ಗುಲ್ಬರ್ಗಾ

ಕುಡಿದ ಅಮಲಿನಲ್ಲಿ ಬಿದ್ದು ಸಾವು

Published On :

ಗುಲ್ಬರ್ಗ: ಕುಡಿದ ಅಮಲಿನಲ್ಲಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಗರದ ಸಿದ್ದಾರ್ಥ ನಗರದಲ್ಲಿ ನಡೆದಿದೆ. ಸುಭಾಷ ತಂದೆ ರಾಣಪ್ಪ ಚಾಕೆ (55) ಮೃತನು. ಬಾರ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಈತ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ದೀಪಾವಳಿ ಹಬ್ಬದ ಅಂಗವಾಗಿ ಪತ್ನಿ ಮತ್ತು ಮಕ್ಕಳು ಊರಿಗೆ ಹೋಗಿದ್ದ ವೇಳೆ ಕುಡಿದು ಮನೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಮೂರು ದಿನಗಳ ನಂತರ ಮನೆಗೆ ಬಂದ ಪತ್ನಿ ಮತ್ತು ಮಕ್ಕಳು ಮನೆಯ ಬಾಗಿಲು ಚಿಲಕ ತೆಗೆದಾಗ ಈತ ಸುತ್ತು ಬಿದ್ದಿರುವುದು ತಿಳಿದು ಬಂದಿದೆ. ಶವ ಕೊಳೆತು ಹೋಗಿದ್ದು, ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ನಿಂದ ಬಿದ್ದು ಸಾವು
ಗುಲ್ಬರ್ಗ: ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯೊಬ್ಬ ಆಯಾ ತಪ್ಪಿ ಬೈಕ್‌ನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಹಿರಾಪುರ ಬಳಿ ಸಂಭವಿಸಿದೆ. ಬ್ರಹ್ಮಪುರ ಕುಂಬಾರಗಲ್ಲಿಯ ನಿವಾಸಿ ಸುರೇಶ ತಂದೆ ಚಂದ್ರಾಮ ಪಂಚಾಳ (38) ಎಂಬಾತನೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಂಟಂ ಪಲ್ಟಿ: ಒಬ್ಬ ಸಾವು
ಚಿಂಚೋಳಿ: ತಾಲೂಕಿನ ಎಲಕಪಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಟಂಟಂ ವಾಹನ ಪಲ್ಟಿಯಾಗಿ ಒಬ್ಬ ಪ್ರಯಾಣಿಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ. ಸುಲೇಪೇಟ್ ಗ್ರಾಮದಿಂದ ಹೂವಿನಬಾವಿ ಗ್ರಾಮಕ್ಕೆ ಹೊರಟಿದಾಗ ಎಲಕಪಳ್ಳಿ ಗ್ರಾಮದ ಹತ್ತಿರದಲ್ಲಿರುವ ರಸ್ತೆಯ ಇಳಿಜಾರಿನಲ್ಲಿ ಟಂಟಂ ಪಲ್ಟಿಯಾದ ಪರಿಣಾಮ ಹೂವಿನಬಾವಿ ಗ್ರಾಮದ ಯಲ್ಲಪ್ಪಾ ಜಗನ್ನಾಥ (18) ಎಂಬಾತನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಿರಣ ಮತ್ತು ಮಹೇಶ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸುಲೇಪೇಟ್ ಪಿಎಸ್‌ಐ ಹಮೀದ್ ಪಟೇಲ್ ಭೇಟಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ನಾಳೆ ಸಮ್ಮೇಳನ, ವಿಚಾರಗೋಷ್ಠಿ
ಗುಲ್ಬರ್ಗ: ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ನ.9 ರಂದು ಬೆಳಗ್ಗೆ 11ಕ್ಕೆ ನಗರದ ಕಪನೂರ ಕೈಗಾರಿಕೆ ಪ್ರದೇಶದಲ್ಲಿ ಹೈ-ಕದ 6 ಜಿಲ್ಲೆಗಳ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮ್ಮೇಳನ ಹಾಗೂ ವಿಚಾರಗೋಷ್ಠಿ ನಡೆಯಲಿದೆ. ಗುಲ್ಬರ್ಗ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪಲ್ಲವಿ ಆಕುರಾತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಗುಲ್ಬರ್ಗ ಜೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ಎಂ. ಮಹಾದೇವ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಘದ ಗೌರವ ಅಧ್ಯಕ್ಷ ಎಸ್.ಎಂ. ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ 6 ಜಿಲ್ಲೆಗಳ ಅನುಮತಿ ಪಡೆದ ಗುತ್ತಿಗೆದಾರರು ಭಾಗವಹಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.