಪಡೆದು ಬಸ್ಸುಗಳನ್ನು ಓಡಿಸಲು ಆರಂಭಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಜಕೀಯ ಪ್ರಭಾವದಿಂದ ಅಧಿಕಾರಿಗಳನ್ನು ಕಟ್ಟಿ ಹಾಕಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕೆಲ ಪ್ರಮುಖ ತಾಣಗಳಿಗೆ ಬಸ್ಸಿನ ಮಾರ್ಗವನ್ನು ಪ್ರಾರಂಭಿಸಬೇಕು. ಅಲ್ಲದೆ ಜಿಲ್ಲಾ ಕೇಂದ್ರದಿಂದ ಇತರ ಜಿಲ್ಲಾ ಕೇಂದ್ರಗಳಿಗೆ ನೇರ ಬಸ್ಸಿನ ಸಂಪರ್ಕ ಒದಗಿಸಬೇಕು. ಇಲ್ಲವಾದಲ್ಲಿ ಖಾಸಗಿಯವರು ಈ ಮಾರ್ಗಗಳಿಗೆ ಲಗ್ಗೆ ಹಾಕಿ ಸಂಸ್ಥೆಗೆ ನಷ್ಟ ಮಾಡಿದರೆ ಅಚ್ಚರಿ ಪಡಬೇಕಿಲ್ಲ.
ಪರವಾನಗಿಗೆ ರಾಜಕೀಯ ಪ್ರಭಾವ: ಶಹಾಪುರದಿಂದ ಯಾದಗಿರಿ, ಗುರುಮಠಕಲ್, ಯಾನಾಗುಂದಿ, ನಾರಾಯಣಪುರ, ಕೆಂಭಾವಿ, ಮುದನೂರ, ಕೊಡೇಕಲ್, ಕೂಡಲಸಂಗಮ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಓಡಾಟ ಆರಂಭಿಸಿವೆ. ಖಾಸಗಿ ವಾಹನಗಳನ್ನು ಓಡಿಸಲು ಪರವಾನಗಿಗಾಗಿ ಪ್ರಭಾವಿ ಮುಖಂಡರೊಬ್ಬರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಈಗಲಾದರೂ ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೆಲ ಮಾರ್ಗಗಳಲ್ಲಿ ಬಸ್ಸಿನ ಸಂಚಾರ ಪ್ರಾರಂಭಿಸಿ ಜನತೆಗೆ ಅನಕೂಲ ಮಾಡಿಕೊಡಲು ಮುಂದಾಗಬೆಕು. ಇಲ್ಲವಾದಲ್ಲಿ 'ಊರು ಕೊಳ್ಳೆ ಹೊಡೆದ ಮೇಲೆ ದಿಡಡಿ ಬಾಗಿಲು ಹಾಕಿದರು' ಎಂಬಂತೆ ಆಗುತ್ತದೆ ಎಂಬ ಮಾತುಗಳು ಜನರಲ್ಲಿ ಕೇಳಿಬರುತ್ತಿವೆ.
ಈಗ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪರವಾನಗಿ ಇಲ್ಲದೆ ಓಡುವ ವಾಹನಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಶ್ಲಾಘನೀಯ ಕಾರ್ಯ ಮಾಡಿ ಪ್ರಯಾಣಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

