ಶಾದಿಭಾಗ್ಯ ವಿರೋಧಿಸಿ ಕರವೇ ಪ್ರತಿಭಟನೆ
ಚಿತ್ತಾಪುರ: ರಾಜ್ಯ ಸರ್ಕಾರದ ಶಾದಿಭಾಗ್ಯ ಯೋಜನೆಗೆ ವಿರೋಧಿಸಿ ಸೋಮವಾರ ಚಿತ್ತಾಪುರದಲ್ಲಿ ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ಮಾಡಿ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ವಿವಿಧ ಜಾತಿ ಧರ್ಮಗಳಲ್ಲಿ ಕಡು ಬಡವರಿದ್ದಾರೆ. ಕೇವಲ ಒಂದೇ ಜಾತಿಯವರಿಗೆ ಯೋಜನೆ ನೀಡಿದರೇ ಉಳಿದ ಜಾತಿ ಜನಾಂಗದವರಲ್ಲಿ ಬಡವರಿಗೆ ಅನ್ಯಾಯವಾದಂತಾಗುತ್ತದೆ. ಒಂದೇ ಜಾತಿಯವರಿಗೆ ಯೋಜನೆ ನೀಡಿ, ಇನ್ನೊಂದು ಜಾತಿಯವರಿಗೆ ಯೋಜನೆ ಸಿಗದೆ ಇರುವುದು ನ್ಯಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಎಲ್ಲರನ್ನೂ ಸಮಾನತೆ ದೃಷ್ಟಿಯಿಂದ ನೋಡಬೇಕು. ಜಾತಿಯತೇ ತೋರಿಸದೇ ಮಾನವನ ಹಿತದೃಷ್ಟಿಯಿಂದ ಸಮಾನತೆ ತೋರಬೇಕು. ಸರ್ಕಾರ ಈ ಯೋಜನೆ ಜಾರಿಗೆ ಮಾಡುವುದಾದರೆ ಎಲ್ಲ ಜನಾಂಗದವರಿಗೆ ಸಿಗುವಂತಾಗಲಿ. ಇಲ್ಲದಿದ್ದರೆ ಈ ಯೋಜನೆ ಜಾರಿಗೆ ಮಾಡಬಾರದು. ನಿರ್ಲಕ್ಷ್ಯವಹಿಸಿದರೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಮಲ್ಲೇಶ ತಂಗಾ ಮನವಿ ಪತ್ರ ಸ್ವೀಕರಿಸಿದರು. ಕರವೇ ಮುಖಂಡರಾದ ಲಕ್ಷ್ಮೀ ವಗ್ಗರ್, ಬಸವರಾಜ ಮಡಿವಾಳ, ಮಂಜುನಾಥ ಸ್ವಾಮಿ, ರಾಮು ಹಡಪದ, ಅಂಬರೀಷ್ ಚಪಾಟ್ಸೆ, ವೀರೇಶ ಇವಣಿ, ಬಸವರಾಜ ಗಡ್ಡಿಮನಿ, ತಿಮ್ಮಯ್ಯ ಜಂಗಳಿಕರ್, ಸುಧಾಕರ್ ಚಿತ್ತಾಪುರಕರ್, ತಿಮ್ಮಯ್ಯ ರಾವೂರ, ಅಸ್ಲಮ್ ಮುಲ್ಲಾ, ರಾಜು ಕುಲಕರ್ಣಿ, ನರಸಿಂಹುಲು ಗುತ್ತೇದಾರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

