ಗಡಿನಾಡಿನಲ್ಲಿ ಕನ್ನಡ ಕುಂಠಿತ: ಪಾಟೀಲ
ಗುರುಮಠಕಲ್: ನೆರೆಯ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಕನ್ನಡ ಭಾಷೆ ಕುಂಟಿತಗೊಳ್ಳುತ್ತಿದೆ ಎಂದು ಡಾ. ಸಿದ್ದಲಿಂಗರೆಡ್ಡಿ ಪಾಟೀಲ ಕಂದಕೂರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬಸವಶ್ರೀ ಸಮಾಜ ಸೇವಾ ಪ್ರತಿಷ್ಠಾನ ಹಾಗೂ ಸಮೃದ್ಧ ಕರ್ನಾಟಕ ಸಮಾಜ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಡಿನಾಡ ಕನಡೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಆಂಧ್ರ ಗಡಿ ಭಾಗವಾದ ಈ ಕ್ಷೇತ್ರದಲ್ಲಿ ಕನ್ನಡವನ್ನು ದರ್ಪಣದಲ್ಲಿ ಶೋಧಿಸುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದ ಬಹುತೇಕ ಜನರು ಅನ್ಯ ಭಾಷೆಗಳಿಗೆ ಮಾರು ಹೋಗಿ ನಮ್ಮ ನಾಡಿನ ಉತ್ತಮ ಸಂಸ್ಕೃತಿ, ಆಚಾರ ವಿಚಾರಗಳು ಮರಿಚಿಕೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಂತವೀರ ಶ್ರೀಗಳು ಮಾತನಾಡಿ, ಗಡಿಯಲ್ಲಿ ಕನ್ನಡಭಾಷೆಯ ಕಲ್ಯಾಣ ಕೇವಲ ಭಾಷಣ, ದೊಡ್ಡ ಗ್ರಂಥಗಳ ರಚನೆ, ಲೇಖನಗಳಿಂದ ಸಾಧ್ಯವಾಗಲ್ಲ. ಅದಕ್ಕೆ ಪ್ರತಿಯೊಬ್ಬರ ಮನೆಯಿಂದ ಮತ್ತು ಮನಸ್ಸಿನಿಂದ ಆರಂಭಗೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.
ಬಸವಶ್ರೀ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರೆಡ್ಡಿ ಎಂ.ಟಿ. ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಮಲ್ಲಿಕಾರ್ಜುನ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಪಂ ಸದಸ್ಯ ಪ್ರಕಾಶ ನೀರೆಟಿ, ಬಸವರಾಜ ಆವುಂಟಿ ಕೋಲಕುಂದಾ ವೇದಿಕೆ ಮೇಲಿದ್ದರು. ಉಪನ್ಯಾಸಕ ಮಲ್ಲಯ್ಯ ಮಠಪತಿ ನಿರೂಪಿಸಿದರು. ಪ್ರತಾಪರೆಡ್ಡಿ ಕೋಸ್ಗಿ ಸ್ವಾಗತಿಸಿ ಮಲ್ಲಣ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

