ಯಾದಗಿರಿ ತಾಪಂ ಅಧ್ಯಕ್ಷಗಿರಿಗೆ ಪೈಪೋಟಿ
ಕ.ಪ್ರ.ವಾರ್ತೆ, ಗುರುಮಠಕಲ್ಣ್ ನ.27
ಯಾದಗಿರಿ ತಾಪಂ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಭೀಮರಾವ್ ಚಂಡರಕಿ ರಾಜಿನಾಮೆ ನೀಡಿರುವ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕೀಯ ಬೆಳವಣಿಗೆಗಳಿಗೆ ಚಾಲನೆ ದೊರೆತಿದೆ.
26 ಜನ ಸದಸ್ಯ ಬಲವನ್ನು ಹೊಂದಿರುವ ತಾಪಂನಲ್ಲಿ 15 ಸದಸ್ಯರ ಬಲವನ್ನು ಹೊಂದಿರುವ ಕಾಂಗ್ರೆಸ್ ಇಲ್ಲಿ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿಕೊಂಡಿದೆ. ಇದರಂತೆ ತಾಪಂನ ಎರಡನೇ ಅವಧಿಗೆ ಮಿಸಲಾತಿ ಪ್ರಕಟವಾಗಿ ಸಾಮಾನ್ಯ ಮಹಿಳೆಗೆ ಮೀಸಲಾಗಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಜಿದ್ದಾಜಿದ್ದು ನಡೆದು ಅಧಿಕಾರವದಿಯನ್ನು ಇಬ್ಬರಿಗೆ ನಿಡುವ ಸಂಬಂಧ ಪಕ್ಷದ ಹೈಕಮಾಂಡ್ 20 ತಿಂಗಳ ಅವಧಿಯಲ್ಲಿ ಇಬ್ಬರಿಗೆ ಅಧಿಕಾರವನ್ನು ಹಂಚಿಕೆ ಮಾಡಿಕೊಡುವ ಬಗ್ಗೆ ಭರವಸೆ ನೀಡಿತ್ತು.
ಹಸ್ತಾಂತರ: ಪ್ರಥಮ ಹಂತದಲ್ಲಿ ಅಧ್ಯಕ್ಷ ಸ್ಥಾನವನ್ನು ಶಾಸಕರ ಒತ್ತಾಯದ ಮೇರೆಗೆ ಲಕ್ಷ್ಮಿ ಭೀಮರಾವ್ ಚಂಡರಕಿ ಅವರನ್ನು ಹತ್ತು ತಿಂಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ಉಳಿದ ಹತ್ತು ತಿಂಗಳ ಅವಧಿಗೆ ಕೋಟಗೇರಾ ತಾಪಂ ಸದಸ್ಯರಾದ ಶೋಭಾ ರಾಣಿ ದೇವಿಂದ್ರಪ್ಪ ಅಥವಾ ಕಂದಕೂರ ತಾಪಂ ಸದಸ್ಯರಾದ ರಾಧ ನಾಗಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ಮಾತು ನೀಡಲಾಗಿತ್ತು.
ಅದರೆ ಅಧಿಕಾರಕ್ಕಾಗಿ ನಡೆದ ಒಪ್ಪಂದದ ಪ್ರಕಾರ ಆಗಸ್ಟ್ನಲ್ಲಿ ತಿಂಗಳಲ್ಲಿ ಅಧಿಕಾರದ ಹಸ್ತಾಂತರ ಮಾಡಿ ನೂತನ ಅಧ್ಯಕ್ಷರಿಗೆ ಅಧಿಕಾರ ನೀಡಬೇಕಾಗಿತ್ತು.
ಅದರೆ ಶ್ರೀಲಕ್ಷ್ಮೀ ರಾಜಿನಾಮೆ ನೀಡದೇ ಇದ್ದ ಹಿನ್ನೆಲೆಯಲ್ಲಿ ಸದಸ್ಯರೆಲ್ಲ ಸೇರಿ ಪಟ್ಟು ಹಿಡಿದು ಅಧ್ಯಕ್ಷರಿಂದ ರಾಜೀನಾಮೆ ಕೊಡಿಸಿರುವಲ್ಲಿ ಯಶಸ್ವಿಯಾದರು.
ಇದೀಗ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕಾಗಿ ತಾಪಂ ಸದಸ್ಯರಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ಈಗ ಉಳಿದ 10 ತಿಂಗಳ ಅವಧಿಯಲ್ಲಿ ಮೂರು ತಿಂಗಳ ಕಳೆದಿವೆ. ಉಳಿದ 7 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವ ಕುರಿತಂತೆ ಚರ್ಚೆ ನಡೆದು, ಎಲ್ಲರ ಕುತೂಹಲ ಕೆರಳಿಸಿವೆ.
ಉಸ್ತುವಾರಿ ಸಚಿವರ ನಿರ್ಣಯ ಅಂತಿಮ
ಕಳೆದ ಬಾರಿ ಶ್ರೀಲಕ್ಷ್ಮೀಯವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಾಬೂರಾವ್ ಚಿಂಚನಸೂರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಇಬ್ಬರಲ್ಲಿ ಒಬ್ಬರಿಗೆ 10 ತಿಂಗಳ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಈಗ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ನಿರ್ಧಾರವನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಮಾಡಲಿದ್ದಾರೆ. ಅವರ ನಿರ್ಣಯವೇ ಇಲ್ಲಿ ಅಂತಿಮವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

