ಗುಲ್ಬರ್ಗಾ

ಸುರಪುರದವರಿಗೆ ನವೆಂಬರ್ ಕರಾಳ ಮಾಸ

Published On :

2000ರ ನ.3ರಂದು ಬಿಜಾಪುರದ ಹಿಟ್ನಾಳ್ ಬಳಿ ಡಿಕ್ಕಿಯಿಂದ 22 ಮಂದಿ ಮೃತಪಟ್ಟಿದ್ದರು
ಸುರಪುರದವರ ದುರಾದೃಷ್ಟ ಎಂದೇ ಹೇಳಬೇಕು, ಅದ್ಯಾಕೋ ಏನೋ, ಜವರಾಯ ಈ ತಾಲೂಕಿನ ಬಡವರ ಮೇಲೆಯೇ ಸವಾರಿ ಮಾಡುತ್ತಿರುವಂತಿದೆ.
ಬರೋಬ್ಬರಿ 13 ವರ್ಷದ ಹಿಂದೆ (ನವೆಂಬರ್ 3, 2000) ಸುರಪುರದ ರಾಯನಪಾಳ್ಯದಿಂದ ಮಹಾರಾಷ್ಟ್ರದ ಕರಾಡ್, ಸಾತಾರಕ್ಕೆ ಕೂಲಿಗೆಂದು ವಾಹನ ಹತ್ತಿ ಹೊರಟಿದ್ದ ಜನತೆ ಬಿಜಾಪುರ ಜಿಲ್ಲೆ ಹಿಟ್ನಾಳ್ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿಯೂ ಸತ್ತವರು 22 ಜನ ಎಂಬುದು ಗಮನಾರ್ಹ.
ಉಪ್ಪಲದಿನ್ನಿ ಸೇರಿದಂತೆ ಹಲವು ತಾಂಡಾಗಳಿಂದ ಸಾವಂತವಾಡಿಗೆ ಕೂಲಿಗೆ ಹೊರಟವರು ಬೆಳಗಾವಿ ಬಳಿಯ ಹಲ್ಕಿಯಲ್ಲಿ ಅಪಘಾತಕ್ಕೆ ಒಳಗಾಗಿ ಅಲ್ಲಿಯೂ ಸತ್ತವರು 22 ಮಂದಿ. ನವೆಂಬರ್‌ನಲ್ಲೇ ಕಾರ್ಮಿಕರು ಗುಳೆ ಹೊರಟು ಸಾವನ್ನಪ್ಪುತ್ತಿರುವುದರಿಂದ ಸುರಪುರದವರ ಪಾಲಿಗೆ ನವೆಂಬರ್ ಅದ್ಯಾಕೋ ಕರಾಳ ತಿಂಗಳಾಗಿ ದಾಖಲಾಗುತ್ತಿದೆ. ಹಿಟ್ನಾಳ್ ದುರಂತದಲ್ಲಿ ರಾಯನಪಾಳ್ಯದ ಬೇಡ ನಾಯಕ ಸಮುದಾಯದ 22 ಮಂದಿ ಸಾವನ್ನಪ್ಪಿದ್ದರೆ, ಬೆಳಗಾವಿಯಲ್ಲಿನ ದುರಂತದಲ್ಲಿ ಲಂಬಾಣಿ ಸಮುದಾಯದ ಜನರೇ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.