ಮತ ಬರಹ ಇಂದು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.16
ಇಂದು ಏ.17ರ ಗುರುವಾರ, ಲೋಕಸಭೆ ಚುನಾವಣೆ ಮತದಾನ ದಿನ. ಬಿಸಿಲೂರಿನುದ್ದಗಲಕ್ಕೂ ಹರಡಿರುವ 17 ಲಕ್ಷಕ್ಕೂ ಅಧಿಕ ಮತದಾರರು ಕಣದಲ್ಲಿರುವ ವಿವಿಧ ಪಕ್ಷಗಳ ಹುರಿಯಾಳುಗಳ ಹಣೆಬರಹ ಬರೆಯಲು ಸಜ್ಜಾಗಿದ್ದಾರೆ.
ಮತದಾರ ಪ್ರಭುವಿನ ಆಶೀರ್ವಾದ ಪಡೆಯಲು ಅಖಾಡದಲ್ಲಿರುವ ಎಲ್ಲ ಉಮೇದುವಾರರು ಕಳೆದೊಂದು ತಿಂಗಳ ಕಾಲ ಹರಸಾಹಸ ಮಾಡಿದ್ದಾರೆ. ಹತ್ತು ಹಲವು ಸಮಸ್ಯೆಗಳ ಕಾರ್ಮೋಡದ ನಡುವೆಯೇ ಪರಿಹಾರದ ಆಶಾಕಿರಣದ ನಿರೀಕ್ಷೆಯೊಂದಿಗೆ ಮತದಾರ ಮತಗಟ್ಟೆಗೆ ತೆರಳಿ ಅಭ್ಯರ್ಥಿಗಳ ಹಣೆಬರಹದ ಮೇಲೆ ಮುದ್ರೆ ಒತ್ತಲಿದ್ದಾನೆ.
ಹೈ-ಕ ಕೇಂದ್ರವಾಗಿರುವ ಗುಲ್ಬರ್ಗ ಕಳೆದೈವತ್ತು ವರ್ಷದಿಂದ ಎಲ್ಲಿತ್ತೋ ಅಲ್ಲೇ ಇದೆ. ಪ್ರಾದೇಶಿಕ ಅಸಮಾನತೆ ನೋವು ವಾಸಿಯಾಗಿಲ್ಲ, ಸಾವಿರಾರು ಕೋಟಿ ರುಪಾಯಿ ಅನುದಾನದ ಹೊಳೆ ಉಕ್ಕಿ ಬಂದರೂ ಸಮಸ್ಯೆಗಳ ಕೊಳೆ ಮಾತ್ರ ತೊಳೆದು ಹೋಗಿಲ್ಲ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ... ಸೇರಿದಂತಹ ಬದುಕಿನ ಎಲ್ಲಾ ರಂಗಗಳಲ್ಲಿಯೂ ಈ ಭಾಗ ಹಿಂದೆ ಎಂಬ ನೋವಿನಲ್ಲೇ ಮತದಾರ ಈ ಬಾರಿಯ ಸಂಸತ್ ಸದಸ್ಯನ ಆಯ್ಕೆಗೆ ಮುಂದಾಗಿದ್ದಾನೆ. ಕಲಂ 371(ಜೆ) ಅನುಷ್ಠಾನಗೊಂಡ ನಂತರ ನಡೆಯುತ್ತಿರುವ ಚೊಚ್ಚಲ ಸಂಸತ್ ಚುನಾವಣೆ ಇದು. ಹೈ-ಕ ಪ್ರತ್ಯೇಕ ಸಂವಿಧಾನ ಎಂದೇ ಬಿಂಬಿತವಾಗಿರುವ ಕಲಂ 371 ಜಾರಿಗೆ ತಂದ ಕೀರ್ತಿ ಕಿರೀಟ ಎಲ್ಲಾ ಪ್ರಮುಖ ಪಕ್ಷಗಳವರು ತಮ್ಮ ಶಿರಕ್ಕೆ ಮುಡಿಸಿಕೊಂಡು ಮೆರೆಯುತ್ತಿರುವ ಸಂದರ್ಭದಲ್ಲಿ ಮತದಾರಪ್ರಭು ತನಗೊದಗಿರುವ ಈ ಸೌಲಭ್ಯಕ್ಕಾಗಿ ಯಾರ ಕೈ ಕುಲುಕುವನೋ ಎಂಬುದೇ ಕುತೂಹಲಕಾರಿ. ಈ ಬಾರಿ ಹೊಸತಾಗಿ 59,307 ಮತದಾರರು ಮತಯಾದಿಗೆ ಸೇರ್ಪಡೆಗೊಂಡಿದ್ದರಿಂದ ಇಲ್ಲೀಗ ರಾಜಕೀಯ ರಂಗೇರಿದೆ.
