ಗುಲ್ಬರ್ಗಾ

ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಸೂಕ್ತ

Published On :

ಆಳಂದ: ಸ್ಥಳೀಯ ಕೋರ್ಟ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥ ಪಡಿಸುವ ಕೆಲಸ ಆರಂಭಗೊಂಡಿದೆ. ವಿನಃ ಕಾರಣ ಕೋರ್ಟಿಗೆ ಹಣ ಹಾಗೂ ಸಮಯ ಹಾಳು ಮಾಡಿಕೊಳ್ಳದೆ ನಾಗರಿಕರು ತಮ್ಮ ಸಾಮಾನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜು ಆವರಣದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ರಥ ಪ್ರವಾಸದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಬ್ಬಿಣದ ಕಡಲೆ: ಹಿಂದೆ ಕಾನೂನು ತಿಳಿದುಕೊಳ್ಳುವುದು ಕಬ್ಬಿಣದ ಕಡಲೆಯಾಗಿತ್ತು. ಆದರಿಗ ಮನೆಬಾಗಿಲಿಗೆ ಕಾನೂನು ಮಾಹಿತಿ ಬಂದರು ತಿಳಿದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕಾನೂನು ತಜ್ಞರು, ಅಧಿಕಾರಿಗಳು ಬಂದಾಗ ನಾಗರಿಕರು ಭಾಗವಹಿಸಿ ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹರಿಸಿಕೊಂಡರೆ ಕಾನೂನು ಅರಿವು ನೆರವು ಕಾರ್ಯಕ್ರಮದ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
 ಜನನ ಮತ್ತು ಮರಣ ಪ್ರಮಾಣ ದಾಖಲೆ ಕುರಿತು ನ್ಯಾಯವಾದಿ ಬಿ.ಜಿ.ಬೀಳಗಿ ಹಾಗೂ ಕಡ್ಡಾಯ ಶಿಕ್ಷಣ ಕುರಿತು ನ್ಯಾಯವಾದಿ ಮುದ್ದಸರ್ ಮುಲ್ಲಾ ಉಪನ್ಯಾಸ ನೀಡಿದರು.
ಕಾನೂನು ಅರಿವು ಅಗತ್ಯ: ಸಿಪಿಐ ಕೆ.ಎಸ್. ಹಟ್ಟಿ ವಿದ್ಯಾರ್ಥಿ ದಿಸೆಯಲ್ಲಿ ಕಾನೂನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಪ್ರಾಚಾರ್ಯ ಶಿವಶರಣಪ್ಪ ಮುಳೆಗಾಂವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಇಒ ಲಕ್ಷ್ಮಣ ಶೃಂಗೇರಿ, ಪಿಎಸ್‌ಐ ಮಹಾದೇವ ಪಂಚಮುಖಿ, ಸರ್ಕಾರಿ ವಕೀಲ ಶರಣಗೌಡ ಪಾಟೀಲ್, ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಡಿ. ಬೋಸಗೆ, ಪ್ರಧಾನ ಕಾರ್ಯದರ್ಶಿ ಸ್ವಾಮಿರಾವ ಚನ್ನಗುಂಡ, ಮುಖ್ಯಗುರು ಪಾರ್ವತಿ ತೋಟದ, ಶಿಕ್ಷಣ ಸಂಯೋಜಕ ಕೆ. ಬಸವರಾಜ, ಕಮಲ ರಾಠೋಡ, ಯು.ಕೆ. ಇನಾಮದಾರ, ಸಿ.ಎಸ್.ತೋಳೆ, ಗುರುನಾಥ ಗೌಡಪ್ಪ ಪಾಲ್ಗೊಂಡಿದ್ದರು.ನ್ಯಾಯವಾದಿ ಶಿವಂಕರ ಮುನ್ನೋಹಳ್ಳಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.