ಗುಲ್ಬರ್ಗಾ

ಪ್ರತ್ಯೇಕ ದಾಳಿ: ಏಳು ಜೂಜುಕೋರರ ಬಂಧನ

Published On :

ಗುಲ್ಬರ್ಗ/ಶಹಾಬಾದ್:  ಶಹಾಬಾದ್ ನಗರದ ಪ್ರತ್ಯೇಕ ಸ್ಥಳಗಳಲ್ಲಿ ಜೂಜಾಡುತ್ತಿದ್ದ ಗುಂಪುಗಳ ಮೇಲೆ ನಗರ ಪೊಲೀಸರು ದಾಳಿ ನಡೆಸಿ ನಗದು ಹಣ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
  ಬಸ್ ನಿಲ್ದಾಣದ ಬಳಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿಗಳಾದ ಗುಲಾಬ್ ಖಾನ್ ಜಾಫರ್ ಖಾನ್, ಖಾಜಾ ಸುಲೇಮಾನ್ ಪಟೇಲ್, ರಮೇಶ ನಾರಾಯಣ, ಶಹಾಜಿ ಮಾಣಿಕ ಫಂಡ, ಮಹ್ಮದ್ ಇಮ್ರಾನ್, ಹಣಮಂತ ಅಯ್ಯಪ್ಪ, ಮಹ್ಮದ್ ನಜೀರ್ ಅಹ್ಮದ್ ಮತ್ತು ನರಸಿಂಗ ಮಾಣಿಕರಾವ ಅವರನ್ನು ಬಂಧಿಸಿದ್ದು 6870 ನಗದು ವಶಪಡಿಸಕೊಳ್ಳಲಾಗಿದೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.
ಜೆ.ಪಿ.ಕಾಲೋನಿ:  ನಗರದ ಜೆ.ಪಿ. ಸಿಮೆಂಟ್ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿ 1725 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಲ್ಲಣ್ಣನಿಂಗಪ್ಪ, ಶರಣಪ್ಪ ಹಯ್ಯಾಳ, ಅಯ್ಯಪ್ಪ ಮಲ್ಲಪ್ಪ, ಮಲ್ಲಿಕಾರ್ಜುನ ಭೀಮಣ್ಣ, ಹಾಜಿ ಕರೀಂ ಮತ್ತು ಶೇಕ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
  ಡಿವೈಎಸ್ಪಿ ಮಹೇಶ ಮೇಗಣ್ಣನವರ್, ಸರ್ಕಲ್ ಇನ್ಸ್ಪೆಕ್ಟರ್ ವಿಜಯಕುಮಾರ್ ಹೊಸಮನಿ, ಪಿಎಸ್ಐ ಎನ್.ರಘು ಮತ್ತು ಸಿಬ್ಬಂದಿ ದಾಳಿ ನಡೆಸಿ ನಗರದ ಬಸ್ ನಿಲ್ದಾಣದ ಬಳಿ ಹತ್ತು ಆರೋಪಿಗಳನ್ನು ಬಂಧಿಸಿ, ನಗದು ಹಣ ಜಪ್ತಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.