ಆನ್ಲೈನ್ ಅವಾಂತರ: ಭೂ ಸರ್ವೆ ಕಾರ್ಯ ವಿಳಂಬ
ಕನ್ನಡಪ್ರಭ ವಾರ್ತೆ ಆಳಂದ ನ. 10
ಸುಮಾರು ಆರು ತಿಂಗಳಿಂದ ನೆನಗುದ್ದಿಗೆ ಬಿದ್ದುಕೊಂಡಿರುವ ಅರ್ಜಿ ಸಲ್ಲಿಸಿದ ಭೂ ಸರ್ವೆ ಕಾರ್ಯಕ್ಕೆ ಒಂದಿಲ್ಲೊಂದು ತಾಂತ್ರಿಕ ಅಡೆತಡೆ ಸೃಷ್ಟಿಯಾಗಿ ಕಚೇರಿಯ ಸಿಬ್ಬಂದಿ, ಸಾರ್ವಜನಿಕರೆಲ್ಲರಿಗೂ ಪರದಾಟ ಮುಂದುವರೆದಿದೆ.
ಈ ವ್ಯವಸ್ಥೆಗೆ ಬೇಸತ್ತು ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂದು ಪ್ರಶ್ನಿಸಿ ರೈತಾಪಿ ವರ್ಗ ಹಿಡಿಶಾಪ ಹಾಕತೊಡಗಿದ್ದಾರೆ. ಭೂ ಸರ್ವೆಗಾಗಿ ಹಲವು ತಿಂಗಳಿಂದ ನಿತ್ಯ ಹತ್ತಿಪ್ಪತ್ತು ಅರ್ಜಿಗಳ ಸಲ್ಲಿಕೆಯಾಗುತ್ತಲೇ ಇವೆ. ಆದರೆ ಕಡತ ಮಾತ್ರ ವಿಲೇವಾರಿಯಾಗದೆ ತಡೆಯಾಗಿ ಜನರಿಗೆ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಈಗಿರುವ ಸಿಬ್ಬಂದಿ ಮೇಲೆ ಈ ಕೆಲಸವನ್ನು ತುರ್ತು ಸೇವೆ ಒದಗುತ್ತದೆ ಎಂಬುದು ಅಸಾಧ್ಯವಾಗಿ ಪರಿಣಮಿಸಿದೆ. ಆನ್ಲೈನ್ ಕಡತ ಹಂಚಿಕೆಗೂ ವಿಳಂಬವಾಗತೊಡಗಿದೆ. ಸ್ಥಳೀಯ ಕಚೇರಿಗಳಿಂದ ಮಾಹಿತಿ ಕಳುಹಿಸಿದ ಮೇಲೂ ಬೆಂಗಳೂರಿಗೆ ಬಂದಿಲ್ಲ ಎಂದು ಎರಡ್ಮೂರು ದಿನಗಳ ಕಾಲ ದಿನದೊಡಲಾಗಿದೆ. ಆದಾದ ಬಳಿಕ ಮತ್ತೊಮ್ಮೆ ಮಾಹಿತಿ ಕಳುಹಿಸಿಕೊಡು ಎಂದು ದಿನದೊಡಿದ ಘಟನೆ ಸ್ಥಳೀಯ ಶಾಖೆಯಲ್ಲಿ ನಡೆದಿದೆ.
