ಭ್ರಷ್ಟಾಚಾರ ತೊಲಗಿಸಿ, ನರೇಂದ್ರ ಮೋದಿ ಗೆಲ್ಲಿಸಿ
ಸುರಪುರ: ಭ್ರಷ್ಟಾಚಾರದಲ್ಲಿ ತೊಡಗಿದ ಯುಪಿಎ ಸರ್ಕಾರವನ್ನು ಕಿತ್ತೊಗೆಯಲು ನರೇಂದ್ರ ಮೋದಿಯವರು ನಡೆಸುವ ಬೆಂಗಳೂರು ಬಹಿರಂಗ ಸಭೆ ಕಾರ್ಯಕ್ರಮ ಬೆಂಬಲಿಸುವಂತೆ ಇಲ್ಲಿಯ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.
ತಾಲೂಕು ಬಿಜೆಪಿ ಕಚೇರಿ ಆವರಣದಲ್ಲಿ ಸೋಮವಾರ ಬೈಕ್ ರ್ಯಾಲಿಗೆ ಪಕ್ಷದ ಮುಖಂಡ ವೇಣುಗೋಪಾಲ ಜೇವಗರ್ ಚಾಲನೆ ನೀಡಿ, ಕೇಂದ್ರದಲ್ಲಿರುವ ಯುಪಿಎ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೀತಿ ಮೀರಿದ ಭ್ರಷ್ಟಾಚಾರದಿಂದ ಇಂದು ದೇಶವನ್ನು ಅದೋಗತಿ ತಂದಿಟ್ಟಿದೆ. 2ಜಿ ಸ್ಟ್ರೆಕಂ, ಕಲ್ಲಿದ್ದಲು ಸೇರಿದಂತೆ ಹಲವಾರು ಪ್ರಕರಣದಲ್ಲಿ ಯುಪಿಎ ಸಚಿವರು ಭಾಗಿಯಾಗಿ ದೇಶವನ್ನು ಲೂಟಿ ಮಾಡಿದ್ದಾರೆ. ಸ್ವಚ್ಛ ಆಡಳಿತ ನೀಡುವ ಭರವಸೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನತೆ ನೀಡಿದ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡಿದೆ. ದೇಶದ ಪ್ರತಿ ಪ್ರಜೆಯ ತಲೆಯ ಮೇಲೆ ಸಾಲದ ಹೊರೆ ಹೊರಿಸಿದೆ ಎಂದು ಆರೋಪಿಸಿದರು.
ಓಲೈಕೆ ತಂತ್ರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಕ್ಷೀರಭಾಗ್ಯ, ಅನ್ನಭಾಗ್ಯ, ಹಾಗೂ ಶಾದಿಭಾಗ್ಯ ಯೋಜನೆಗಳನ್ನು ಜಾರಿ ಮಾಡಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ತಂತ್ರವಾಗಿದೆ. ಈ ಯೋಜನೆ ಉಪಯೋಗಕ್ಕಿಂತ ದುರಯೋಗವಾಗುತ್ತಿರುವುದೇ ಹೆಚ್ಚು. ಶಾದಿಭಾಗ್ಯ ಯೋಜನೆ ಕೇವಲ ಅಲ್ಪ ಸಂಖ್ಯಾಯತರಿಗಾಗಿ ಜಾರಿ ಮಾಡಿರುವುದು ಅವೈಜ್ಞಾನಿಕ ನಿಲುವಾಗಿದೆ. ಈ ಯೋಜನೆಯಿಂದ ಇತರೆ ಸಮುದಾಯದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರ್ಯಾಲಿ: ಮುಖಂಡ ರಮೇಶ ಶೆಟ್ಟಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಹಾಗೂ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಯುವ ಶಕ್ತಿಯನ್ನು ಒಗ್ಗೂಡಿಸಲು ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಭ್ರಷ್ಟಾಚಾರಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ನಮೋ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಯುವ ಶಕ್ತಿ ಮುಂದಾಗಬೇಕು. 17ರಂದು ಬೆಂಗಳೂರಿನಲ್ಲಿ ನಡೆಯುವ ಮೋದಿಯವರ ಬಹಿರಂಗ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಲ್ಲಣ್ಣ, ಬೀಮರಾವ, ಬಸವರಾಜ ಜಡಿಮರಳ, ಮಲ್ಲೇಶಿ ಪಾಟೀಲ, ಚಂದ್ರು ಸಕ್ರೀನ್, ಶರಣಬಸವ, ಅನಿಲಕುಮಾರ, ಅಂಬ್ರೇಶ ನಾಯಕ, ರಂಗಪ್ಪ ನಾಯಕ, ಮಲ್ಲು ಹೂಗಾರ, ಗುರುನಾಥ ರೆಡ್ಡಿ, ಗೋಪಾಲ, ನಾರಾಯಣ, ಮುಪ್ಪಯ್ಯ ಸ್ವಾಮಿ, ಮಡಿವಾಳಪ್ಪ ಗೌಡ, ನಾಗಪ್ಪ ಕಕ್ಕೇರಿ, ಹಣ್ಮಂತ, ಚಂದ್ರು ಮಡಿವಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

