ಗುಲ್ಬರ್ಗಾ

ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ

Published On :

ಸಿಮೆಂಟ್ ಕಂಪನಿಗಳ ಸಾವಿರಾರು ಗುತ್ತಿಗೆ ನೌಕರರಿಂದ ಗಾಂಧಿಗಿರಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ. 26
ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಮಳಖೇಡನ ರಾಜಶ್ರೀ ಸಿಮೆಂಟ್ ಅಲ್ಟ್ರಾಟೆಕ್ ಹಾಗೂ ಸೇಡಂನ ವಾಸವದತ್ತಾ ಸಿಮೆಂಟ್ ಕಂಪನಿಗಳಲ್ಲಿ ಸಾವಿರಾರು ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನೌಕರರು ಗುಲ್ಬರ್ಗದಲ್ಲಿ ಮಂಗಳವಾರ ಗಾಂಧಿಗಿರಿ ಚಳವಳಿ ನಡೆಸುವ ಮೂಲಕ ಗಮನ ಸೆಳೆದರು.
ಶ್ರಮಜೀವಿಗಳ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ಜಗತ್ ವೃತ್ತದಿಂದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ಗಾಂಧಿಗಿರಿ ಎನ್ನುವ ವಿನೂತನ ಚಳವಳಿ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಎಲ್ಲ ನೌಕರರು ಜಿಲ್ಲಾಧಿಕಾರಿಗಳಿಗೆ ಗುಲಾಬಿ ಹೂ ನೀಡಿ ಅವರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಎಚ್ಚರಿಕೆ: ಈ ಗಾಂಧಿಗಿರಿ ಚಳವಳಿಗೆ ಸರ್ಕಾರ ಸ್ಪಂದಿಸದೆ ಹೋದರೆ ಬರುವ ಡಿ. 3 ರಂದು ಬಳ್ಳಾರಿಯ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಚಂದ್ರಶೇಖರ ಹಿರೇಮಠ ಹೇಳಿದರು.
ಆಗ್ರಹ: ರಾಜಶ್ರೀ ಸಿಮೆಂಟ್ ಅಲ್ಟ್ರಾಟೆಕ್ ಮತ್ತು ವಾಸವದತ್ತಾ ಸಿಮೆಂಟ್ ಕಂಪನಿಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 4 ಸಾವಿರ ನೌಕರರಿಗೆ ಕೂಡಲೇ ಸೆಂಟ್ರಲ್ ವೇಜ್ ಬೋರ್ಡ್ ವೇತನ ತಕ್ಷಣ ನೀಡಬೇಕು ಮತ್ತು ಕಾಯಂ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮರಿಯಪ್ಪಾ ಪೂಜಾರಿ, ಗೋಬರಿಬಾಯಿ,ಲಕ್ಷ್ಮಣ ಚವ್ಹಾಣ, ಜಗದೀಶ್ವರಯ್ಯ, ರಮಾಕಾಂತ ಕುಲಕರ್ಣಿ, ನಾಗೇಂದ್ರ ಹಲಗೇರಿ, ತಿಪ್ಪಣ್ಣ ತಳವಾರ, ದೇವಿಂದ್ರ ಝಾಪುರ, ಸುರೇಶ ರೆಡ್ಡಿ, ಪ್ರಭು ಮಗಿ, ಮನೋಹರ, ಬಸವರಾಜ ಹಿರೇಮಠ, ನರಸಪ್ಪ ಯಾದಗಿರಿ, ನಾಗಪ್ಪ ಊಡಗಿ, ಮುಪ್ಪಯ್ಯ, ಬಾಲರಾಜ, ಭೀಮಶಾ, ಅರ್ಜುನ, ಯಶವಂತ, ಈಶ್ವರ, ಶರಣು ನಾಯಕ, ವೀರಾರೆಡ್ಡಿ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.