ಕೇಂದ್ರ ಸರ್ಕಾರ ತೊಲಗಿಸಲು ಸಿದ್ಧರಾಗಿ: ಶಾಸಕ ವಾಲ್ಮೀಕಿ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ನ.7
ಹಲವಾರು ಹಗರಣಗಳ ಸರಮಾಲೆ ಹೊತ್ತಿರುವ ಕೇಂದ್ರ ಸರ್ಕಾರವನ್ನು ತೊಲಗಿಸಲು ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಕರೆ ನೀಡಿದರು.
ತಾಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಕೋರವಾರ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2ಜಿ, ಭ್ರಷ್ಟಚಾರ, ರುಪಾಯಿ ಅಪಮೌಲ್ಯ, ದೇಶದ ಭದ್ರತೆ, ಕೋಲ್ ನಿಕ್ಷೇಪ ಹಗರಣ, ಒಲಿಂಪಿಕ್ ಸೇರಿದಂತೆ ಅನೇಕ ಹಗರಣದಲ್ಲಿ ಭಾಗಿಯಾಗಿದೆ. ಕೇಂದ್ರ ಸರ್ಕಾರದಿಂದ ಜನ ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಿಡಗುಡೆ ಮಾಡಿ ಅಭಿವೃದ್ಧಿ ಮಾಡಿದ್ದೇನೆ. ವಿವಿಧ ಕಾಮಗಾರಿಗಳಿಗೆ ಮಂಜೂರಾದ ಅನುದಾನವನ್ನು ಕಾಮಗಾರಿ ರದ್ದುಗೊಳಿಸಿ ಹೊಸ ಕಾಮಾಗಾರಿ ಅನುದಾನ ಉಪಯೋಗಿಸಿ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಹೊಸ ಅನುದಾನ ತಂದು ಕ್ಷೇತ್ರಭಿವೃದ್ಧಿ ಮಾಡಲಿ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳವಾರ ಮಾತನಾಡಿ, ದೇಶದ ತುಂಬೆಲ್ಲಾ ಮೋದಿ ಗಾಳಿ ಬಿಸುತ್ತಿದೆ. ಮೋದಿ ಪ್ರಭಾವನ್ನು ಪಕ್ಷದಲ್ಲಿ ಕಾರ್ಯಕರ್ತರು ಬೂತ್ಮಟ್ಟದಲ್ಲಿ ಹೆಚ್ಚಿಗೆ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಮುಖಂಡ ಮುಕುಂದ ದೇಶಪಾಂಡೆ, ಶಶಿಕಲಾ ತೆಂಗಳಿ, ವಿದ್ಯಾಸಾಗರ ಕುಲಕರ್ಣಿ, ತಾಲೂಕು ಅಧ್ಯಕ್ಷ ಶಶಿಕಾಂತ ಪಾಟೀಲ್ ಮಾತನಾಡಿದರು.
ಅತಿಥಿಗಳಾಗಿ ತಾಲೂಕು ಕಾರ್ಯದರ್ಶಿ ಡಾ.ಮಹೇಂದ್ರ ಕೋರಿ, ಪರಮೇಶ್ವರ ಬಾಗೋಡಿ, ಭೀಮರಾಯ ಪಾಟೀಲ್, ತಾಪಂ ಸದಸ್ಯ ಮಲ್ಲಿಕಾರ್ಜುನ ಶಿವಗೋಳ, ಮಲ್ಲಿಕಾರ್ಜುನ ನಾಮದಾರ, ಭೀಮರಾಯ ಕರದಾಳ, ಸೋಮಶೇಖರ ಸ್ವಾಮಿ, ಸಾಹೇಬಪಾಶಾ ಭಾಗವಹಿಸಿದ್ದರು.
ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸದಾಶಿವ ವಿಶ್ವಕರ್ಮ ಸ್ವಾಗತಿಸಿದರು. ಅಣ್ಣಾರಾವ ಶೆಳ್ಳಗಿ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಜೋಶಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

