ಗುಲ್ಬರ್ಗಾ

ಚಿಂಚೋಳಿ: 70,746 ಹೆಕ್ಟೇರ್ ಬಿತ್ತನೆ ಗುರಿ

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 26
ಮುಂಗಾರು ಮಳೆ ಬೀಳುವ ಮುನ್ನ ರೈತರು ತಮ್ಮ ಜಮೀನುಗಳನ್ನು ಉಳುಮೆಗೊಳಿಸಿ ಕಸ ಕಡ್ಡಿ ಆಯ್ದು ಹದಗೊಳಿಸುತ್ತಿದ್ದಾರೆ. ಮಳೆ ಬಂದ ಕೂಡಲೇ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಎಲ್ಲವೂ ಸರಿಯಾಗಿ ನಡೆಯುತ್ತದೆ ಎಂಬುದು ರೈತರ ಆಶಯ. ಈ ಬಾರಿ ತಾಲೂಕಿನಲ್ಲಿ ಒಟ್ಟು 70,746 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವುದಕ್ಕೆ ಕೃಷಿ ಇಲಾಖೆ ಯೋಜನೆ ರೂಪಿಸಿದೆ. ಇದರಲ್ಲಿ ತೊಗರಿ ಪ್ರಮಾಣವೇ ಹೆಚ್ಚು.
ಒಟ್ಟು 49,100 ಹೆಕ್ಟೇರ್ ಪ್ರದೇಶದಲ್ಲಿ ಈ ಭಾಗದ ವಾಣಿಜ್ಯ ಬೆಳೆ ತೊಗರಿ ಬಿತ್ತನೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಅದೇ ರೀತಿ ಉದ್ದು 9,000 ಹೆಕ್ಟೇರ್. ಹೆಸರು 4,250 ಹೆಕ್ಟೇರ್, ಸಜ್ಜೆ 100 ಹೆಕ್ಟೇರ್,  ಅಲಸಂದಿ 250 ಹೆಕ್ಟೇರ್, ಅವರೆ 75 ಹೆಕ್ಟೇರ್, ಮಟಕಿ 100 ಹೆಕ್ಟೇರ್, ಶೇಂಗಾ 100 ಹೆಕ್ಟೇರ್, ಎಳ್ಳು 1,000 ಹೆಕ್ಟೇರ್, ಸೂರ್ಯಕಾಂತಿ 1,000 ಹೆಕ್ಟೇರ್,  ಔಡಲ 30 ಹೆಕ್ಟೇರ್, ಗುರಳ್ಳು 250 ಹೆಕ್ಟೇರ್, ಸೋಯಾಬೀನ್ 350 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗುವುದು ಎಂದು ಚಿಂಚೋಳಿ ಕೃಷಿ ಸಹಾಯಕ ನಿರ್ದೇಶಕಿ ಜಾನಕಿಬಾಯಿ ಬಳವಾಟ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಅದೇ ರೀತಿ ವಾಣಿಜ್ಯ ಬೆಳೆ ಹತ್ತಿ 50 ಹೆಕ್ಟೇರ್, ಕಬ್ಬು 2,950 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲು ಕೃಷಿ ಇಲಾಖೆ ಯೋಜನೆ ರೂಪಿಸಿದೆ ಎಂದು ಹೇಳಿದರು.
ಬಿತ್ತನೆ ಬೀಜದ ಬೇಡಿಕೆ: ಬಿತ್ತನೆ ಕ್ಷೇತ್ರಕ್ಕೆ ಅನುಗುಣವಾಗಿ ಹೈಬ್ರಿಡ್ ಜೋಳ 60 ಕ್ಟಿಂಟಲ್, ತೊಗರಿ 26 ಕ್ವಿಂಟಲ್, ಉದ್ದು 209 ಕ್ವಿಂಟಲ್, ಸೋಯಾಬೀನ್ 650 ಕ್ವಿಂಟಲ್, ಹೈಬ್ರೀಡ್ ಹತ್ತಿ (ಬಿ.ಟಿ) 5 ಕ್ವಿಂಟಲ್‌ದಷ್ಟು ಬೀಜ ಸರಬರಾಜು ಮಾಡುವಂತೆ ಕೃಷಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ಸದ್ಯ ತೊಗರಿ 10 ಕ್ವಿಂಟಲ್, ಹೆಸರು 9 ಕ್ವಿಂಟಲ್, ಹೈಬ್ರಿಡ್ ಜೋಳ 4 ಕ್ವಿಂಟಲ್‌ನಷ್ಟು ಆರ್‌ಎಸ್‌ಪಿ ಕೇಂದ್ರಗಳಾದ ಸುಲೇಪೇಟ್ ಹಾಗೂ ಕೋಡ್ಲಿಯಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು.
ಗೊಬ್ಬರ: ಈ ಬಾರಿ ಬಿತ್ತನೆಗಾಗಿ ಡಿಎಪಿ 6,513 ಟನ್, ಎಂಒಪಿ 970 ಟನ್, ಎಸ್‌ಎಸ್‌ಪಿ 120 ಟನ್, ಕಾಂಪ್ಲೆಕ್ಸ್ 1,864 ಟನ್ ಸರಬರಾಜು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅತೀ ಶೀಘ್ರದಲ್ಲಿ ಗೊಬ್ಬರದ ದಾಸ್ತಾನು ಮಾಡಲಾಗುವುದು ಎಂದು ತಿಳಿಸಿದರು.
ರೈತರು ಆರ್‌ಎಸ್‌ಪಿ ಕೇಂದ್ರಗಳಿಗೆ ಶೇ.50 ಸಬ್ಸಿಡಿ ಪಡೆದು ಬೀಜ ಖರೀದಿಸಬಹುದು. ರೈತರಲ್ಲಿ ಕಾದಿಟ್ಟ ಬೀಜಗಳು ಸಹಿತ ವಿನಿಮಯದ ಮೂಲಕ ಬೆಳೆಗಳನ್ನು ಬೆಳೆಸಲು ಸಲಹೆ ನೀಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.