ಗುಲ್ಬರ್ಗಾ

ಮಾಜಿ ಶಾಸಕ ವಾಲ್ಮೀಕಿಗೆ ಆರೋಪ ಮಾಡುವುದೇ ಕೆಲಸ: ಪ್ರಿಯಾಂಕ್

Published On :

ಕನ್ನಡಪ್ರಭ ವಾರ್ತೆ  ಚಿತ್ತಾಪುರ  ನ.16
ಮಾಜಿ ಶಾಸಕ ವಾಲ್ಮೀಕಿ ನಾಯಕ ತಮ್ಮ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡದೇ ಇರುವುದರಿಂದ ಜನರು ಅವರಿಗೆ ಸೋಲಿಸುವ ಮೂಲಕ ಬುದ್ಧಿ ಕಲಿಸಿದ್ದಾರೆ. ಆದರೆ ಅವರಿಗೆ ಬುದ್ಧಿ ಬರದೇ ನನ್ನ ವಿರುದ್ಧ ಆರೋಪ ಮಾಡುವುದನ್ನೇ ಒಂದು ಕೆಲಸವಾಗಿ ಮಾಡುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ರಾಮತೀರ್ಥದಲ್ಲಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿ, 4 ವರ್ಷ ಶಾಸಕರಾಗಿದ್ದಾಗ ಅವರದೇ ಸರ್ಕಾರ ಮತ್ತು ಜಿಲ್ಲೆಯವರೇ ಪಶುಸಂಗೋಪನೆ ಸಚಿವರಾಗಿದ್ದರೂ ಈ ಭಾಗದ ಜನರ ಬೇಡಿಕೆಯಾಗಿದ್ದ ಪಶು ಆಸ್ಪತ್ರೆ ಮಂಜೂರು ಮಾಡಲಾಗಲಿಲ್ಲ. ಈಗ ನಮ್ಮ ಸರ್ಕಾರ ಬಂದು ಇನ್ನು 6 ತಿಂಗಳು ಕಳೆದಿಲ್ಲ ಆಗಲೇ ನಾನು ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪ ಮಾಡುತ್ತಿರುವುದು ಅವರಿಗೆ ಶೋಭೆ ತಾರದು ಎಂದು ಹೇಳಿದರು.
ವೃಥಾ ಆರೋಪ ಮಾಡಬೇಡಿ: ನಾನು ಶಾಸಕರ ಅನುದಾನದ ಜತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಶೇಷ ಅನುದಾನದಿಂದ  ಆರ್‌ಎಂಎಸ್ ಶಾಲೆಗಳಿಗೆ 10 ಕೋಟಿ, ಚಿತ್ತಾಪುರ ಹಾಗೂ ವಾಡಿಯಲ್ಲಿ ಒಳ ಚರಂಡಿಗಾಗಿ 65 ಕೋಟಿ, ಕ್ರಿಡಾಂಗಣಗಳಿಗೆ 25 ಲಕ್ಷ, ಅಲ್ಪಸಂಖ್ಯಾತರಿಗೆ 10 ಕೋಟಿ, ಆದರ್ಶ ವಿದ್ಯಾಲಯಕ್ಕೆ 3 ಕೋಟಿ, ಕನ್ನಡ ಭವನಕ್ಕೆ 20 ಲಕ್ಷ ಹೀಗೆ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ತಂದು ಅಭಿವೃದ್ಧಿಗೆ ಪ್ರಯತ್ನಿಸುತ್ತಿರುವೆ. ಇವೆಲ್ಲ ಪ್ರತಿಪಕ್ಷದವರಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.
ಗ್ರಾಮದ ಮುಖಂಡ ಜಗನಗೌಡ, ಕೆಪಿಸಿಸಿ ಸದಸ್ಯ ನಾಗರೆಡ್‌ಡಿ ಪಾಟೀಲ್ ಕರದಾಳ, ತಾಪಂ ಮಾಜಿ ಅಧ್ಯಕ್ಷ ಶಾಂತಪ್ಪ ಚಾಳಿಕಾರ್, ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು. ಚಂದ್ರು ದೇವರ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.