ಗುಲ್ಬರ್ಗಾ

ಎಂಇಎಸ್ ಶಾಸಕರ ಪ್ರತಿಕೃತಿ ದಹನ

Published On :

ಗುಲ್ಬರ್ಗ: ಬೆಳಗಾವಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಅವರ ತಾಯಿನಾಡು ವಿರೋಧಿ ಹೇಳಿಕೆಯನ್ನು ಖಂಡಿಸಿ,ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವೀರ ಕನ್ನಡಗಿರ ಸೇನೆ ಮತ್ತು ಬಿಜೆಪಿ ಮುಖಂಡರು ನಗರದಲ್ಲಿ ಸಂಭಾಜಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಶವಯಾತ್ರೆಯನ್ನು ಎಂಇಎಸ್‌ನ ನಾಲ್ವರು ಶಾಸಕರಿದ್ದರೆ ಮಾಡಬಹುದಿತ್ತು ಎಂಬ ಹೇಳಿಕೆ ಕನ್ನಡಿಗರ ಭಾವನೆಯೊಂದಿಗೆ ಚೆಲ್ಲಾಟ ಆಡುವುದಾಗಿದೆ. ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಮತ್ತು ಸಂಭಾಜಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಶಿವಕುಮಾರ್ ನಾಟಿಕಾರ್, ತಿಪ್ಪಣ್ಣ ಪಿ. ಲಂಡನಕರ್, ಶರಣಗೌಡ ಪಾಟೀಲ್, ಸಂತೋಷ ಚವ್ಹಾಣ, ಅಶೋಕ ಡಬರಾಬಾದ್, ರೇವಣಸಿದ್ದಪ್ಪ ನಾಗೂರೆ, ಶ್ರೀಕಾಂತ, ಶಂಕ್ರಪ್ಪ ಎಲಗಾರ್ ಮತ್ತು ವೀರ ಕನ್ನಡಿಗರ ಸೇನೆಯ ಅಮೃತ ಪಾಟೀಲ್ ಸಿರನೂರ, ಬಿಜೆಪಿ ಮುಖಂಡರಾದ ಪರಶುರಾಮ ನಸಲವಾಯಿ, ಸೂರ್ಯಕಾಂತ ದೊನಿ, ಹನುಮಂತ ರೆಡ್ಡಿ, ಬಸವರಾಜ ಮದ್ರಿಕಿ, ಶಿವರಾಜ, ಮಹೇಶ ಉಜ್ಜೆಕರ್, ಪವನ ದೇಶಪಾಂಡೆ, ವಿಶ್ವನಾಥ ಪವಾಡಶೆಟ್ಟಿ, ಮಂಜುನಾಥ ಜೀವಣಗಿ, ದಯಾನಂದ ರೆಡ್ಡಿ ಸೇರಿದಂತೆ ಎರಡು ಸಂಘಟನೆಗಳ ಬಿಜೆಪಿಯ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.