ಗುಲ್ಬರ್ಗಾ

ಕಾರು ಡಿಕ್ಕಿ: ಸಾಧು ಮಹಾರಾಜ ಸಾವು

Published On :

ಗುಲ್ಬರ್ಗ: ಕಾರು ಡಿಕ್ಕಿ ಹೊಡೆದ ಪರಿಣಾಮ ನಾರಾಯಣ ಮಹಾರಾಜ (70) ಎಂಬಾತ ಸಾಧುವೊಬ್ಬ ಮೃತಪಟ್ಟಿರುವ ಘಟನೆ ಅಫಜಲ್ಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ನಡೆದಿದೆ. ಈತ ಕಳೆದ 25 ವರ್ಷಗಳಿಂದ ದೇವಲಗಾಣಗಾಪುರದಲ್ಲಿ ನೆಲೆಸಿದ್ದ. ಈ ವೇಳೆ ಆಂಧ್ರ ಮೂಲದ ಇಬ್ಬರು ಮಹಿಳೆಯರಿಗೂ ಗಾಯಗಳಾಗಿವೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ನಾರಾಯಣ ಅವರನ್ನು ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಮೃತಪಟ್ಟಿದ್ದಾರೆ. ದೇವಲಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಹಾಕಿ ಲೂಟಿ
ಗುಲ್ಬರ್ಗ:  ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ, 20000 ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಶಹಾಬಾದ್ ಲಕ್ಷ್ಮೀಗಂಜ್ ನಿವಾಸಿ ಶಿವಕುಮಾರ್ ತಂದೆ ಮಹೇಶ್ಚಂದ್ರ ನಾಟಿಕಾರ್ ಎಂಬಾತ ನಗರದ ಸೂಪರ್ ಮಾರ್ಕೆಟ್ಗೆ ಬಂದಿದ್ದರು.
 ಮರಳಿ ರೈಲು ನಿಲ್ದಾಣಕ್ಕೆ ಹೋಗಲು ಆಟೋ ಹತ್ತಿದ್ದಾಗ ಚಾಲಕ ಮತ್ತು ಆಟೋದಲ್ಲಿದ್ದ ಇನ್ನೊಬ್ಬ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಟೋವನ್ನು ಚಾಲನೆ ಮಾಡಿದರು. ಬಳಿಕ ಶಿವಕುಮಾರ್ಗೆ ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ 2 ಕಂಪ್ಯೂಟರ್ ಹಾರ್ಡ್ವೇರ್, 1 ಸ್ಯಾಮ್ಸಂಗ್ ಮೊಬೈಲ್, 3000 ನಗದು ಸೇರಿ ಒಟ್ಟು 20000 ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.