ತಾಲೂಕು ಪ್ರೇರಕರ ಮಾಸಿಕ ಸಭೆಯಲ್ಲಿ ಶ್ರೀಶೈಲ್ ಕಂಬಾರ ಹೇಳಿಕೆ
ಗಡಿನಾಡಲ್ಲಿ 14 ಸಾವಿರ ಮಂದಿಗೆ ಸಾಕ್ಷರನ್ನಾಗಿಸುವ ಗುರಿ
ಕನ್ನಡಪ್ರಭ ವಾರ್ತೆ ಆಳಂದ ಮೇ 23
ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಅನಕ್ಷರಸ್ಥರಿಗೆ ಸಾಕ್ಷರರನ್ನಾಗಿಸುವುದಕ್ಕಾಗಿ ಈ ಬಾರಿ ಸುಮಾರು 14,010 ಗುರಿ ಹೊಂದಲಾಗಿದೆ ಎಂದು ಸಾಕ್ಷರ ಸಮಿತಿ ತಾಲೂಕು ಸಂಯೋಜಕ ಶ್ರೀಶೈಲ್ ಕಂಬಾರ ಅವರು ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಈಚೇಗೆ ನಡೆದ ತಾಲೂಕು ಪ್ರೇರಕರ ಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಸಾಕ್ಷರ ಭಾರತ ಕಾರ್ಯಕ್ರಮದ 2ನೇ ಹಂತದಲ್ಲಿ ಅಂದಾಜು 14,010 ನವಸಾಕ್ಷರರ ಗುರಿಹೊಂದಲಾಗಿದೆ. ಈ ಕಾರ್ಯಕ್ರಮ ರಾಜ್ಯದ 18 ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದು, ಗುಲ್ಬರ್ಗ ಜಿಲ್ಲೆ ಹಾಗೂ ಆಳಂದ ತಾಲೂಕು ಮೂಂಚಣಿಯಲ್ಲಿದೆ ಎಂದು ನುಡಿದರು.
ತಾಲೂಕಿನ ಹೊಂದಲಾದ ಗುರಿಯಲ್ಲಿ 5400 ಪರಿಶಿಷ್ಟ ಜಾತಿ, 320 ಪರಿಶಿಷ್ಟ ಪಂಗಡ, 5800 ಸಾಮಾನ್ಯವರ್ಗ, 2490 ಅಲ್ಪಸಂಖ್ಯಾತ ಅನಕ್ಷರಸ್ಥರನ್ನು ಗುರುತಿಸಲಾಗಿದ್ದು, ಅವರೆನೆಲ್ಲ ನವಸಾಕ್ಷರರರನ್ನಾಗಿ ಮಾಡಬೇಕಾಗಿದೆ ಎಂದರು.
ಪ್ರತಿ ಪ್ರೇರಕರು ಕಡ್ಡಾಯವಾಗಿ ಕಲಿಕಾ ಕೇಂದ್ರ ನಡೆಸಬೇಕು. ಜಾತಿವಾರು ಅನಕ್ಷರಸ್ಥರನ್ನು ಗುರುತಿಸಿ ಮೇ ತಿಂಗಳಲ್ಲಿ ಕಚೇರಿಗೆ ಮಾಹಿತಿ ನೀಡಬೇಕು. 9 ಜನ ಗ್ರಾಮಲೋಕ ಶಿಕ್ಷಣ ಸಮಿತಿ ವತಿಯಿಂದ ಅನುದಾನ ಬಳಕೆ ಲೆಕ್ಕಪತ್ರ ನೀಡಿರುವುದಿಲ್ಲ. ಕೂಡಲೇ ಕಚೇರಿಗೆ ಸಮಗ್ರ ವಿವರಣೆ ನೀಡಬೇಕು ಎಂದು ಹೇಳಿದರು.
ಸಂಯೋಜಕಿ ಮೈತ್ರಾದೇವಿ ಶಾಬಾದಿ, ಪ್ರೇರಕ ಶಿವಲಿಂಗ ತೇಲ್ಕರ್, ಚಂದ್ರಕಾಂತ ನರೋಣಿ, ಜೈಕಾಂತ ವಾಗ್ಮೊರೆ, ಅಂಬಾದಾಸ ಪಡಸಾವಳಿ, ಭಾರತಿ ಪಾಟೀಲ್, ವಿಜಯಲಕ್ಷ್ಮೀ, ಗುಂಡಪ್ಪ ಸೇರಿದಂತೆ 39 ಗ್ರಾಪಂ ಪ್ರೇರಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

