ಗುಲ್ಬರ್ಗಾ

ಭಕ್ತರಿರುವಲ್ಲೇ ರಾಯರ ನೆಲೆ: ಮಂತ್ರಾಲಯಶ್ರೀ

Published On :

ಜೇವರ್ಗಿ:  ಸಕಲ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಕಾಮಧೇನು ಕಲ್ಪವೃಕ್ಷವಾಗಿರುವ ಗುರುರಾಘವೇಂದ್ರ ಸ್ವಾಮಿಗಳು ಭಕ್ತರೆಲ್ಲಿರುವರೇ ಅಲ್ಲಿ ಅವರು ನೆಲೆಸಿರುತ್ತಾರೆ ಎಂದು ಮಂತ್ರಾಲಯ ಮಠದ ಸುಯತೀಂದ್ರತೀರ್ಥರು ನುಡಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಮಂತ್ರಾಲಯ ಬಿಟ್ಟಂತೆ ದೇಶದಲ್ಲಿಯೇ ಮಂಚಾಲಮ್ಮದೇವಿ ಮೂರ್ತಿ ಇರುವುದು ಕೇವಲ 6 ಕಡೆಗಳಲ್ಲಿ ಮಾತ್ರ ಎಂದರು.
ಜೇವರ್ಗಿ ಪ್ರತಿಮಂತ್ರಾಲಯ: ಜೇವರ್ಗಿಯಲ್ಲಿ ರಾಯರ ಜತೆ ಮಂಚಾಲಮ್ಮದೇವಿ ಮೂರ್ತಿ ಪ್ರತಿಷ್ಠಾಪಿಸಿದ್ದು ಹೆಮ್ಮೆಯ ವಿಷಯ. ಅದಕ್ಕಾಗಿಯೇ ಜೇವರ್ಗಿಯನ್ನು ಪ್ರತಿಮಂತ್ರಾಲಯವೇ ಸರಿ ಎಂದು ಮಂತ್ರಾಲಯ ಮಠದ ಹಿರಿಯ ಸ್ವಾಮೀಜಿ ಸುಯತೀಂದ್ರತೀರ್ಥರು ಸಂಬೋಧಿಸಿದರು.
ಮುಂಬರುವ ದಿನಗಳಲ್ಲಿ ಈ ಮಠವೂ ಪ್ರಖ್ಯಾತಿ ಪಡೆಯಲಿದೆ. ಮನೆಯೇ ಮಂತ್ರಾಲಯ ಎಂಬಂತೆ ಭಕ್ತರೆಲ್ಲಿರುತ್ತಾರೆ ರಾಯರು ಅಲ್ಲಿಯೇ ಬಂದು ಅನುಗ್ರಹಿಸುತ್ತಾರೆ ಎಂಬುದಕ್ಕೆ ಜೇವರ್ಗಿ ಭಕ್ತರೇ ಸಾಕ್ಷಿ. ತಾಲೂಕಿನಲ್ಲಿ ಎಲ್ಲಿಯೂ ರಾಯರಮಠ ಇರಲಿಲ್ಲ. ಮಂತ್ರಾಲಯದ ಯತಿದ್ವಯರ ಹಸ್ತದಿಂದ ರಾಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ ಮತ್ತು ಮುಖ್ಯ ಪ್ರಾಣದೇವರು, ಮಂಚಾಲಮ್ಮದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಪ್ರತಿಷ್ಠಾಪನೆ: ಬೆಳಗ್ಗೆ ಮಂತ್ರಾಲಯದ ಹಿರಿಯ ಸ್ವಾಮೀಜಿ ಸುಯತೀಂದ್ರತೀರ್ಥರು, ಸುಬುಧೇಂದ್ರತೀರ್ಥರು ಪ್ರಾಣದೇವರ, ಮಂಚಾಲಮ್ಮದೇವಿ ಮೂರ್ತಿ ಹಾಗೂ ರಾಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪಿಸಿದರು. ಮುದ್ರಾಧಾರಣೆ, ಮೂಲ ರಾಮದೇವರ ಪೂಜೆ ನೆರವೇರಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ರೇವುನಾಯಕ ಬೆಳಮಗಿ, ಭಕ್ತಿಮಾರ್ಗದಲ್ಲಿ ಮುಕ್ತಿ ಸಾಧ್ಯ, ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಬೇಕಾದರೆ ಅಧ್ಯಾತ್ಮಿಕದಿಂದ ಮಾತ್ರ ಸಾಧ್ಯ ಎಂದರು.
ಶಾಸಕ ಡಾ. ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಮಾತನಾಡಿದರು.
ಪಂಡಿತ ರಾಜಾ ಸುಜ್ಞಾನೇಂದ್ರಾಚಾರ್ಯರು, ಸಂಸದ ಧರ್ಮಸಿಂಗ್, ಪ್ರಭಾವತಿ ಧರ್ಮಸಿಂಗ್, ನ್ಯಾಯಾಧೀಶರಾದ ಪ್ರತಿಭಾ ಕುಲಕರ್ಣಿ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕೇದಾರಲಿಂಗಯ್ಯ ಹೀರೇಮಠ, ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಬೈಲಪ್ಪ್ಪ ನೆಲೋಗಿ, ಜಿಲ್ಲಾ ಬ್ರಾಹ್ಮಣ ಸಮಾಜ ಅಧ್ಯಕ್ಷ ಮಾಡ್ಯಳಕರ್, ಕೃಷ್ಣಾಚಾರ್ಯ ನವಲಿ, ಶಂಕರ ಸೇವಾ ಸಮಿತಿ ಮುಖಂಡ ಪ್ರಕಾಶ ಕುಲಕರ್ಣಿ, ಉದ್ಯಮಿ ಕೃಷ್ಣಾಜಿ ಕುಲಕರ್ಣಿ, ಯಾಜ್ಞವಲ್ಕ್ಯ ಸೇವಾ ಸಮಿತಿ ಅಧ್ಯಕ್ಷ ನಾರಾಯಣರಾವ ಜವಳಿ, ಶಿವರಾಜ ಡಿಗ್ಗಾವಿ, ಡಾ. ಮಲ್ಲಾರಾವ ಮಲ್ಲೆ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಮಲ್ಲಿಕಾರ್ಜುನ ಆದ್ವಾನಿ, ಪ್ರಹ್ಲಾದ ಮಠಮಾರಿ, ಭೀಮರಾವ ಕುಲಕರ್ಣಿ ಯಡ್ರಾಮಿ, ರಾಮರಾವ ಕುಲಕರ್ಣಿ ಜವಳಗಿ, ಶ್ರೀನಿವಾಸ ಕುಲಕರ್ಣಿ ಮಳ್ಳಿ, ಅಫಜಲ್ಪುರದ ಗುರುರಾಜ ಭಜನಾಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶ್ರೀರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ರಮೇಶಬಾಬು ವಕೀಲ್ ಸ್ವಾಗತಿಸಿದರು. ಶಾಮರಾವ ಕಾರ್ಯಕ್ರಮ ನಿರೂಪಿಸಿದರು. ಬಾಪುರಾವ ಪಾಗಾ ಪ್ರಾಸ್ತಾವಿಕ ಮಾತನಾಡಿದರು. ಶಾಮಸುಂದರ ರ್ಯಾವನೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.