ನೇಮಕ: ಹೀಗಾಗಿ ಸಾರ್ವಜನಿಕರ ಕೆಲಸಕ್ಕೆ ಹಿನ್ನೆಡೆಯಾಗಿ ಭಾರಿ ಪರದಾಟಕ್ಕೆ ಕಾರಣವಾದರೂ, ಸಂಬಂಧಿತ ಜಿಲ್ಲೆಯ ಅಥವಾ ರಾಜ್ಯದ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂದು ಸಾರ್ವಜನರಿಕರು ಬಹಿರಂಗವಾಗಿ ಶಾಪ ಹಾಕಿದ್ದಾರೆ. ಸ್ಥಳೀಯ ಭೂಮಾಪನ ಶಾಖೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಸೇರಿ ಭೂ ಸರ್ವೆಯರ್ಗಳಾಗಿ ಸುಮಾರು 11 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಮೊನ್ನೆ ಮೂವರಿಗೆ ಸರ್ಕಾರಿ ನೇಮಕಾತಿ ಆದೇಶ ಬಂದ ಮೇಲೆ ಸ್ಥಳ ಖಾಲಿಯಾಗಿದೆ. ಆದ್ದರಿಂದ ಗಣಕ ಯಂತ್ರದ ಲಾಗಿನ್ ತೆಗೆದು ಹಾಕುವಂತೆ ಸ್ಥಳೀಯ ಅಧಿಕಾರಿಗಳು ಕಳೆದ ಅ. 29 ರಂದು ಮೇಲ್ ಮೂಲಕ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಾಹಿತಿ ನೀಡಿ ಆದೇಶಕ್ಕೆ ಇಲ್ಲಿಯ ಅಧಿಕಾರಿಗಳು ಕಾದು ಕುಳಿತಾಗಲೂ ನಿಮ್ಮ ಮಾಹಿತಿಯೇ ಬಂದಿಲ್ಲ ಮತ್ತೊಮ್ಮೆ ಮಾಹಿತಿ ಕಳುಹಿಸಿಕೊಡಿ ಎಂದ್ದಾರೆ ಮೇಲಾಧಿಕಾರಿಗಳು.
ಲಾಗಿನ್ ಅವಾಂತರ: ಹೀಗೆ ಸ್ಥಳೀಯ ಮತ್ತು ಬೆಂಗಳೂರಿನ ಸಿಬ್ಬಂದಿ ನಡುವೆ ವಾರದಿಂದ ತಾಕಲಾಟವಾಗಿ ಕೆಲಸ ಸ್ಥಗಿತವಾಗಿ ನಿಂತುಕೊಂಡಿದೆ. ಒಂದೊಮ್ಮೆ ಅರ್ಜಿ ಸಲ್ಲಿಕೆಯಿಂದ ಕಡತ ಹಂಚಿಕೆಯಾದರೆ ನೇಮಕಾತಿಗೊಂಡು ವರ್ಗವಾಗಿರುವವರ ಹೆಸರಿಗೂ ಕಡತಗಳು ಮಂಜೂರಾದರೆ, ಮತ್ತೊಬ್ಬರ ಹೆಸರಿಗೆ ಕಡತ ವರ್ಗಾಯಿಸಲು ಮೂರು ತಿಂಗಳ ಕಾಲಾವಶಕಾಶ ತೆಗೆದುಕೊಳ್ಳತ್ತದೆ. ಇದಕ್ಕಾಗಿ ಮೊದಲು ವರ್ಗವಾಗಿರುವ ಸಿಬ್ಬಂದಿಗಳ ಲಾಗಿನ್ ತೆಗೆದು ಹಾಕುವ ಒಂದೆರಡು ನಿಮಿಷದ ಕೆಲಸಕ್ಕೆ ವಾರಗಟ್ಟಲೆ ತೆಗೆದುಕೊಂಡಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಲಾಖೆಯೂ ಭೂ ಸರ್ವೆ ಕಾರ್ಯವನ್ನು ಅರ್ಜಿಗಳ ಆಧಾರದ ಮೇಲೆ ಬೆಂಗಳೂರಿನಿಂದಲೇ ಆನ್ಲೈನ್ ಮೂಲಕ ಸ್ಥಳೀಯ ಸಿಬ್ಬಂದಿಗಳಿಗೆ ಕೆಲಸ ಹಂಚಿಕೆ ಮಾಡುತ್ತಿದೆ. ಹಂಚಿಕೆಯಾದ ಕೆಲಸವನ್ನು ಪರವಾನಿಗೆ ಪಡೆದ ಮತ್ತು ಸರ್ಕಾರಿ ಭೂಮಾಪಕರು ಯತ್ತಾವತ್ತಾಗಿ ಕೆಲಸ ನಿರ್ವಹಿಸುತ್ತಿದ್ದರು. ಇದು ಕೂಡ ವಿಳಂಬಕ್ಕೆ ಕಾರಣವಾಗಿದೆ ಎಂದು ಅರ್ಜಿದಾರರು ದೂರುತ್ತಲೇ ಇದ್ದರು.
