ಸಂಹಿತೆ ಉಲ್ಲಂಘನೆ: 94 ಪ್ರಕರಣ ದಾಖಲು
ಗುಲ್ಬರ್ಗ: ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಿಂದ ಏಪ್ರಿಲ್ 8 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 94 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1784.46 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಹಾಗೂ 89 ಜನರ ವಿರುದ್ಧ ಎಫ್ಐಆರ್ ದೂರು ದಾಖಲಿಸಲಾಗಿದೆ.
ಏ.8ರಂದು ಅಬಕಾರಿ ಇಲಾಖೆಯಿಂದ 2 ಪ್ರಕರಣ ದಾಖಲಿಸಿದ್ದು, 1.78 ಲೀಟರ್ ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ 2 ಪ್ರಕರಣ, 10.98 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದಾಖಲಿಸಿದ ಒಟ್ಟು 94 ಪ್ರಕರಣಗಳ ಪೈಕಿ ಅಬಕಾರಿ ಇಲಾಖೆಯಿಂದ ದಾಖಲಿಸಿದ 78 ಪ್ರಕರಣಗಳಿಂದ 1551.66 ಲೀಟರ್ ಮದ್ಯ ಹಾಗೂ 3.60 ಕೆ.ಜಿ. ಗಾಂಜಾ, 1 ಕೆ.ಜಿ ಸಿಎಚ್ ಪೌಡರ್ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ಪೊಲೀಸ್ ಇಲಾಖೆಯಿಂದ ದಾಖಲಿಸಿದ 16 ಪ್ರಕರಣಗಳಿಂದ 233.80 ಲೀಟರ್ ಮದ್ಯ ಹಾಗೂ 1,5 ಕೆ.ಜಿ. ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಸ್ವೀಪ್ ವೀಕ್ಷಕ ಜೈನ್ ಭೇಟಿ
ಗುಲ್ಬರ್ಗ: ನಗರದ ಶೇಖ್ ರೋಜಾ ಪ್ರದೇಶದಲ್ಲಿ ಮತದಾನ ಜಾಗೃತಿಗಾಗಿ ಪ್ರದರ್ಶಿಸುತ್ತಿರುವ ಬೀದಿನಾಟಕವನ್ನು ಭಾರತ ಚುನಾವಣಾ ಆಯೋಗದ ಸ್ವೀಪ್ ವೀಕ್ಷಕ ರಾಜೀವ್ ಜೈನ್ ವೀಕ್ಷಿಸಿದರು.
ಕಲಾವಿದ ಪ್ರಭುಲಿಂಗ್ ಅಷ್ಟಗಿ ನೇತೃತ್ವದ ಲೋಹಿಯಾ ಕಲಾ ತಂಡದ ಕಲಾವಿದರು ಎಲ್ಲ ಮತದಾರರು ಎಲ್ಲ ಕೆಲಸ ಬದಿಗಿಟ್ಟು ಏ.17ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ತಪ್ಪದೆ ಮತದಾನ ಮಾಡಿ. ಓಟಿಗಾಗಿ ನೋಟು ಬೇಡ. ಯಾವುದೇ ಆಸೆ ಆಮಿಷಗಳಿಗೆ ಒಳಪಡದೇ ಮತ ಚಲಾಯಿಸಿ ಎಂಬ ಸಂದೇಶಗಳನ್ನು ಅಭಿನಯ ಮತ್ತು ಹಾಡುಗಳ ಮೂಲಕ ಹಿಂದಿ ಭಾಷೆಯಲ್ಲಿ ಜನಮನ ಮುಟ್ಟುವಂತೆ ತಲುಪಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಟಿ.ಎಚ್.ಎಂ. ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ. ರಾಧಾಕೃಷ್ಣ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅರ್ಚನಾ ಎಸ್.ಎಂ., ಗುಲ್ಬರ್ಗ ಮಹಾನಗರ ಪಾಲಿಕೆಯ ಸಮುದಾಯಿಕ ವ್ಯವಹಾರಿಕ ಅಧಿಕಾರಿ ವಿಜಯಲಕ್ಮೀ, ವಾರ್ತಾಧಿಕಾರಿ ಜಿ.ಚಂದ್ರಕಾಂತ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಮತದಾನ ಜನಜಾಗೃತಿ
ಜೇವರ್ಗಿ: ಪಟ್ಟಣದಲ್ಲಿ ಪ್ರಜಾಪ್ರಭುತ್ವದಲ್ಲಿ ಸರ್ವರು ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಪಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಜನ ಜಾಗೃತಿ ಅಭಿಯಾನ ನಡೆಸಲಾಯಿತು. ತಹಸೀಲ್ದಾರ್ ಎಂ.ಎನ್. ಚೋರಗಸ್ತಿ, ಪಪಂ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ, ರೇಣುಕಾ ಕಾಬಾ, ರಘುನಾಥ ನರಸಾಳೆ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

