ಮಳೆಯಿಂದಾಗಿ ಶೇಂಗಾ ಬೆಳೆ ನಷ್ಟ: ಸೂಕ್ತ ಪರಿಹಾರಕ್ಕೆ ಒತ್ತಾಯ: ಮನವಿ
ಕ.ಪ್ರ.ವಾರ್ತೆ, ಯಾದಗಿರಿ, ನ.6
ತಾಲೂಕಿನ ಹತ್ತಿಕುಣಿ ವಲಯದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ. ಕೂಡಲೇ ರೈತರಿಗೆ ಪರಿಹಾರ ಒದಗಿಸಬೇಕೆಂದು ಹತ್ತಿಕುಣಿ ಜಲಾಶಯದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ, ವೀರಭದ್ರಪ್ಪ ಯಡ್ಡಳ್ಳಿ ನೇತೃತ್ವದಲ್ಲಿ ರೈತರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರಭದ್ರಪ್ಪ ಯಡ್ಡಳ್ಳಿ ಅವರು, ಹತ್ತಿಕುಣಿ, ಯಡ್ಡಳ್ಳಿ ಮತ್ತು ಹೊನಗೇರಾ ಗ್ರಾಮದ ರೈತರು ಪ್ರತಿ ಕ್ವಿಂಟಲ್ಗೆ 7000 ದಿಂದ 8000 ಖರ್ಚು ಮಾಡಿ ಶೇಂಗಾ ಬೀಜ ಹಾಗೂ ರಸಗೊಬ್ಬರ ಖರೀದಿ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ. ಆದರೆ, ಪ್ರಕೃತಿ ವಿಕೋಪದಿಂದ ನಿರಂತರ ಮಳೆಯಿಂದ ಬಿತ್ತನೆ ಮಾಡಿದ ಬೀಜ ಸರಿಯಾಗಿ ಮೊಳಕೆ ಒಡೆಯದೇ ಹಾನಿಯಾಗಿದೆ. ಕೂಡಲೇ ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿಧಿಯಡಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಭೀಮರೆಡ್ಡಿ ರಾಂಪುರಹಳ್ಳಿ, ಜ್ಞಾನಮಿತ್ರಪ್ಪ ಯಡ್ಡಳ್ಳಿ, ರಾಜು, ಮಲ್ಲನಗೌಡ ದಳಪತಿ, ಶರಣಪ್ಪ ಮಾನ್ವಿ, ಮರೆಪ್ಪ ಬಂದಳ್ಳಿಕರ್, ಹೊನ್ನಪ್ಪ ನಾಟೇಕಾರ್, ನಿಂಗಪ್ಪ ಹೊನಗೇರಾ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

