ವಿತರಣೆಯಾಗದ ಪಠ್ಯಪುಸ್ತಕ, ಸಮವಸ್ತ್ರ
ಚಿಂಚೋಳಿ: ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪ್ರಾರಂಭಗೊಳ್ಳಲು ಒಂದೇ ದಿನ ಬಾಕಿಯಿದ್ದರೂ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇನ್ನು ಪುಸ್ತಕಗಳು, ಶಾಲಾ ಸಮವಸ್ತ್ರಗಳನ್ನು ಸರಬರಾಜು ಮಾಡದೆ ಇಲ್ಲಿನ ಬಿಇಒ ಕಾರ್ಯಾಲಯದ ಕೋಣೆಯಲ್ಲಿಯೇ ಹಾಗೆ ಉಳಿದುಕೊಂಡಿವೆ.
ತಾಲೂಕಿನಲ್ಲಿ ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ 282, ಸರ್ಕಾರಿ ಪ್ರೌಢಶಾಲೆ 22 ಹಾಗೂ ಅನುದಾನಿತ ಪ್ರಾಥಮಿಕ ಶಾಲೆ 4 ಮತ್ತು ಅನುದಾನಿತ ಪ್ರೌಢಶಾಲೆ 2 ಇವೆ.
ತಾಲೂಕಿನಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ 26,937 ಮಕ್ಕಳು, 6ನೇ ತರಗತಿಯಿಂದ 8ನೇ ತರಗತಿವರೆಗೆ 11,144 ಮಕ್ಕಳು ಮತ್ತು 9ನೇ ತರಗತಿಯಿಂದ 10ನೇ ತರಗತಿವರೆಗಿನ 6,566 ಮಕ್ಕಳು ಸೇರಿ ಒಟ್ಟು 44,647 ಮಕ್ಕಳಿದ್ದಾರೆ. ಉಚಿತ ಪುಸ್ತಕ ವಿತರಣೆಗಾಗಿ ತಾಲೂಕು ಬಿಇಒ ಕಾರ್ಯಾಲಯಕ್ಕೆ ಸರ್ಕಾರದಿಂದ ಒಟ್ಟು 1,93,562 ಪುಸ್ತಕಗಳ ಸರಬರಾಜಾಗಿದೆ. ಇನ್ನೂ 38,896 ಪುಸ್ತಕಗಳು ಸರ್ಕಾರದಿಂದ ಬರಬೇಕಾಗಿದೆ.
ಆದರೆ ಇದುವರೆಗೆ ತಾಲೂಕಿನ ಯಾವುದೇ ಶಾಲೆಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡಲಾಗಿಲ್ಲ ಎಂದು ಬಿಇಒ ಕಾರ್ಯಾಲಯದ ಮೂಲಗಳಿಂದ ತಿಳಿದು ಬಂದಿದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹುಡುಗರಿಗಾಗಿ 37,366 ಮತ್ತು ಹುಡುಗಿಯರಿಗೆ 37,989 ಸಮವಸ್ತ್ರಗಳು ಬಂದಿವೆ. ಆದರೆ ತಾಲೂಕಿನ ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರಿಗೆ ಇನ್ನು ವಿತರಣೆ ಕ್ರಮ ಕೈಗೊಂಡಿಲ್ಲ. ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಶಿಕ್ಷಣ ಸಂಯೋಜಕರ ನಿರ್ಲಕ್ಷ್ಯತನವೇ ಮುಖ್ಯ ಕಾರಣವಾಗಿದೆ ಎಂದು ಪಾಲಕರ ಆರೋಪವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