ಕಳೆದ ಎರಡೂ ತಿಂಗಳ ಹಿಂದೆ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಗೊಳಿಸಿದ ಮೇಲೆ ರಾಜ್ಯದಾದ್ಯಂತ ಪರವಾನಿಗೆ ಪಡೆದ ಭೂಮಾಪಕರು ನಮ್ಮನ್ನೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸತ್ಯಾಗ್ರಹ ಆರಂಭಿಸಿದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಕೆಲಸ ಎಲ್ಲಡೆ ಸ್ಥಗಿತಗೊಂಡು ಸಾವಿರಾರು ಅರ್ಜಿಗಳು ವಿಲೇವಾರಿಗೊಳ್ಳದೆ ಧೂಳು ತಿನ್ನುತ್ತಿವೆ.
ನಿರ್ಲಕ್ಷ್ಯ: ಇಂಥ ಹೊತ್ತಿನಲ್ಲಿ ಭೂಸರ್ವೆರು ಕೆಲಸಕ್ಕೆ ಮರಳಿದ ಮೇಲೆ ಇನ್ನೇನು ಕೆಲಸ ಆರಂಭಗೊಂಳ್ಳುತ್ತದೆ ಎನ್ನುವಷ್ಟರಲ್ಲೆ ಆನ್ಲೈನ್ ನೋಡಿಕೊಳ್ಳುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾರಗಟ್ಟಲೆ ನೆನಗುದ್ದಿಗೆ ಬಿದ್ದುಕೊಂಡಿದೆ. ಸರ್ಕಾರ ಮಟ್ಟದಲ್ಲಿ ಸತ್ಯಾಗ್ರಹಕ್ಕೆ ಸ್ಪಂದನೆಯಾದ ಹಿನ್ನೆಲೆಯಲ್ಲಿ ಪರವಾನಿಗೆ ಪಡೆದ ಭೂಮಾಪಕರು ಮತ್ತೆ ಕೆಲಸಕ್ಕೆ ಹಾಜರಾಗಿ ಕೆಲಸ ಕೈಗೊಳ್ಳಬೇಕೆಂದರು ವಾರ ಕಳೆದರು ಆನ್ಲೈನ್ ಮೂಲಕ ಕೆಲಸ ಹಂಚಿಕೆಯಾಗದ ಇರುವುದು ಅವರನ್ನು ಹತಾಶಯ ಗೊಳಿಸಿದಲ್ಲ, ಮತ್ತೊಂದಡೆ ಅರ್ಜಿದಾರರಿಗೂ ನುಂಗದ ತುತ್ತಾಗಿ ಪರಿಣಮಿಸಿದೆ. ಭೂ ಸರ್ವೆ ಕಡತ ಸೇರಿ ವ್ಯಾಪ್ತಿಯ ಯಾವುದೇ ಕೆಲಸ ಬಾಕಿ ಉಳಿಸಿಲ್ಲ. ಆನ್ಲೈನ್ ಕಡತ ಹಂಚಿಕೆಯಿಂದ ಕೊಂಚ ವಿಳಂಬವಾಗಿದೆ. ಸರಿಪಡಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ ಪರಮೇಶ್ವರ ಕೆ. ಸ್ವಾಮಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