17,21,666 ಒಟ್ಟು ಮತದಾರರು
ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಹೊಸದಾಗಿ 59,307 ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಇವರಲ್ಲಿ 29,911 ಪುರುಷರು, 29,171 ಮಹಿಳೆಯರು, 225 ಇತರ ಮತದಾರರು ಸೇರಿದ್ದಾರೆ. ಇದರಿಂದ ಮಾ.26ರ ಅನ್ವಯ 8,78,083 ಪುರುಷರು ಮತ್ತು 8,43,358 ಮಹಿಳೆಯರು ಹಾಗೂ 225 ಇತರರು ಸೇರಿದಂತೆ ಒಟ್ಟು 17,21,666 ಮತದಾರರಿದ್ದಾರೆ.
ಮೊಬೈಲ್ ಫೋನ್, ಕ್ಯಾಮೆರಾ ನಿಷೇಧ
ಮತಗಟ್ಟೆಗಳಿಗೆ ತೆರಳುವ ಮತದಾರರು ಮೊಬೈಲ್ ಫೋನ್ಗಳನ್ನಾಗಲೀ ಅಥವಾ ಕ್ಯಾಮೆರಾಗಳನ್ನಾಗಲೀ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಂಡ ಸಿಬ್ಬಂದಿ ಮೊಬೈಲ್ ಬಳಸಲು ಮಾತ್ರ ಅವಕಾಶವಿದ್ದು, ಅಭ್ಯರ್ಥಿ ಪರ ಚುನಾವಣಾ ಏಜೆಂಟ್ರಾಗಲೀ, ಮತದಾರರಾಗಲೀ ಮೊಬೈಲ್ ಬಳಕೆ ಮಾಡುವಂತಿಲ್ಲ. ಮತಗಟ್ಟೆ ಒಳಗೆ ಕ್ಯಾಮೆರಾದಿಂದ ಫೋಟೋ ತೆಗೆಯುವಂತಿಲ್ಲ. ಮೊಬೈಲ್- ಕ್ಯಾಮೆರಾಗಳಿದ್ದಲ್ಲಿ ಮತಗಟ್ಟೆ ಪ್ರವೇಶದಲ್ಲೇ ರಕ್ಷಣಾ ಸಿಬ್ಬಂದಿ ಅವುಗಳನ್ನು ಜಪ್ತಿ ಮಾಡಲಿದ್ದಾರೆ.
