ಪಡಿತರ ಚೀಟಿ ಅರ್ಜಿಗಾಗಿ ನೂಕುನುಗ್ಗಲು
ಚಿತ್ತಾಪುರ: ಇಲ್ಲಿನ ತಾಲೂಕು ಪಂಚಾಯತಿ ಕಚೇರಿ ಎದುರುಗಡೆ ಇರುವ ನಾಗಾವೇಲಾಂಬಿಕ ಡಿಟಿಪಿ ಕೇಂದ್ರದಲ್ಲಿ ತಾಲೂಕಿನ ಚಾಮನೂರ, ಕುನ್ನೂರ ಗ್ರಾಮಗಳಿಂದ ಹೊಸ ಪಡಿತರ ಚೀಟಿ ಪಡೆಯಲು ಜನ ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ.
ಸರ್ಕಾರ ಕಳೆದ ಎರಡು ತಿಂಗಳಿಂದ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ತ ಹೊಸ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆಗೆ ತಡೆ ನೀಡಿತ್ತು.
ತಾಲೂಕಿನ ಕೆಲವು ಖಾಸಗಿ ಕೇಂದ್ರಗಳನ್ನು ನೇಮಿಸದೆ ಇರುವುದರಿಂದ ದೂರದ ಊರುಗಳ ಜನರು ಚಿತ್ತಾಪುರಕ್ಕೆ ಬಂದು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ಪೋಟೋ ತೆಗೆಸಲು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಬೇಕಾಗಿದೆ.
ಹೀಗಾಗಿ ದೂರದಿಂದ ಬರುವ ಜನರು ತುಂಬಾ ತೊಂದರೆ ಪಡುತ್ತಿದ್ದು, ಆಯಾ ಗ್ರಾಪಂವಾರು ಪಡಿತರ ಕೇಂದ್ರ ಇದ್ದರೂ ಸಹ ಅವು ಕಾರ್ಯ ನಿರ್ವಹಿಸದೇ ಇರುವುದರಿಂದ ನಾವುಗಳು ಇಲ್ಲಿಗೆ ಬಂದು ತೊಂದರೆ ಪಡಬೇಕಾಗಿದೆ ಎಂದು ಜನರು “OÚ«ÚsÚ®Úúڒ ಎದುರು ತಮ್ಮ ಗೋಳು ತೋಡಿಕೊಂಡರು.
ನೂರಾರು ರುಪಾಯಿ ಖರ್ಚು ಮಾಡಿ ಟಂಟಂ, ಜೀಪ, ಮಾಡಿಕೊಂಡು ಅರ್ಜಿ ಸಲ್ಲಿಸಲು ಬಂದರೆ ಇಲ್ಲಿ ಸರ್ವರ್ ಇಲ್ಲ, ಅಂಗಡಿ ತೆರೆದಿರುವುದಿಲ್ಲ, ಇಂಥಹ ಸಮಸ್ಯೆಗಳು ನಿತ್ಯವಾಗುತ್ತಿವೆ ಎಂದು ದೂರಿದರು.
ಸರ್ಕಾರ ಗ್ರಾಪಂಗಳಲ್ಲಿ ಪಡಿತರ ಅರ್ಜಿ ಸಲ್ಲಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅಲ್ಲೆ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

