ಗುಲ್ಬರ್ಗಾ

ಮೊದಲು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ...

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 21
ತಾಲೂಕಿನ ಅನೇಕ ಗ್ರಾಮ, ತಾಂಡಾಗಳಲ್ಲಿ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕುರಾತಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದ ಅವರು, ತಾಲೂಕಿನ ಪಸ್ತಪುರ ಗ್ರಾಮ ಮತ್ತು ತಾಂಡಾ, ಸಕ್ರು ನಾಯಕ ತಾಂಡಾದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಸಮಸ್ಯೆಗೆ ಸ್ಪಂದಿಸಿ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮ, ತಾಂಡಾಗಳ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲೂಕಿನ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.
ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ ಮಾತನಾಡಿ, ಮುಂದಿನ 15 ದಿನಗಳ ನಂತರ ಪಸ್ತಪುರ, ಚಂದನಕೇರಾ, ಡೊಂಗರು ನಾಯಕ ತಾಂಡಾ, ಫತ್ತುನಾಯಕ ತಾಂಡಾ, ಖಾನಾಪುರ, ಭೂಯಾರ(ಕೆ) ಫತ್ತು ನಾಯಕ ತಾಂಡಾ, ಪಾಲತ್ಯಾ ತಾಂಡಾ, ಸೂರು ನಾಯಕ ತಾಂಡಾ, ಸಾಸರಗಾಂವ ಗ್ರಾಮ ಮತ್ತು ತಾಂಡಾ, ರುಮ್ಮನಗೂಡ, ವಡತ್ಯಾತಾಂಡಾ, ಸಲಗರ ಕಾಲೋನಿ, ಚೆನ್ನೂರ ತಾಂಡಾ, ಶಿವರಾಮನಾಯಕ ತಾಂಡಾ, ಹೂವಿನಬಾವಿ , ಚೌಕಿ ತಾಂಡಾ ಮುಂತಾದವುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಜೂ.30ಕ್ಕೆ ಸಭೆ ಪೂರ್ಣಗೊಳಿಸಿ: ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಮಾತನಾಡಿ, ಗ್ರಾಪಂ ಕಾರ್ಯದರ್ಶಿಗಳು ಹಾಗೂ ಪಿಡಿಒಗಳು ಗ್ರಾಪಂ ಹಂತಗಳಲ್ಲಿ ಕ್ರಿಯಾಯೋಜನೆ ಮಾಡತಕ್ಕದ್ದಲ್ಲ. ಎಲ್ಲ ಕ್ರಿಯಾ ಯೋಜನೆಗಳನ್ನು ಗ್ರಾಮ ಸಭೆಯಲ್ಲಿಯೇ ಕಾಮಗಾರಿಗಳನ್ನು ಅಂತಿಮಗೊಳಿಸಬೇಕು.  ಜೂನ್ ತಿಂಗಳ ಯೋಜನೆ ಮಾಸವೆಂದು ಪರಿಗಣಿಸಿದ್ದು ಜೂ.10ರಂದು ಗ್ರಾಮ ಸಭೆಗಳನ್ನು ಹಾಗೂ ಜೂ. 20ಕ್ಕೆ ಸಾಮಾನ್ಯ ಸಭೆಗಳನ್ನು ಮತ್ತು ಜೂ.30ಕ್ಕೆ ಎಲ್ಲ ಸಭೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ ಕಾಡ್ ಹೊಂದಿದವರು ಮೇ 31ರೊಳಗೆ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಸಬೇಕು. ಒಟ್ಟು 25 ಸಾವಿರ ಕಾರ್ಡುಗಳ ಖಾತೆ ಮಾಡಿಸಬೇಕಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮುಖ್ಯಲೆಕ್ಕಾಧಿಕಾರಿ, ಎನ್.ಎ. ಪಟವೇಗಾರ, ಮುಖ್ಯ ಯೋಜನಾಧಿಕಾರಿ ವಿರುಪಾಕ್ಷಪ್ಪ, ತಾಲೂಕು ಅಧಿಕಾರಿಗಳಾದ ರೇವಣಸಿದ್ದಪ್ಪ ಹಾಗರಗಿ, ಎಇಇ, ಎಂಜಿನಿಯರುಗಳು ಪಿಡಿಒ, ಕಾರ್ಯದರ್ಶಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.