ಕನ್ನಡ ಉಳಿವಿಗೆ ಯುವಕರು ಮುಂದೆ ಬನ್ನಿ: ನಾಯಕ
ಯಾದಗಿರಿ: ಕನ್ನಡ ನಾಡಿನಲ್ಲಿ ಕನ್ನಡ, ನಾಡು, ನುಡಿ, ಉಳಿಸಿ ಬೆಳೆಸಲು ಯುವಕರ ಪಾತ್ರ ಮಹತ್ತರವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಯುವಕರಿಗೆ ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕಿನ ಅಲ್ಲಿಪುರ ಗ್ರಾಮದ ವೆಂಕಟೇಶ ನಗರ ತಾಂಡಾದಲ್ಲಿ ಕರವೇ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಸಮಸ್ಯೆಗಳನ್ನು ಸರಿಪಡಿಸಲು ಯುವಕರು ಸಂಘಟಕರಾಗಿ ಹೋರಾಡಿದ್ದಾಗ ಮಾತ್ರ ಸಮಸ್ಯೆಗಳನ್ನು ಬಗೆ ಹರಿಸಲು ಅನುಕೂಲವಾಗುವುದು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಲು ಸಂಘಟನೆ ಯಾವಾಗಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಗ್ರಾಮದ ಪತ್ರಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆದು ಮುಖ್ಯವಾಹಿನಿ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಕರವೇ ತಾಲೂಕ ಅಧ್ಯಕ್ಷ ವೆಂಕಟೇಶ ಮೀಲ್ಟ್ರಿ ಮಾತನಾಡಿ, ಸಂಘಟನೆಯಿಂದ ಅನ್ಯಾಯದ ವಿರುದ್ಧ ಹೋರಾಡಲು ಕರವೇ ಯಾವಗಲು ಸಿದ್ಧ ಎಂದರು.
ಅಲ್ಲಿಪುರ ತಾಲೂಕ ಪಂಚಾಯ್ತಿ ಸದಸ್ಯ ಹಂಪಯ್ಯ ಸದಗಿ ಕನ್ನಡ ಭಾವಚಿತ್ರ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಸಲಹೆಗಾರರಾದ ವೀರಪ್ಪ ಖಾನಳ್ಳಿ, ವೆಂಕಟೇಶ ರಾಠೋಡ, ಮಹಾವೀರ ಲೀಂಗೇರಿ, ಅರ್ಜುನ ಪವಾರ, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡುಗುಡಿ, ಹಣಮಂತ ನಾಯಕ, ಮನ್ನು ಚವ್ಹಾಣ, ಡಾ. ರಾಜು, ಶಂಕರ ರಾಠೋಡ್, ಮಲ್ಲು ವರ್ಕನಳ್ಳಿ, ದಶರಥ, ರಾಠೋಡ್, ಸಿದ್ದು ನಾಯಕ, ಮಲ್ಲು ರಾಮಸಮುದ್ರ, ನೇಹರು ಚವ್ಹಾಣ ಸೇರಿದಂತೆ ನೂರಾರು ಜನರು ಕಾರ್ಯಕರ್ತರು ಇದ್ದರು.
ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ನಾರಾಯಣ ಪವಾರ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಕರವೇ ನೂತನ ಪಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿನೋಧ ಪವಾರ (ಅಧ್ಯಕ್ಷರು), ವೆಂಕಟೇಶ ಚವ್ಹಾಣ (ಗೌರವ ಅಧ್ಯಕ್ಷ), ಗೋವಿಂದ ರಾಠೋಡ್ ( ಉಪಾಧ್ಯಕ್ಷ), ವಿಜೇಯ ಪವಾರ (ಪ್ರಧಾನ ಕಾರ್ಯಾದರ್ಶಿ), ರಡ್ಡಿ ರಾಠೋಡ್ ಸಂಘಟನಾ ಕಾರ್ಯದರ್ಶಿ), ಗೋವಿಂದ ಎಸ್, ರಾಠೋಡ್ ಸಂಚಾಲಕ), ಮಂಗಿಲಾಲ ರಾಠೋಡ್ ಖಜಾಂಜಿ), ಮಹಿಬೂಬ (ಸಹಕಾರ್ಯದರ್ಶಿ), ಗೋವಿಂದ ಪಿ. ರಾಠೋಡ್ (ಸದಸ್ಯ) ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