2,158- ಮತಗಟ್ಟೆ ಸ್ಥಾಪನೆ(ಚಿಂಚೋಳಿ, ಆಳಂದ ಸೇರಿ)
1,353- ಅತೀಸೂಕ್ಷ್ಮ ಮತಗಟ್ಟೆಗಳು, 3- ಕೆಎಸ್ಆರ್ಪಿ ತುಕಡಿ, 26- ಡಿಎಆರ್ ಕ್ಷಿಪ್ರ ಕಾರ್ಯಪಡೆ, 16,000- ಪೊಲೀಸ್ ಬಲ
10,096- ಒಟ್ಟು ಚುನಾವಣಾ ಸಿಬ್ಬಂದಿ, 3,152- ಮಹಿಳಾ ಚುನಾವಣಾ ಸಿಬ್ಬಂದಿ, 104 ಮತಗಟ್ಟೆಗಳು- ಪಿಆರ್ಒ ಸೇರಿದಂತೆ ಚುನಾವಣಾ ಸಿಬ್ಬಂದಿ ಎಲ್ಲರೂ ಮಹಿಳೆಯರೇ. ಪರ್ದಾ ನಶೀನ್ ಮತಗಟ್ಟೆ- ಬುರ್ಖಾಧಾರಿ ಮತದಾರರು ಬಂದಲ್ಲಿ ಪರಿಶೀಲನೆಗೆ ಮಹಿಳಾ ಸಿಬ್ಬಂದಿ. 27- ಫ್ಲೈಯಿಂಗ್ ಸ್ಕ್ವಾಡ್(ಪ್ರತಿ ಅಸೆಂಬ್ಲಿಗೆ 3 ತಂಡ), 169- ಸೆಕ್ಟೋರಲ್ ಆಫೀಸರ್ಸ್ ಟೀಂ, 9- ವಿಡಿಯೋ ಕಾವಲು ತಂಡ, 24- ಸ್ಟ್ಯಾಟಿಕ್ ಸರ್ವೇಲನ್ಸ್ ಟೀಂ.
ಚುನಾವಣಾ ಕಾರ್ಯಕ್ಕೆ ಸಾರಿಗೆ ವ್ಯವಸ್ಥೆ
232- ಬಸ್ಗಳು, 66- ಮ್ಯಾಕ್ಸಿಕ್ಯಾಬ್, 349- ಕ್ರೂಸರ್, 239- ಜೀಪ್
09- ಮಿನಿ ಬಸ್
ತುರ್ತು ಸಂಪರ್ಕಕ್ಕೆ ದೂರವಾಣಿ
ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ- 94483 34080
ಚ ಅಫಜಲ್ಪುರ ಮೊಹಮ್ಮದ್ ಯುಸೂಫ್ 94805 48232
ಚ ಜೇವರ್ಗಿ ಜೀಯಾವುಲ್ಲಾ 98455 70055
ಚ ಗುರುಮಠಕಲ್ ಶಿವಾನಂದ ಕರಾಳೆ 89041 24900
ಚ ಚಿತ್ತಾಪುರ ದೊಡ್ಡಬಸವರಾಜ 94480 01887
ಚ ಸೇಡಂ ಭೀಮಾಶಂಕರ 94807 80674
ಚ ಗುಲ್ಬರ್ಗ(ಗ್ರಾ) ಅಹ್ಮದ್ ಇಸಾಮದಿ 93424 30467
ಚ ಗುಲ್ಬರ್ಗ(ದ) ರಾಚಪ್ಪ 94800 56951
ಚ ಗುಲ್ಬರ್ಗ(ಉ) ಎಸ್.ಬಿ. ಕಟ್ಟಿಮನಿ 94480 21425
ಚ ಚಿಂಚೋಳಿ ಎಂ. ಮಂಜುನಾಥ 94489 99235
ಚ ಆಳಂದ ಚಿದಾನಂದ 94496 27665
ಮತದಾರರ ವಿವರ(ಕ್ಷೇತ್ರವಾರು)
ಕ್ಷೇತ್ರ ಒಟ್ಟು ಪುರುಷ ಮಹಿಳೆ ಇತರರು
ಚ ಅಫಜಲ್ಪುರ 2,00,577 1,04,315 96,253 19
ಚ ಜೇವರ್ಗಿ 2,07,952 1,05,502 1,02,434 16
ಚ ಗುರುಮಠಕಲ್ 2,13,293 1,06,879 1,06,402 12
ಚ ಚಿತ್ತಾಪುರ 2,05,038 1,04,028 1,00,987 23
ಚ ಸೇಡಂ 1,96,097 98,160 97,919 18
ಚ ಗುಲ್ಬರ್ಗ ಗ್ರಾ. 2,24,205 1,16,516 1,07,675 14
ಚ ಗುಲ್ಬರ್ಗ ದ. 2,35,455 1,19,183 1,16,208 64
ಚ ಗುಲ್ಬರ್ಗ ಉ. 2,39,049 1,23,500 1,15,480 69
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

