ಯಾದಗಿರಿ ತಾಪಂಗೆ ಶೋಭಾರಾಣಿ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ ಗುರುಮಠಕಲ್ ನ.30
ಸುಮಾರು ದಿನಗಳಿಂದ ಚರ್ಚೆಯಲ್ಲಿದ ಯಾದಗಿರಿ ತಾಪಂ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆ ಶನಿವಾರ ನಡೆದು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ನ ಶೋಭಾರಾಣಿ ದೇವಿಂದ್ರಪ್ಪ ಗುತ್ತೆದಾರ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 26 ಸದಸ್ಯರ ಬಲವನ್ನು ಹೊಂದಿರುವ ತಾಪಂನಲ್ಲಿ ಕಾಂಗ್ರೆಸ್ 15 ಜನ ಸದಸ್ಯರನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲೇ ಎರಡನೇ ಅವಧಿಗೂ ಕೂಡ ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇಲ್ಲಿ 15 ಸದಸ್ಯ ಬಲವನ್ನು ಹೊಂದಿರುವ ಕಾಂಗ್ರೆಸ್ನಲ್ಲಿ, ಉಳಿದ 7 ತಿಂಗಳ ಅವಧಿಗೆ ಅಧಿಕಾರ ಹಿಡಿಯಲು ಕೈ ಪಾಳಯದಲ್ಲಿ ತೀವ್ರ ಪೈಪೋಟಿ ನಡೆಯಿತು. ಕಂದಕೂರ ತಾಪಂ ಕ್ಷೇತ್ರದ ಸದಸ್ಯೆ ರಾಧಾ ನಾಗಪ್ಪ ಹಾಗೂ ಕೋಟಗೇರಾ ತಾಪಂ ಸದಸ್ಯೆ ಶೋಭಾರಾಣಿ ದೇವಿಂದ್ರಪ್ಪ ಗುತ್ತೆದಾರ ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರು.
ಸಂಧಾನ ವಿಫಲ: ಕಾಂಗ್ರೆಸ್ನ ಇಬ್ಬರು ಸದಸ್ಯರು ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರು. ಈ ಬಗ್ಗೆ ಪಕ್ಷದ ಹೈಕಮಾಂಡ್ ಇಬ್ಬರು ಸದಸ್ಯರನ್ನು ಕರೆದು ಸಂಧಾನ ಮುಖಾಂತರವಾಗಿ ಶೊಭಾರಾಣಿ ದೇವಿಂದ್ರಪ್ಪ ಅವರಿಗೆ ನಾಮಪ್ರವನ್ನು ಹಿಂದಕ್ಕೆ ಪಡೆಯಲು ಸೂಚನೆ ನೀಡಿದರು. ಆದರೆ ಅವರು ನನಗೆ ಸುಮಾರು ಬಾರಿ ಅನ್ಯಾಯವಾಗಿದೆ. ತಮಗೆ ಸದಸ್ಯರ ಬೆಂಬಲ ಇದೆ ಎಂದು ತಿಳಿಸಿದರು. ಇದರಿಂದ ಶೋಭಾರಾಣಿ ಮಾತನ್ನು ಪುರಸ್ಕರಿಸಿದ ಪಕ್ಷದ ಹೈಕಮಾಂಡ್, ರಾಧಾ ಅವರ ನಾಮಪತ್ರ ಹಿಂಪಡೆಯಲು ಸೂಚಿಸಿತು.
ಅವಿರೋಧ ಆಯ್ಕೆ: ಪಕ್ಷದ ವರಿಷ್ಠರ ಮಾತಿನಂತೆ ರಾಧ ನಾಗಪ್ಪ, ನಾಮಪತ್ರ ವಾಪಸ್ ಪಡೆದಿದ್ದರಿಂದ ಚುನಾವಣೆ ಅಧಿಕಾರಿ, ಸಹಾಯಕ ಆಯುಕ್ತ ಬಿ.ಪಿ. ವಿಜಯ ಕಾರ್ಯ ನಿರ್ವಹಿಸಿ ಫಲಿತಾಂಶ ಘೋಷಿಸಿ ಶೋಭಾರಾಣಿ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ವಿಜಯೋತ್ಸವ: ಕಾರ್ಯಾಯದಲ್ಲಿ ಅಧ್ಯಕ್ಷರಾಗಿ ಶೋಭಾರಾಣಿ ಅವಿರೋಧ ಆಯ್ಕೆಯನ್ನು ಸಹಾಯಕ ಆಯುಕ್ತರು ಘೋಷಣೆ ಮಾಡುತ್ತಿದ್ದಂತೆ ಹೊರಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಅಚರಿಸಿದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷೆ ಶರಣಮ್ಮ ಕವಲ್ದಾರ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಶ್ರೀಲಕ್ಷ್ಮೀ ಭೀಮರಾವ್ ಚಂಡರಕಿ, ಶ್ಯಾಮಳ, ಹಂಪಣ್ಣಗೌಡ ಬೆಳಗುಂದಿ, ತಾಯಪ್ಪ ಮಾದ್ವಾರ, ಪ್ರಕಾಶ ರೆಡ್ಡಿ ನಜರಾಪುರ, ಬಸವರಾಜ ಕವಲ್ದಾರ, ಜಿಪಂ ಮಾಜಿ ಸದಸ್ಯರಾದ ಕೃಷ್ಣಾ ಚಪೇಟ್ಲಾ, ದೇವಿಂದ್ರಪ್ಪ ರಾಚನಳ್ಳಿ, ಮಾರುತಿ ಮುಂಡಾಸ, ರವಿಂದ್ರ ಮುಂಡ್ರಗಿ, ಸುಭಾಷ ಗುತ್ತೆದಾರ ಅಲ್ಲಿಪೂರ, ವಿಜಯ ಗುತ್ತೆದಾರ, ಶರಣಯ್ಯ ಕಲಾಲ್ ಗಾಜರಕೋಟ, ನಾಗಯ್ಯ ಗುತ್ತೆದಾರ ಮುಂತಾದವರು ವಿಜಯೋತ್ಸವದಲ್ಲಿ ಭಾಗವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

