ಇನ್ನೂ ಗೇಟ್ಗಳನ್ನೇ ಅಳವಡಿಸಿಲ್ಲ!
ಕನ್ನಡಪ್ರಭ ವಾರ್ತೆ ಕಮಲನಗರ ಮೇ 26
ಔರಾದ್ ತಾಲೂಕಿನ ಡಿಗ್ಗಿ ಗ್ರಾಮದ ಸಮೀಪ ದೇವನದಿಗೆ ಅಡ್ಡಲಾಗಿ ಡಿಗ್ಗಿ ಹಾಗೂ ಚಾಂಡೇಶ್ವರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕಟ್ಟಲಾದ ಬ್ರಿಡ್ಜ್ ಕಂ- ಬ್ಯಾರೇಜ್ಗೆ ಇಲ್ಲಿಯವರೆಗೆ ಗೇಟುಗಳನ್ನೇ ಅಳವಡಿಸಿಲ್ಲ.
ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)ಯಿಂದ 2 ಕೋಟಿ ಹೆಚ್ಚು ವೆಚ್ಚದಲ್ಲಿ ಬ್ರಿಡ್ಜ್ ಕಂ- ಬ್ಯಾರೇಜ್ನ ಕೆಲಸ 2 ವರ್ಷಗಳ ಹಿಂದೆ ಆರಂಭಿಸಿದೆ. ಬರುವ ಜೂನ್ ತಿಂಗಳ ಮೊದಲ ವಾರದಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕಾಗಿದೆ.
26 ಗೇಟುಗಳ ಅವಶ್ಯ: ರೈತರ ಜಮೀನಿಗೆ ನೀರು ಸಿಗಲೆಂದು ಆರಂಭಿಸಿದ ಈ ಯೋಜನೆ ಕಾಮಗಾರಿಯ ಅವಧಿಯವರೆಗೆ ನಿರ್ಮಾಣವಾಗಿದೆ. ಆದರೆ ಅದಕ್ಕೆ 26 ಗೇಟುಗಳು ಹಾಕಬೇಕಾಗಿದೆ. ಜೂನ್ ತಿಂಗಳಿನಿಂದ ಮಳೆಗಾಲ ಆರಂಭವಾಗುತ್ತಿದ್ದು, ಹೆಚ್ಚಿನ ಮಳೆಯಾದರೆ ನೀರು ಸಂಗ್ರಹ ಮಾಡಲು ಅಥವಾ ಹೆಚ್ಚಿನ ಮಳೆಯಾದರೆ ರೈತರ ಹೊಲ- ಗದ್ದೆಯಲ್ಲಿನ ಬೆಳೆ ಹಾಳಾಗದಂತೆ ತಡೆಗಟ್ಟಲು ಬ್ಯಾರೇಜ್ಗೆ ಗೇಟು ಅವಶ್ಯಕವಾಗಿವೆ.
ಬ್ರಿಡ್ಜ್ ಕಂ- ಬ್ಯಾರೇಜ್ ನಿರ್ಮಾಣಗೊಂಡರೆ ಸುಮಾರು 118 ಹೆಕ್ಟೇರ್ ಪ್ರದೇಶದ ಜಮೀನಿಗೆ ಅನುಕೂಲವಾಗಲಿದೆ. ದಿನೆ ದಿನೇ ಅಂತರ್ಜಲ ಕುಸಿಯುತ್ತಿರುವುದರಿಂದ ನೀರು ಸಂಗ್ರಹಿಸಲು ಇಂಥಹ ಬ್ರಿಡ್ಜ್ ಕಂ- ಬ್ಯಾರೇಜ್ನ ಅವಶ್ಯ ಇದೆ. ಮಳೆಗಾಲದ ಮಳೆ ನೀರು ಹರಿದು ಹೋಗದಂತೆ ತಡೆಗಟ್ಟಲು ಬ್ಯಾರೇಜ್ಗೆ ಗೇಟುಗಳು ಕೂಡಿಸುವುದು ಜರೂರಿ ಇದೆ.
ಕಬ್ಬಿಣದ ರಾಡುಗಳಿಲ್ಲ: ಇದೇ ವರ್ಷದಿಂದ ಬ್ಯಾರೇಜ್ನಲ್ಲಿ ನೀರು ನಿಲ್ಲಿಸಬೇಕಾದರೆ ಮಣ್ಣು, ಉಸುಕು ಹಾಗೂ ಹೂಳನ್ನು ಕೂಡ ತೆಗೆಯಬೇಕಾಗಿದ್ದು, ನದಿಯಿಂದ ಏನು ತೆಗೆದಿಲ್ಲ.
ಅಲ್ಲದೇ ಯಾವ ಕಡೆಯಿಂದ ನೀರು ಬರುತ್ತವೆಯೋ ಅಲ್ಲಿ ಎರಡು ಕಡೆಯಿಂದ ಸಿಮೆಂಟ್ನ ಗೋಡೆಗಳನ್ನು ಕಟ್ಟಿಲ್ಲ. ಬ್ರಿಡ್ಜ್ನ ಮೇಲೆ ಎರಡು ಕಡೆ ಕಂಬಗಳನ್ನು ನೆಟ್ಟಿದ್ದಾರೆ. ಆದರೆ ಅದಕ್ಕೆ ಕಬ್ಬಿಣದ ರಾಡುಗಳನ್ನು ಕೂಡ ಹಾಕಿಲ್ಲ.
ಬ್ರಿಡ್ಜ್ನ ಕೆಲಸ ಸುಮಾರು ಶೇ.70 ರಷ್ಟು ಮುಗಿದಿದ್ದು, ಉಳಿದ ಕೆಲಸ ಮಳೆಗಾಲ ಬರುವುದಕ್ಕಿಂತ ಮುಂಚೆ ಮಾಡುವುದಕ್ಕೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂದು ರೈತರಾದ ಸಂಜು, ಪ್ರಕಾಶ, ಸ್ವಾಮಿನಾಥ, ರಂಗನಾಥ, ಅಮರ, ಗುರು, ಮುಂತಾದವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

