ಗಿರೀಶ ಜಕಾಪುರೆಗೆ ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ
ಶಹಾಪುರ: ಅಕ್ಕಲಕೋಟ ತಾಲೂಕಿನ ಮೈಂದ್ರಗಿಯ ಗಡಿನಾಡ ಕವಿ ಗಿರೀಶ ಜಕಾಪೂರೆ ಅವರ 'ಹೆಣ್ಣಾಗದ ಭ್ರೂಣಗಳು' ಎನ್ನುವ ಕಾವ್ಯ ಸಂಕಲನಕ್ಕೆ ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಹಚ್ಚೇವು ಕನ್ನಡದ ದೀಪ ಎಂಬ ನಾಡಗೀತೆಯ ಮುಖಾಂತರ ಮನೆಮನೆ ಮಾತಾದ ಬೆಳಕಿನ ಕವಿ ಡಿ.ಎಸ್. ಕರ್ಕಿಯವರ 106ನೇ ಜಯಂತ್ಯುತ್ಸವದಂದು ಬೆಳಗಾವಿಯ ಕನ್ನಡ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಗಡಿನಾಡ ಕವಿ ಗಿರೀಶ ಜಕಾಪುರೆಯವರಿಗೆ ಡಿ.ಎಸ್. ಕರ್ಕೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ಡಿ.ಎಸ್. ಕರ್ಕೆ ಕಾವ್ಯ ಪ್ರಶಸ್ತಿಯು ರು. 5 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ. ಹಚ್ಚೇವು ಕನ್ನಡದ ದೀಪ ಗಾಯನದೊಂದಿಗೆ ಆರಂಭವಾದ ಸಮಾರಂಭದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಮಹಾಸ್ವಾಮಿ, ಪ್ರಸಿದ್ಧ ವಾಗ್ಮಿ ಡಾ. ಬಸವರಾಜ ಜಗಜಂಪಿ, ಪ್ರೊ. ಸಿದ್ಧಣ್ಣಾ ಲಂಗೋಟಿ, ಡಾ. ಕೆ.ಎನ್. ದೊಡ್ಮನಿ, ಡಾ. ಸಂಗಮ್ಮ ಪರಡ್ಡಿ ಹಾಗೂ ಕರ್ಕೆ ಕುಟುಂಬದ ಎಲ್ಲ ಸದಸ್ಯರೂ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಕವಿ ಗಿರೀಶ ಜಕಾಪುರೆ ಬೆಳಗಾವಿಯಂತಹ ಗಡಿನಾಡಿ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮ ಮಾಡಿ ಕನ್ನಡವನ್ನು ಜಾಗೃತಗೊಳಿಸುವ ಅವಶ್ಯಕತೆಯಿದೆ ಎಂದರು. ಬೆಳಗಾವಿಯ ನಾಗನೂರು ಮಠದ ಶ್ರೀಗಳು ಮಾತಾನಾಡಿ, ಕರ್ಕೆಯವರು ಅದ್ಬುತ ಕವಿಯಾಗಿರುವಂತೆಯೇ ಉತ್ತಮ ಪ್ರಾಧ್ಯಾಪಕರೂ ಆಗಿದ್ದರು. ಅವರು ಅದೆಷ್ಟೋ ಜನರಿಗೆ ಜೀವನದ ದಾರಿ ತೋರಿದವರಾಗಿದ್ದರು ಎಂದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

