ಗುಲ್ಬರ್ಗಾ

ವಚನ ಸಾಹಿತ್ಯಕ್ಕೆ ಷಣ್ಮುಖ ಶಿವಯೋಗಿಗಳ ಕೊಡುಗೆ ಅಪಾರ: ಪಂ. ನೆಲ್ಲಗಿ

Published On :

ಜೇವರ್ಗಿ: ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎನ್ನುವಂತೆ ದೇಶ ಸಂಚಾರ ಮಾಡಿ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮೂಲಕ 17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿಗಳು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಂಡಿತ ನೆಲ್ಲಗಿ ಅಭಿಪ್ರಾಯಪಟ್ಟರು.
  ಪಟ್ಟಣದ ಷಣ್ಮುಖ ಶಿವಯೋಗಿಗಳ ವಿರಕ್ತ ಮಠದಲ್ಲಿ ಭಕ್ತ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ನಂತರ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದ ಮಹಾನ್ ಶರಣರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗಲಿದೆ ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಮಾರಡಗಿಯ ಮಲ್ಲಪ್ಪ ಶರಣರು, ಸುರೇಶ ಸಜ್ಜನ್, ರಾಜಶೇಖರ ಸೀರಿ, ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಸಾಹೇಬಗೌಡ ಕಲ್ಲಾ, ಮಲಶೆಟ್ಟೇಪ್ಪಗೌಡ ಹಿರೇಗೌಡ, ಸೋಮಶೇಖರ ಬಂಡಿ, ಶಿವಶರಣಪ್ಪ ಸಾಹು ಸಜ್ಜನ್, ಬಸವರಾಜ ಹಳಿಮನಿ, ವಿಶ್ವನಾಥ ಕಲ್ಲಾ, ಶರಣಗೌಡ ರಾಸಣಗಿ, ಅಪ್ಪಣ್ಣ ಕೋಳಕೂರ, ಶಿವಾನಂದ ಘಂಟಿಮಠ, ಪಂಚಯ್ಯಸ್ವಾಮಿ ಮಠಪತಿ, ಚನ್ನಮಲ್ಲಯ್ಯಸ್ವಾಮಿ, ಐ.ಎಸ್. ಹಿರೇಮಠ, ಮಲ್ಲಿಕಾರ್ಜುನ ಅದ್ವಾನಿ, ದತ್ತು ಪೂಜಾರಿ, ಪರಮೇಶ್ವರ ಬಿರಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಸಯ್ಯ ಸ್ಥಾವರಮಠ ಅಧ್ಯಕ್ಷತೆ ವಹಿಸಿದ್ದರು. ಶಿವು ದೇವತ್ಕಲ್ ನಿರೂಪಿಸಿದರು. ಹಂಪನಗೌಡ ಹಾಲಗಡ್ಲಾ, ಗುರುಲಿಂಗಪ್ಪ ಬುಕ್ಕಾ ಸಂಗೀತ ಸೇವೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.