ಕೃಷಿ ಪರಿಕರ ಕಚೇರಿಯಲ್ಲೇ ವಿತರಿಸಿ
ಕನ್ನಡಪ್ರಭ ವಾರ್ತೆ ಆಳಂದ ನ.12
ಆಳಂದ ಪಟ್ಟಣದ ಕೃಷಿ ಇಲಾಖೆಯ ಕಚೇರಿಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಹಠಾತ್ ಭೇಟಿ ನೀಡಿ ಇಲಾಖೆಯ ಅವ್ಯವಸ್ಥೆಗೆ ಕಿಡಿಕಾರಿದರು.
ಕಚೇರಿಯಲ್ಲಿ ಯಾಮೊಬ್ಬ ಅಧಿಕಾರಿಯೂ ಇಲ್ಲದನ್ನು ಕಂಡು ಸಿಡಿಮಿಗೊಂಡರು. ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಾಹ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಏನ್ರಿ ಊಟದ ಸಮಯ ಅಂಥ ಹೋದವರು 3 ಗಂಟೆಯಾದರೂ ಕಚೇರಿಗೆ ಬಂದಿಲ್ಲ. ಅಲ್ಲದೆ ಯಾಮೊಬ್ಬ ಸಿಬ್ಬಂದಿಯೂ ಇಲ್ಲ. ರೈತರು ಕಚೇರಿಗೆ ಬಂದರೆ ಯಾರ್ರಿ ಸಮಸ್ಯೆ ಕೇಳೊರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಆತ್ಮ ವಿಭಾಗದ ತಾಂತ್ರಿಕ ಅಧಿಕಾರಿ ಶಂಕರ ಗೊಂದಳಿ ಅವರು ಆತ್ಮ ಯೋಜನೆಯ ಮಾಹಿತಿ ಒದಗಿಸಿ ಲಾಡ ಚಿಂಚೋಳಿ, ಕೊಡಲಹಂಗರಗಾ ಗ್ರಾಮಗಳಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ. ಮಾದನ ಹಿಪ್ಪರಗಾ, ಕಿಣ್ಣಿಸುಲ್ತಾನ ಗ್ರಾಮ ಸೇರಿದಂತೆ 2013-14ನೇ ಸಾಲಿನ ಗ್ರಾಮಗಳಲ್ಲಿ 15 ರಿಂದ 20 ಸದಸ್ಯರನೊಳಗೊಂಡ ರೈತರಿಂದ ಸಂಘ ರಚನೆ ಕಾರ್ಯ ಚಾಲನೆಯಲ್ಲಿದೆ ಎಂದು ವಿವರಿಸಿದರು.
ಸರ್ಕಾರಕ್ಕೆ ಒತ್ತಾಯ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್ ಅವರು, ಹಿಂದೆ ರಾಜ್ಯ ಸರ್ಕಾರ 25 ಸಾವಿರ ಮನ್ನಾ ಮಾಡಿದೆ. ಅದು ಇನ್ನೂ ಬ್ಯಾಂಕ್ಗಳಿಗೆ ಜಮಾವಣೆಯಾಗಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಕಾಲಕ್ಕೆ ಕೃಷಿ ಸಾಲ ನೀಡುತ್ತಿಲ್ಲ.
ಇದನ್ನು ಮನಗಂಡು ರಾಜ್ಯದ ಮುಖ್ಯಮಂತ್ರಿಗಳು ಸಾಲ ಮನ್ನಾ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕಚೇರಿಯಲ್ಲೆ ಸಬ್ಸಿಡಿಗೆ ಆಗ್ರಹ: ಸಬ್ಸಿಡಿ ಕೃಷಿ ಪರಿಕರಗಳನ್ನು ರೈತ ಸಂಪರ್ಕ ಕಚೇರಿಯಲ್ಲಿ ವಿತರಣೆಯಾಗುತ್ತಿಲ್ಲ ಎಂಬ ದೂರುಗಳು ಬಂದಿವೆ.
ಈ ಕುರಿತು ನಮ್ಮ ಗಮನಕ್ಕಿಲ್ಲ. ಆಯಾ ರೈತಸಂಪರ್ಕ ಕೇಂದ್ರಗಳಲ್ಲೇ ಸರ್ಕಾರದ ಕೃಷಿ ಸಾಮಾಗ್ರಿಗಳನ್ನು ವಿತರಣೆಗೆ ಅಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದು ಧಂಗಾಪುರ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

