ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಗುಲ್ಬರ್ಗ: ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ 110 ಕೆ.ವಿ. ಆಳಂದ ಮಾರ್ಗದ ಸುಧಾರಣಾ ಕಾರ್ಯವನ್ನು ಮೇ 27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಕೈಗೆತ್ತಿಕೊಳ್ಳ ಲಾಗುವುದು.
ಈ ಪ್ರಯುಕ್ತ 110/33/11 ಆಳಂದ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಆಳಂದ ಪಟ್ಟಣ, ಎಫ್- 2 ಆಳಂದ ವಾಟರ್ ಸಪ್ಲೈ, ಎಫ್- 3 ಖಾನಾಪುರ ಮತ್ತು ಎಫ್- 4 ಹನುಮಾನ ಟೆಂಪಲ್ ಫೀಡರಿನ ಮೇಲೆ ಬರುವ ಗ್ರಾಹಕರು ಭೂಸನೂರ, ಕೊರಳ್ಳಿ ಗ್ರಾಮಗಳಲ್ಲದೆ, 33 ಕೆ.ವಿ. ತಡಕಲ್ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮುನ್ನಳ್ಳಿ, ದೇಗಾಂವ, ಬಸವನ ಸಂಗೊಳಗಿ, ಶುಕ್ರವಾಡಿ, ಹಾಲತಡಕಲ್, ತಡಕಲ್, ಕಣಮಸ್ ಗ್ರಾಮಗಳು, 33 ಕೆ.ವಿ. ಖಜೂರಿ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಖಜೂರಿ, ರುದ್ರವಾಡಿ, ಹೊದಲೂರ, ಅಲಂಗಾ, ಬಂಗರಗಾ, ಆನೂರ, ತುಗಾಂವ, ಬಾಲಖೇಡ ಮತ್ತು ಕೊತನ ಹಿಪ್ಪರಗಾ ಗ್ರಾಮಗಳು, 33 ಕೆ.ವಿ. ಸರಸಂಬಾ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸರಸಂಬಾ, ಸಾವಳೇಶ್ವರ, ಹೀರೊಳ್ಳಿ, ಪಡಸಾವಳಗಿ ಮತ್ತು ನಿರಗುಡಿ ಗ್ರಾಮಗಳು, 33 ಕೆ.ವಿ. ಜಿಡಗಾ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಜಿಡಗಾ, ಕವಲಗಾ, ಅಲ್ಲಾಪುರ, ಮೋಘಾ(ಬಿ), ಜಂಬಗಾ ಗ್ರಾಮಗಳು, 33 ಕೆ.ವಿ. ಮಾದನಹಿಪ್ಪರಗಾ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಾದನಹಿಪ್ಪರಗಾ, ನಿಂಗದಳ್ಳಿ, ದರ್ಗಾಶಿರೂರ, ಕೇರೂರ, ಮದ್ಗುಣಕಿ, ಮೋಗಾ(ಕೆ), ಮೋಗಾ(ಬಿ), ಜಳಕಿ, ಚಳಗೇರಾ ಮತ್ತು ಖೇಡ ಉಮರಗಾ ಗ್ರಾಮಗಳು ಹಾಗೂ 33 ಕೆ.ವಿ. ಕಡಗಂಚಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕಡಗಂಚಿ, ಗೋಳಾ, ನರೋಣಾ, ಲಾಡಚಿಂಚೋಳಿ, ಕೂಡಲಹಂಗರಗಾ, ಧುತ್ತರಗಾಂವ ಬೊಳನಿ, ಸುಂಟನೂರ ಮತ್ತು ಧನ್ನೂರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಇತರೆ ಗ್ರಾಮಗಳ ಎಲ್ಲ ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

