ಕಾಂಗ್ರೆಸಿನದ್ದು ಒಡೆದಾಳುವ ನೀತಿ
ಗುರುಮಠಕಲ್:ಪ್ರಸ್ತುತ ದೇಶವನ್ನು ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತ ಬಂದಿದ್ದು
ಸ್ವಾತಂತ್ರ್ಯ ಪಡೆದ ನಂತರದ ದಿನಗಳಿಂದ 2014ರವರೆಗೆ ನಡೆದ 3,600 ದಂಗೆಗಳು ಕಾಂಗ್ರೆಸ್ ಮಾಡಿದ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷದವರು ಇನ್ನೂ ಕೂಡ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಹೇಳಿದ್ದಾರೆ.
ಅವರು ಬುಧವಾರ ಗುರುಮಠಕಲ್ ಮತಕ್ಷೇತ್ರದ ಬಳಿಚಕ್ರ, ಮಧ್ವಾರ, ಯಲೇರಿ ಗ್ರಾಮಗಳಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ ಈ ಭಾಗದಿಂದ ಸತತ 8 ಬಾರಿ ಶಾಸಕರಾಗಿ, ಒಂದು ಬಾರಿ ಲೋಕಸಭ ಸದಸ್ಯರಾಗಿ ಆಯ್ಕೆಯಾಗಿ ವಿವಿಧ ಸಚಿವ ಸ್ಥಾನಗಳನ್ನು ಅನುಭವಿಸಿದ ಖರ್ಗೆ ಅವರು ಗುರುಮಠಕಲ್ ಮತಕ್ಷೇತ್ರದ ಬಗ್ಗೆ ಗಮನವೇ ಹರಿಸಿಲ್ಲ. ಇಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು ಬಡತನದಿಂದ ಗುಳೆ ಹೋಗುವವರ ಸಂಖ್ಯೆ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಗುರುಮಠಕಲ್ ಮತಕ್ಷೇತ್ರದಲ್ಲಿಯೇ. 4 ದಶಕಗಳ ಕಾಲ ರಾಜಕೀಯ ನಡೆಸಲು ಆಶೀರ್ವಾದ ನೀಡಿದ ಮತದಾರರ ರುಣ ತಿರಿಸಲು ಆಗದ ಖರ್ಗೆ ಇನ್ನು ಮುಂದಿನ ದಿನಗಳಲ್ಲಿ ಏನು ಸಾಧಿಸುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಖರ್ಗೆಗೆ ಸವಾಲ್: ಗುರುಮಠಕಲ್ ಮತಕ್ಷೇತ್ರದಿಂದ ಆಯ್ಕೆಯಾಗುತ್ತ ಬಂದಿರುವ ನಿಮ್ಮ ಸಾಧನೆ ಏನು ಎನ್ನುವುದು ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೆ ತಿಳಿದಿದ್ದು ಈ ಬಗ್ಗೆ ಜನತೆಗೆ ಹೇಳುವ ಅವಶ್ಯಕತೆ ಇಲ್ಲ ಎಂದರು. ಕ್ಷೇತ್ರದಲ್ಲಿನ ಬಡರೈತರ ಮೈಮೇಲೆ ಬಟ್ಟೆಯಿಲ್ಲ, ಕಾಲಲ್ಲಿ ಚಪ್ಪಲಿ ಇಲ್ಲ. ಇದೇನಾ ನಿಮ್ಮ 40 ವರ್ಷಗಳ ಅಭಿವೃದ್ಧಿ ಎಂದ ಅವರು ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕಿದರು. ಕಾಂಗ್ರೆಸ್ ಈ ಭಾಗದಲ್ಲಿ 40 ವರ್ಷಗಳಲ್ಲಿ ಮಾಡಿರುವುದು ಜಾತಿ ರಾಜಕೀಯವೇ ಹೊರತು ಅಭಿವೃದ್ಧಿ ಕಾರ್ಯಗಳಲ್ಲ. ಇವರು ಮಾಡಿರುವುದು ಕೇವಲ ದೇಶವನ್ನು ಒಡೆದು ಆಳುವ ಕೆಲಸವೆಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೋಲಿ ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿಯವರು ಗುರುಮಠಕಲ್ನ ಶಾಸಕರಾದ ಬಾಬೂರಾವ ಚಿಂಚನಸೂರ ಅವರು ಒಬ್ಬ ಮೋಸಗಾರ. ಸಮಾಜವನ್ನು ಎಸ್ಟಿಗೆ ಸೇರಿಸುವ ಅಸೆಯನ್ನು ತೋರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಉದ್ದೇಶ ಇವರಿಗೆ ಇದ್ದ ಪಕ್ಷದಲ್ಲಿ ಬಹಳ ಹಿಂದೆಯೇ ಇದು ಆಗಬೇಕಿತ್ತು. ಆದರೆ ಚುನಾವಣೆ ಸಮೀಪಿಸಿದ ಸಂದರ್ಭದಲ್ಲಿ ಸಮಾಜದ ಹೆಸರಿನಲ್ಲಿ ಮತ ಪಡೆಯಲು ಬಂದಿರುವ ಮೋಸಗಾರ ಆತ. ಅವರ ಮಾತಿಗೆ ಸಮಾಜದ ಜನತೆ ಕಿವಿಗೊಡಬಾರದು ಎಂದರು.
ಬಿಜೆಪಿ ಮುಖಂಡರಾದ ಶಶಿಲ ನಮೋಶಿ, ವೆಂಕಟರೆಡ್ಡಿ ಮುದ್ನಾಳ, ವೆಂಕಟರಾಮರಡ್ಡಿ ವಡವಟ್, ಸೈಯದ್ ಪಾಟೇಲ್ ಸೇರಿ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

