ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸಿ
ಚಿತ್ತಾಪುರ: ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನ.23ರಂದು ಬೆ. 9.30ಕ್ಕೆ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಲಿವೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಮಂತ ಹೊಸ್ಮನಿ ತಿಳಿಸಿದ್ದಾರೆ. ಈ ಸ್ಪರ್ಧೆಗೆ ಭಾಗವಹಿಸುವ ತಾಲೂಕಿನ ಸರ್ಕಾರಿ ನೌಕರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ನ.20ರೊಳಗಾಗಿ ಹೆಸರು ನೋಂದಾಯಿಸಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಮಂತ ಹೊಸ್ಮನಿ ಮೊ.8105191172 ಮತ್ತು ದೇವಿಂದ್ರ ರೆಡ್ಡಿ ದುಗನೂರ ಮೊ. 8971978955 ಸಂಪರ್ಕಿಸಿ.
ಪದಾಧಿಕಾರಿಗಳು
ಚಿಂಚೋಳಿ: ತಾಲೂಕು ಕೆಜೆಪಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶಶಿಧರ ಸೂಗೂರ, ಉಪಾಧ್ಯಕ್ಷರಾಗಿ ಸುಭಾಷ ಕದಮ್ ಕಾಳಗಿ, ಸಂಜೀವಕುಮಾರ್ ಕೊಂಡಾ ಕುಂಚಾವರಂ, ಬಸವರಾಜ ಪಾಟೀಲ್ ಮಳಗಿ, ಮೋಹನರೆಡ್ಡಿ ಚಿಮ್ಮನಚೋಡ, ನಾಗಭೂಷಣ ಹುಲಗುಂಡಿ, ಶಿವರಾಜ ಪಾಟೀಲ್ ಅಣಕಲ್ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮಂತ ಕಟ್ಟಿಮನಿ, ಸಂಜೀವಕುಮಾರ್ ಪುಣ್ಯಶೆಟ್ಟಿ ಐನೋಳಿ, ರವಿಕಾಂತ ಹೊಸಬಾಯಿ, ರಾಮಣ್ಣ ಪೂಜಾರಿ, ರೇವಪ್ಪ ಉಪ್ಪಿನ, ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಾಶಾ ಗಿರಣಿಕರ್ ಕಾಳಗಿ, ಕಾರ್ಯದರ್ಶಿಯಾಗಿ ಚಂದ್ರಕಾಂತ ಚೌಕಾ ರಟಕಲ್, ರಮೇಶ ಭೋಜುನಾಯಕ ಚಿಕ್ಕನಿಂಗದಳ್ಳಿ, ಹಣಮಂತ ಕಣ್ಣಿ ಕಾಳಗಿ, ಜಗನ್ನಾಥ ತೆಲಕಪಳ್ಳಿ ಚಿಮ್ಮನಚೋಡ, ಶೇಖರ ಪಾಟೀಲ್ ಕಾಳಗಿ, ಸಂಗಮನಾಥ ಸೇರಿಕಾರ ಸಾಲೇಬೀರನಳ್ಳಿ, ದಿವಾಕರ್ ಜಾಹಾಗೀರದಾರ್ (ರಾಣಾಪುರ) ಮುಂತಾದವರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾ ಕೆಜೆಪಿ ಅಧ್ಯಕ್ಷರು, ಮಾಜಿ ಸಚಿವ ಸುನೀಲ್ ವಲ್ಯಾಪುರೆ ತಿಳಿಸಿದ್ದಾರೆ.
ಇಂದು ಕೆಡಿಪಿ ಸಭೆ
ಆಳಂದ: ತ್ರೈಮಾಸಿಕ ಕೆಡಿಪಿ ಸಭೆ ನ.21ರಂದು ಪಟ್ಟಣದ ತಾಪಂ ಕಚೇರಿಯಲ್ಲಿ ಶಾಸಕ ಬಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಬಂಧಿತ 34 ಇಲಾಖೆಯ ಅಧಿಕಾರಿಗಳು ಸಭೆಗೆ ಪ್ರತಿನಿಧಿಗಳನ್ನು ಕಳುಹಿಸದೇ ಖುದ್ದಾಗಿ ಅಧಿಕಾರಿಗಳು ನಿಗದಿತ ಸಮಯಕ್ಕೆ ಎಲ್ಲ ದಾಖಲೆಗಳೊಂದಿಗೆ ಹಾಜರಾಗಬೇಕು. 10 ಬುಕ್ಲೆಟ್ ರೂಪದಲ್ಲಿ ಲೀಗಲ್ಸೈಜ್ ಪೇಪರ್ದಲ್ಲಿ ಮುದ್ರಿಸಿ ನ.18ರೊಳಗೆ ಕಚೇರಿಗೆ ತಮ್ಮ ಇಲಾಖೆಯ ವರದಿಯನ್ನು ಕಚೇರಿಗೆ ಸಲ್ಲಿಸಬೇಕೆಂದು ತಾಪಂ ಇಒ ಲಕ್ಷ್ಮಣ ಶೃಂಗೇರಿ ತಿಳಿಸಿದ್ದಾರೆ.
ಇಂದು ಶಿಬಿರ
ಗುಲ್ಬರ್ಗ: ನಗರದ ಸೇಡಂ ರಸ್ತೆಯ ಭಾವಸಾರ ನಗರದ ಹಿಂಗುಲಾಂಬಿಕಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನ.21ರಂದು ಬೆ.10ರಿಂದ ಮ.2ರ ವರೆಗೆ ಉಚಿತ ಆಯುರ್ವೇದ ತಪಾಸಣಾ ಶಿಬಿರ ನಡೆಯಲಿದೆ. ಆಯುರ್ವೇದ ತಜ್ಞರಾದ ಡಾ. ರಾಮರಾವ ದೇಶಮುಖ, ಡಾ. ಮಹೇಶ ಭಾಲ್ಕಿ ಇತರ ವೈದ್ಯರು ಮೂಲವ್ಯಾದಿ, ಭಗಂದರ ಮತ್ತು ಗುದಸಂಬಂಧಿ ಕುರಿತು ಚಿಕಿತ್ಸೆ ಮತ್ತು ಸಲಹೆ ನೀಡಲಿದ್ದಾರೆ. ಮಾಹಿತಿಗಾಗಿ ಮೊ. 9880497214, 9902345619ಗೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

