ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹಿಸಿ
ಗುಲ್ಬರ್ಗ/ಶಹಾಬಾದ್: ಗ್ರಾಮೀಣ ಭಾಗದಲ್ಲಿ ಹಲವಾರು ಕ್ಷೇತ್ರದಲ್ಲಿ ಪ್ರತಿಭಾವಂತರಿದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದ್ದು, ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋದಂಥ ಆಟಗಳಿಗೂ ಸೂಕ್ತ ಪ್ರೋತ್ಸಾಹ ಅಗತ್ಯ ಎಂದು ಶಹಾಬಾದ್ ಪೊಲೀಸ್ ಠಾಣೆ ಪಿಎಸ್ಐ ರಘು ಎನ್. ಹೇಳಿದರು.
ಮಾಲಗತ್ತಿ ಗ್ರಾಮದಲ್ಲಿ ಕಳೆದ 20 ದಿನಗಳಿಂದ ನಡೆದ ಮಾಲಗತ್ತಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಡಗಿರುವ ಪ್ರತಿಭೆಗಳನ್ನು ಬೆಳಕಿಗೆ ತರಬೇಕೆಂದರು.
ಪೈನಲ್ ಪಂದ್ಯದಲ್ಲಿ ಸಹರಾ ಭಂಕೂರ, ನಿಜಶರಣ ಹಳೆ ಶಹಾಬಾದ್ ತಂಡದ ನಡುವೆ ಪಂದ್ಯ ನಡೆದು ಟಾಸ್ ಗೆದ್ದ ನಿಜಶರಣ ತಂಡ ಬ್ಯಾಟಿಂಗ್ಗೆ ಇಳಿದು ನಿಗದಿತ 16 ಓವರಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.
ಸಹರಾ ತಂಡಕ್ಕೆ ಗೆಲವಿನ ಸಿಹಿ: ಇದಕ್ಕೆ ಪ್ರತ್ಯುತ್ತರವಾಗಿ ಸಹರಾ ತಂಡ 13.3 ಓವರಗಳಲ್ಲಿ, ನಾಲ್ಕು ವಿಕೆಟ್ ನಷ್ಟಕ್ಕೆ 150 ರನ್ ಪಡೆದು ಗೆಲುವಿನ ನಗೆ ಬೀರಿದರು. ವಿಜೇತ ಸಹರಾ ತಂಡಕ್ಕೆ ಅತಿಥಿಗಳಾದ ರಘು ಎನ್., ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ ಸಣಮೋ 10 ಸಾವಿರ ಚೆಕ್, ಕಪ್ ನೀಡಿದರು. ರನ್ನರ್ ತಂಡ ನಿಜಶರಣ ತಂಡಕ್ಕೆ 5 ಸಾವಿರ ಚೆಕ್ ಮತ್ತು ಕಪ್ ನೀಡಿದರು.
ಪದಕ ಪ್ರದಾನ: ಸಹರಾ ತಂಡದ ವಿಜಯಕುಮಾರ ಅವರಿಗೆ ಪಂದ್ಯ ಪುರುಷ, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಸದ್ದಾಮ್ ಅವರಿಗೆ, ಹ್ಯಾಟ್ರಿಕ್ ವಿಕೆಟ್ ಪಡೆದ ಶಾಂತು ಚಂದ್ರಮೌಲೇಶ್ವರ ಇಂಗಳಗಿ ಹಾಗೂ ಎರಡು ತಂಡದ ಆಟಗಾರರಿಗೆ ಪದಕ ಹಾಗೂ ಸರಣಿಯಲ್ಲಿ ಭಾಗವಹಿಸಿದ ಎಲ್ಲ 32 ತಂಡಗಳ ನಾಯಕರಿಗೆ ಪದಕ ನೀಡಿ ಸನ್ಮಾನಿಸಲಾಯಿತು.
ಹಣಮಂತ ಬಾಳಕ, ಶಿವಲಿಂಗಪ್ಪ ವಾಲೀಕಾರ, ಅರುಣ ದೊಡ್ಡಮನಿ, ಗುಂಡಪ್ಪ ಅಲ್ಲೂರ ಅಂಪೈರ್ರಾಗಿ ಕಾರ್ಯ ನಿರ್ವಹಿಸಿದರು. ಟೂರ್ನಿ ಆಯೋಜಕರಾದ ಮಲ್ಲಿಕಾರ್ಜುನ ಇಟಗಿ, ಕಾಲಿಚರಣ ಅಲ್ಲಿಪುರಕರ್, ಸಂಗಣ್ಣ ಮದಗೊಂಡ, ಹಣಮಂತ ಬಾಳ, ಸಂದೀಪ ಪಾಟೀಲ್, ದುರ್ಗೆಶ ಅಲ್ಲೂರಕರ್, ಗುಂಡಪ್ಪ ಬಾಳ, ಶಿವಾನಂದ ಅಲ್ಲೂರ, ಸಂತೋಷಕುಮಾರ್, ದೇವಿಂದ್ರ ತಳವಾರ, ರಾಜು ತಳವಾರ, ಮಲ್ಲಣ್ಣ ಅಲ್ಲೂರ್, ಶಂಕರ ಸಂಕನೂರ, ಹರಿಶ್ಚಂದ್ರ ಕಟ್ಟಿ, ಶರಣು ಜ್ಯೋತಿ,ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

