ಗುಲ್ಬರ್ಗಾ

18 ರೌಡಿಗಳ ಗಡಿಪಾರು

Published On :

ಗುಲ್ಬರ್ಗ: ಲೋಕ ಸಮರ ಸುಸೂತ್ರವಾಗಿ ನಡೆಯುವಂತಾಗಲು ಅಗತ್ಯ ಬಿಗಿ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾ ಪೊಲೀಸ್ ಇದೀಗ 18 ರೌಡಿಗಳ ಗಡಿಪಾರಿಗೆ ಮುಂದಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರೌಡಿ ಪಟ್ಟಿಯಲ್ಲಿನ ಹಾಗೂ ಸಮಾಜಘಾತುಕರಾದ 18 ಮಂದಿಯನ್ನು 10 ದಿನಗಳ ಅವಧಿಗೆ ಗಡಿಪಾರು ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಅದರಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಡಾ. ಎನ್. ವಿ. ಪ್ರಸಾದ್ ಈ ಪ್ರಸ್ತಾವನೆಗೆ ಸಮ್ಮತಿಸಿದ್ದಾರೆ.
ಗಡಿಪಾರಾದ ರೌಡಿ ಜನರ ಹೆಸರು ಮತ್ತು ವಿಳಾಸ
1) ಭೀಮಶ್ಯಾ ತಂದೆ ಅಡಿವೆಪ್ಪ ಮಾಶಾಳಕರ್, ರಾಜಾಪೂರ ಗುಲ್ಬರ್ಗ
2) ನಿಂಗಪ್ಪ ತಂದೆ ಶರಣಪ್ಪ ಕಂಟನೂರ, ಗಾಂಧಿ ಚೌಕ, ಶಹಾಬಾದ್ ತಾ.  ಚಿತ್ತಾಪೂರ
3) ರಾಹುಲ್ ಅಲಿಯಾಸ್ ರಾಹುಳ್ಯಾ ತಂದೆ ಗುರಪ್ಪ ವಡ್ಡರ, ಶಿರವಾಳ, ತಾ.  ಅಫಜಲ್ಪುರ
4) ದತ್ತು ತಂದೆ ಹಣಮಂತ ಪೂಜಾರಿ ವಗ್ಗಿ,  ಹಾಗರಗಾ ಮತ್ತು ಕನಕದಾಸ ನಗರ ತಾ.  ಗುಲ್ಬರ್ಗ
5) ಇಮಾಮಸಾಬ ತಂದೆ ಅಬ್ಬಾಸ ಅಲಿ ಶೇಖ ಸಿಂಧಿ,  ಕೆಲ್ಲೂರ, ತಾ.  ಜೇವರ್ಗಿ
6) ವಿಠ್ಠಲ್ ತಂದೆ ಅಡಿವೆಪ್ಪ ನಾಟೀಕಾರ್, ಹವಳಗಾ, ತಾ.  ಅಫಜಲ್ಪುರ.
7) ಬಸವರಾಜ ತಂದೆ ಸಿದ್ದಣ್ಣ ತೊಂಚಿ ಸಾ,  ಸರ್ವೋದಯ ನಗರ ಗುಲ್ಬರ್ಗ.
8) ಸುನಿಲ ತಂದೆ ಪೀರಪ್ಪ ಬಟಗೇರಿ,  ದೇವಲಗಾಣಗಾಪುರ, ತಾ.  ಅಫಜಲ್ಪುರ,  
9) ಅಶೋಕ ತಂದೆ ವಿಠ್ಠಲರಾವ ಸಿಂಗೆ, ಅಶೋಕ ನಗರ ಗುಲ್ಬರ್ಗ.
10) ತ್ರಿಪುಂಡ್ರಯ್ಯ ತಂದೆ ಸಿದ್ರಾಮಯ್ಯ ಸ್ವಾಮಿ,  ಹೊನಗುಂಟಾ, ತಾ.  ಚಿತ್ತಾಪುರ
11) ಪಂಡಿತ ತಂದೆ ಭೀಮಶ್ಯಾ ಸೋಲಂಕರ,  ಬೆಣ್ಣೆಶಿರೂರ, ತಾ.  ಅಳಂದ
12) ಸಿದ್ದಾರೂಢ ಅಲಿಯಾಸ್ ಸಿದ್ದರಾಮ ತಂದೆ ಈರಣ್ಣ ಪೊಲೀಸ್ ಪಾಟೀಲ್, ಧುತ್ತರಗಾಂವ, ತಾ. ಅಳಂದ
13) ರಾಜಕುಮಾರ ತಂದೆ ಶರಣಪ್ಪ ಜಮಾದಾರ, ಧುತ್ತರಗಾಂವ, ತಾ.  ಅಳಂದ.
14) ಸಂತೋಷ ಅಲಿಯಾಸ್ ಮುತ್ತುರಾಜ ತಂದೆ ಮೈಲಾರಿ ಶೆಳ್ಳಗಿ, ಭೂಪಾಲ ತೆಗನೂರ
15) ಭೀಮಾಶಂಕರ ತಂದೆ ಕಾಶಿನಾಥ ಚಿಕ್ಕೆಗೌಡ,  ಕಮಲಾಪೂರ, ತಾ.  ಜಿ.  ಗುಲ್ಬರ್ಗ
16) ಹರೀಶ ಅಲಿಯಾಸ್ ಹರ್ಷವರ್ಧನ ತಂದೆ ಮಲ್ಲೇಶಪ್ಪ ತಳವಾರ, ಶಹಬಾದ ರೋಡ್,  ಶಕ್ತಿನಗರ ತಾ ಗುಲ್ಬರ್ಗ.
17) ಆನಂದ ತಂದೆ ದತ್ತಾತ್ರೇಯ ಆಲಮೇಲಕರ್, ಅಫಜಲ್ಪುರ ಅಫಜಲ್ಪುರ ಗುಲ್ಬರ್ಗ, ಈಗಿನ ವಾಸ- ಫ್ಲಾಟ್ ನಂ. 100 ಜಿಡಿಎ ಕಾಲೋನಿ ಗುಲ್ಬರ್ಗ.
18) ಸಂತೋಷ ತಂದೆ ವಿಠ್ಠಲರಾವ ಸಿಂಗೆ ಸಾ ಅಶೋಕ ನಗರ ತಾ ಜಿ- ಗುಲ್ಬರ್ಗ.
ಮೇಲ್ಕಂಡ ಈ ರೌಡಿಗಳನ್ನು ಏ.10ರಿಂದ ಏ. 20ರವರೆಗೆ ಜಿಲ್ಲಾಧಿಕಾರಿಯವರು ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠರು,  18 ಜನ ರೌಡಿ ಪಟ್ಟಿಯಲ್ಲಿರುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.