ಗುಲ್ಬರ್ಗಾ

ಗುಡಿಯಾಳ.ಜೆ: ಬತ್ತದ ಕ್ಷೇತ್ರೋತ್ಸವ

Published On :

ಸುರಪುರ: ತಾಲೂಕಿನ ಗುಡಿಹಾಳ. ಜೆ ಗ್ರಾಮದ ವೆಂಕಟರಾವ್ ಹೊಲದಲ್ಲಿ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಇದರ ಅಡಿಯಲ್ಲಿ ಬರುವ ಕೃಷಿ ಸಂಶೋಧನಾ ಕೇಂದ್ರ, ಕವಡಿಮಟ್ಟಿ, ಕೃಷಿ ಇಲಾಖೆ ಸುರಪುರ, ಪಿ.ಐ. ಇಂಡಸ್ಟ್ರಿಸ್ ಹಾಗೂ ಸಿಮೆಂಟ್ (ಇಂಡಿಯಾ) ಸಂಯುಕ್ತಾಶ್ರಯದಲ್ಲಿ ಕೂರಿಗೆ ಬತ್ತದ ಕ್ಷೇತ್ರೋತ್ಸವ ಜರುಗಿತು.
  ಪಿ.ಐ. ಇಂಡಸ್ಟ್ರಿಸ್ ವಲಯ ವ್ಯವಸ್ಥಾಪಕ ಎಚ್.ವಿ. ಚಂದಶೇಖರ ಮುಖ್ಯ ಅತಿಥಿಯಾಗಿ ಮಾತನಾಡಿ, ಕೂರಿಗೆ ಭತ್ತದ ಬೇಸಾಯಿ ಪದ್ಧತಿಯಿಂದ ರೈತರಿಗೆ ಸಾಕಷ್ಟು ನೀರಿನ ಮತ್ತು ಹಣದ ಉಳಿತಾಯವಾಗುತ್ತದೆ. ಸೂಕ್ತ ಸಮಯದಲ್ಲಿ ಕಳೆನಾಶಕ, ಕೀಟ ಮತ್ತು ಶೀಲಿಂದ್ರನಾಶಕಗಳ ಬಳಕೆಯಿಂದ ರೈತರು ಗಣನೀಯ ಪ್ರಮಾಣದಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಮತ್ತು ಉತ್ಪಾದನಾ ವೆಚ್ಚ ತಗ್ಗಿಸಬಹುದು ಎಂದರು.
ಸೌಲಭ್ಯ ಬಳಸಿಕೊಳ್ಳಿ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಸರಸಿಂಗ್ ಹಜಾರೆ ಮಾತನಾಡಿ, ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಸಮಪರ್ಕವಾಗಿ ಬಳಸಿಕೊಳ್ಳಬೇಕು. ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಬಹು ಮುಖ್ಯ ಎಂದು ಹೇಳಿದರು.
  ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪಂಪಣ್ಣ. ವೈ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಎ.ಜಿ. ಶ್ರೀನಿವಾಸರವರು ಕೂರಿಗೆ ಬತ್ತದ ಪದ್ಧತಿಯಿಂದ ಕೀಟ ನಿಯಂತ್ರಣದ ಬಗ್ಗೆ ಉಪನ್ಯಾಸ ನೀಡಿದರು. ಡಾ. ಅಮರೇಶ ರೋಗ ನಿಯಂತ್ರಣದ ಬಗ್ಗೆ ವಿವರಿಸಿದರು. ತಮ್ಮ ಜಮೀನಿನಲ್ಲಿ ಕೂರಿಗೆ ಬಿತ್ತನೆ ಮಾಡಿದ ರೈತರಾದ ವೆಂಕಟರಾವ್ ಮತ್ತು ಶಿವರಾಜ ಹೂಗಾರ ಕೂರಿಗೆ ಬಿತ್ತನೆಯಲ್ಲಿ ತಮ್ಮ ಅನುಭವಗಳನ್ನು ರೈತರೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಆಲ್ದಾಳದ ಯುವ ರೈತರಾದ ರವಿ ಸಾಹುಕಾರ ಮತ್ತು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಪಾಲಯ್ಯ. ಪಿ, ಶ್ವೇತಾ.ಬಿ..ಎನ್ ಮತ್ತು ಸೌಮ್ಯ ಟಿ.ಎಮ್ ಇದ್ದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ಅನುಗಾರರು, ಮೈರಾಡ್ ಸಂಸ್ಥೆ ಪದಾಕಾರಿಗಳು ಭಾಗವಹಿಸಿದ್ದರು. ರಾಘವೇಂದ್ರ ಎಲಿಗಾರ ನಿರೂಪಿಸಿ ಎ.ಎಚ್. ಕೃಷ್ಣಮೂರ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.