27 ಮೃತರ ವಾರಸುದಾರರ ಪತ್ತೆಗೆ ಮನವಿ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ವಾಡಿ ರೇಲ್ವೆ ನಿಲ್ದಾಣದ ವ್ಯಾಪ್ತಿ ಪ್ರದೇಶದಲ್ಲಿ ವಿವಿಧ ಮಾಹೆಗಳಲ್ಲಿ 27 ಜನರು ರೈಲಿಗೆ ಸಿಲುಕಿ ಇಲ್ಲವೆ ರೈಲು ನಿಲ್ದಾಣದಲ್ಲಿ ವಿವಿಧ ಘಟನೆಗಳಿಂದ ಸಾವಿಗೀಡಾಗಿದ್ದು, ಅವರ ವಾರಸುದಾರರ ಪತ್ತೆಗೆ ಶೋಧನೆ ನಡೆದಿದೆ. ಅಪರಿಚಿತ 27 ಪುರುಷರು ಮೃತರಾಗಿದ್ದು, ದಿನಾಂಕ ಹಾಗೂ ಮೃತಪಟ್ಟ ಸ್ಥಳ ಕ್ರಮವಾಗಿ ಇಂತಿದೆ. ಮೃತರ ವಾರಸುದಾರರು ಪತ್ತೆಯಾದಲ್ಲಿ ವಾಡಿ ರೇಲ್ವೆ ಪೊಲೀಸ್ ಠಾಣೆ ಇಲ್ಲವೆ ದೂರವಾಣಿ ಸಂಖ್ಯೆ 08476-202244 ಅನ್ನು ಸಂಪರ್ಕಿಸಲು ವಾಡಿ ರೇಲ್ವೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಕೋರಿದ್ದಾರೆ. ಅ.17ರಂದು ಚಿತ್ತಾಪುರ ರೈಲು ನಿಲ್ದಾಣ, ಅ.29ರಂದು ಹೀರೆನಂದೂರ ರೈಲು ನಿಲ್ದಾಣ, ಜೂ.18ರಂದು ಮಳಖೇಡ ರೈಲು ನಿಲ್ದಾಣ, ಜು.20ರಂದು ಗುಲ್ಬರ್ಗ ರೈಲು ನಿಲ್ದಾಣ, ಜು.21ರಂದು ಸೇಡಂ-ಮಳಖೇಡ ರೈಲು ನಿಲ್ದಾಣ ನಡುವೆ, ಜು.30 ಚಿತ್ತಾಪುರ ರೈಲು ನಿಲ್ದಾಣ, ಜು.30 ಗುಲ್ಬರ್ಗ ರೈಲು ನಿಲ್ದಾಣ, ಅ.5ರಂದು ಗೌಡಗಾಂವ- ಕುಲಾಲಿ ರೈಲು ಮಾರ್ಗದಲ್ಲಿ, ಅ.7ರಂದು ಗುಲ್ಬರ್ಗ ರೈಲು ನಿಲ್ದಾಣ, ಆ.19 ವಾಡಿ ರೈಲು ನಿಲ್ದಾಣ, ಆ.29ರಂದು ಸೇಡಂ-ಮಳಖೇಡ ರೈಲು ನಿಲ್ದಾಣ, ನ.5ರಂದು ಸೇಡಂ ಮಳಖೇಡ ರೈಲು ನಿಲ್ದಾಣ, ನ.27ರಂದು ವಾಡಿ ರೈಲು ನಿಲ್ದಾಣ, ನ.28ರಂದು ವಾಡಿ ರೈಲು ನಿಲ್ದಾಣದ ವೇದಿಕೆ-3 ಮತ್ತು ನ.28ರಂದು ವೇದಿಕೆ-1, ನ.30 ಕುಲಾಲಿ-ದುಧನಿ ರೈಲು ನಿಲ್ದಾಣ, ಜೂ.22ರಂದು ವಾಡಿ ರೈಲು ನಿಲ್ದಾಣ, ಜು.6ರಂದು ಸೇಡಂ- ಕುರುಕುಂಟಾ ರೈಲು ನಿಲ್ದಾಣ, ಜು.5ರಂದು ಬಬಲಾದ-ಸಾವಳಗಿ ರೈಲು ನಿಲ್ದಾಣ, ಜೂ.26ರಂದು ಕುಲಾಲಿ ರೈಲು ನಿಲ್ದಾಣ ಹತ್ತಿರ, ಜೂ.23ರಂದು ಗುಲ್ಬರ್ಗ-ಬಬಲಾದ ರೈಲು ನಿಲ್ದಾಣ ನಡುವೆ, ಜೂ.11ರಂದು ಗುಲ್ಬರ್ಗ ರೈಲು ನಿಲ್ದಾಣ ವೇದಿಕೆ-3, ಮೇ 13 ಗೌಡಗಾಂವ-ಗಾಣಗಾಪುರ ರೈಲು ನಿಲ್ದಾಣ ನಡುವೆ, ಮೇ 2 ಗೌಡಗಾಂವ-ಗಾಣಗಾಪುರ ರೈಲು ನಿಲ್ದಾಣ ನಡುವೆ, ಅ.31ರಂದು ರೇಲ್ವೆ ಪೊಲೀಸ್ ಠಾಣೆ ವಾಡಿ, ಸೆ.17ರಂದು ಚಿತ್ತಾಪುರ-ಮಳಖೇಡ ರೈಲು ನಿಲ್ದಾಣ ನಡುವೆ ಮತ್ತು ಸೆ.18ರಂದು ಚಿತ್ತಾಪುರ ರೈಲು ನಿಲ್ದಾಣದ ಹತ್ತಿರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

